Kasaragod ಅಪರಾಧ ಸುದ್ದಿಗಳು


Team Udayavani, Oct 22, 2024, 11:00 PM IST

kas-a

ಎಂಡಿಎಂಎ ಸಹಿತ ಬಂಧನ
ಬದಿಯಡ್ಕ: ಎಂಡಿಎಂಎ ಸಹಿತ ನೆಲ್ಲಿಕಟ್ಟೆ ಅಮೂಸ್‌ ನಗರದ ಪಾಂಡ್‌ ಸಿದ್ದಿಕ್‌ ಯಾನೆೆ ಸಿದ್ದಿಕ್‌(37)ನನ್ನು ಎರ್ಪಕಟ್ಟೆಯಿಂದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಂದ 0.37 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.

ತಲೆಮರೆಸಿಕೊಂಡಿದ್ದ ಮೂವರ ಬಂಧನ
ಕುಂಬಳೆ: ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿರುವ ಪೆರುವಾಡ್‌ ಕಡಪ್ಪುರದ ಮೊಹಮ್ಮದ್‌ ಅಲಿ, ಕಾಸರಗೋಡು ತಳಂಗರೆಯ ಅಚ್ಚು ಯಾನೆ ಅಬ್ದುಲ್‌ ಹಾರಿಫ್‌ ಹಾಗೂ ಧರ್ಮತ್ತಡ್ಕದ ಮೊಹಮ್ಮದ್‌ ಅಶ್ರಫ್‌ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಇರಿತ ಪ್ರಕರಣ : ಬಂಧನ
ಕಾಸರಗೋಡು: ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬಂದಿ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉದುಮ ಪಾಕ್ಯಾರ್‌ ನಿವಾಸಿ ಮುಹಮ್ಮದ್‌ ಜಿಸ್ವಾನ್‌(24)ನನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಆಸ್ಪತ್ರೆಯ ಎಂ.ಆರ್‌.ಐ ಸ್ಕ್ಯಾನಿಂಗ್‌ ಟೆಕ್ನಿಕಲ್‌ ಸಿಬ್ಬಂದಿ ಉಳಿಯತ್ತಡ್ಕ ಎಸ್‌.ಪಿ. ನಗರದ ಅಬ್ದುಲ್‌ ರಜಾಕ್‌(38) ಅವರಿಗೆ ಇರಿದು ಗಾಯಗೊಳಿಸಲಾಗಿತ್ತು.

ನಾಪತ್ತೆಯಾದ ಮಹಿಳೆ ಪತ್ತೆ
ಕುಂಬಳೆ: ನಾಪತ್ತೆಯಾಗಿದ್ದ ಕಯ್ನಾರು ಕುಡಾಲುಮೇರ್ಕಳ ನಿವಾಸಿ ರಾಬಿಯಾ ಮಂಜಿಲ್‌ನ ಫಾತಿಮತ್‌ ರಮ್ಲಾ(29) ಅವರನ್ನು ಉಪ್ಪಳ ರೈಲು ನಿಲ್ದಾಣದಿಂದ ಪತ್ತೆಹಚ್ಚಲಾಯಿತು. ಅ.18 ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಸಂಬಂಧಿಕರೊಂದಿಗೆ ಕಳುಹಿಸಿಕೊಡಲಾಯಿತು.

ಭಜನಾ ಮಂದಿರ, ಇಗರ್ಜಿಯಿಂದ ಕಳವು: ತೀವ್ರ ತನಿಖೆ
ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನ ಮಂದಿರ ಹಾಗೂ ವರ್ಕಾಡಿಯ ಇಗರ್ಜಿಯ ಕಾಣಿಕೆ ಹುಂಡಿಗಳಿಂದ ಹಣ ಕಳವು ಮಾಡಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಎರಡೂ ಕಳವು ಪ್ರಕರಣದಲ್ಲಿ ಒಂದೇ ತಂಡ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಲೈಂಗಿಕ ಕಿರುಕುಳ : ಪತಿ, ಅತ್ತೆ ವಿರುದ್ಧ ಕೇಸು ದಾಖಲು
ಮುಳ್ಳೇರಿಯ: ನಿರಂತರ ಲೈಂಗಿಕ ಕಿರುಕುಳ ಸಂಬಂಧ ಪತಿ ಹಾಗು ಅತ್ತೆಯ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. 2024 ಜೂನ್‌ 6 ರಂದು ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಯುವತಿಯ ಜತೆಗೆ ಕರ್ನಾಟಕ ವಿಟ್ಲ ನಿವಾಸಿಯ ವಿವಾಹವಾಗಿತ್ತು. ಈ ಸಂದರ್ಭದಲ್ಲಿ 10 ಪವನ್‌ ಚಿನ್ನಾಭರಣ ನೀಡಲಾಗಿತ್ತು. ಮನೆಯೊಳಗೆ ಕೂಡಿ ಹಾಕಿ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಸು ದಾಖಲಿಸಲಾಗಿದೆ.

ಟಾಪ್ ನ್ಯೂಸ್

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ

1KH-HOSPITAL

Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್‌ ಚಿಕಿತ್ಸೆ

CHowta

Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ

RSS-1

Organaisation: ಅಮೆರಿಕದಲ್ಲಿ ಆರೆಸ್ಸೆಸ್‌ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್‌ ರೈ

M.Bhandary

Costal: ಡ್ರಗ್ಸ್‌ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್‌ಸಿ ಮಂಜುನಾಥ ಭಂಡಾರಿ

Mangaluru-VV

Mangaluru: ಸರಕಾರಿ ಕಾಲೇಜಿನ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ಸಂಕಷ್ಟ

money

Madikeri: ಹಣ ನೀಡದೆ ವಂಚನೆ: ಖಾಸಗಿ ಸಂಸ್ಥೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

money

Madikeri: ಹಣ ನೀಡದೆ ವಂಚನೆ: ಖಾಸಗಿ ಸಂಸ್ಥೆ ವಿರುದ್ಧ ದೂರು

red-Corner

Kumbale: ಕೊಲ್ಲಿಗೆ ಪರಾರಿಯಾದ 6 ಮಂದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌

elephent-Madiker

Elephant: ಕುಶಾಲನಗರ ವ್ಯಾಪ್ತಿಯಲ್ಲಿ ಕಾಡಾನೆ ಸಂಚಾರ

Madikeri: ಕಾಫಿ ತೋಟದಲ್ಲಿ ಗಾಂಜಾ ಬೆಳೆೆದ ಆರೋಪಿಯ ಬಂಧನ

Madikeri: ಕಾಫಿ ತೋಟದಲ್ಲಿ ಗಾಂಜಾ ಬೆಳೆೆದ ಆರೋಪಿಯ ಬಂಧನ

Fraud: ಉದ್ಯೋಗ ಭರವಸೆ ನೀಡಿ ವಂಚನೆ; ಶಿಕ್ಷಕಿ ವಿರುದ್ಧ ಇನ್ನೆರಡು ದೂರು

Fraud: ಉದ್ಯೋಗ ಭರವಸೆ ನೀಡಿ ವಂಚನೆ; ಶಿಕ್ಷಕಿ ವಿರುದ್ಧ ಇನ್ನೆರಡು ದೂರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ

1KH-HOSPITAL

Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್‌ ಚಿಕಿತ್ಸೆ

CHowta

Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ

RSS-1

Organaisation: ಅಮೆರಿಕದಲ್ಲಿ ಆರೆಸ್ಸೆಸ್‌ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್‌ ರೈ

M.Bhandary

Costal: ಡ್ರಗ್ಸ್‌ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್‌ಸಿ ಮಂಜುನಾಥ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.