Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ
Team Udayavani, Oct 22, 2024, 9:40 PM IST
ವಿಜಯಪುರ: ನಗರದಲ್ಲಿ ಎರಡು ದಿನಗಳ ಹಿಂದೆ ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಕೆಳಗಡೆ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಘಟನೆಯ ಕೊನೆ ಕ್ಷಣಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಇದರ ದೃಶ್ಯಗಳು ನೋಡುಗರನ್ನು ಬೆಚ್ಚಿ ಬೀಳುಸುವಂತಿವೆ.
ಇಲ್ಲಿನ ನವಭಾಗ್ ರಸ್ತೆಯಲ್ಲಿರುವ ಫಿಶ್ ಟನಲ್ ಎಕ್ಸ್ಪೋದಲ್ಲಿ ಅಕ್ಟೋಬರ್ 20ರ ಸಂಜೆ ಸಂಭವಿಸಿದ ಈ ಅವಘಡದಲ್ಲಿ ನಿಖಿತಾ ಅರವಿಂದ ಬಿರಾದಾರ (21) ಎಂಬ ಯುವತಿ ಮೃತಪಟ್ಟಿದ್ದರು. ನಿಖಿತಾ ಹಾಗೂ ಮತ್ತಿಬ್ಬರು ಗೆಳೆಯತಿಯರು ಸೇರಿ ತಲೆ ಕೆಳಗಾಗಿ ತೂಗಾಡಿಸುವ ರೇಂಜರ್ ಸ್ವಿಂಗ್ ತೊಟ್ಟಿಲಿನಲ್ಲಿ ಕುಳಿತು ಆಟವಾಡುತ್ತಿದ್ದರು. ಇದೀಗ ಯುವತಿಯ ಪೋಷಕರ ಮೊಬೈಲ್ ನಲ್ಲಿ ಅಂದಿನ ಘಟನೆಯ ಕೊನೆ ಕ್ಷಣಗಳು ಸೆರೆಯಾಗಿರುವುದು ಬೆಳಕಿಗೆ ಬಂದಿದೆ.
ತೊಟ್ಟಿಲಿನಲ್ಲಿ ಕುಳಿತಿದ್ದಾಗ ನಿಖಿತಾ ಅವರಿಗೆ ಹಾಕಿದ್ದ ಸೇಫ್ಟಿ ಬೆಲ್ಟ್ ಸಡಿಲಗೊಂಡಿದೆ. ಆಗ ತೊಟ್ಟಿಲು ತಲೆ ಕೆಳಗೆ, ಮೇಲೆ ಮಾಡಿ ತೂಗುತ್ತಿರುವವಾಗಲೇ ಭಯದಿಂದ ಚೀರಾಟ ಮಾಡಿದ್ದಾರೆ. ಈ ವೇಳೆ, ನಿಖಿತಾ ತಾಯಿ ಗೀತಾ ಕೂಡ ರೇಂಜರ್ ಸ್ವಿಂಗ್ ಯಂತ್ರ ನಿಲ್ಲಿಸುವಂತೆ ಆಪರೇಟರ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ಆದರೂ, ಯಂತ್ರವನ್ನು ಆಪರೇಟರ್ ನಿಲ್ಲಿಸಿಲ್ಲ. ಇದರಿಂದ ನಿಖಿತಾ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಫಿಶ್ ಟನಲ್ ಎಕ್ಸ್ಪೋಗೆ ಬಂದಿದ್ದ ಜನರು ಸಹ ಓಡಿ ಬಂದಿರುವ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿವೆ.
ಆದರೆ, ಕೆಳಗಡೆ ಬಿದ್ದ ರಭಸಕ್ಕೆ ನಿಖಿತಾ ಅವರ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದೆ. ನಂತರದಲ್ಲಿ ಪೋಷಕರೇ ಆಟೋದಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ನಿಖಿತಾ ಕೊನೆಯುಸಿರೆಳೆದಿದ್ದರು. ಕಳಪೆ ಸೇಫ್ಟಿ ಬೆಲ್ಟ್ ಕಾರಣದಿಂದಲೇ ಈ ದುರಂತ ನಡೆದಿದೆ ಎಂದು ಆರೋಪಿಸಲಾಗಿದೆ.
ಇಬ್ಬರು ಬಂಧನ: ಈ ಘಟನೆ ಸಂಬಂಧ ಫಿಶ್ ಟನಲ್ ಎಕ್ಸ್ಪೋ ಮ್ಯಾನೇಜನ್, ಆಪರೇಟರ್ಸ್ ಹಾಗೂ ಇತರರ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆಪರೇಟರ್ ಮತ್ತು ಕ್ಯಾಶಿಯರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಮ್ಯಾನೇಜರ್ ರಮೇಶ ಬಾಬು ಎಂಬಾತನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.