PKL 11: ಬುಲ್ಸ್ ಗೆ ಹ್ಯಾಟ್ರಿಕ್ ಸೋಲು
Team Udayavani, Oct 22, 2024, 10:35 PM IST
ಹೈದರಾಬಾದ್: ಬೆಂಗಳೂರು ಬುಲ್ಸ್ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಸಿಲುಕಿದೆ. ಮಂಗಳವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧಾಸ್ ಕೈಯಲ್ಲಿ 36-57 ಅಂತರದಿಂದ ಮುಗ್ಗರಿಸಿತು.
ನಾಯಕ ಸುರೇಂದರ್ ಗಿಲ್ ಸರ್ವಾಧಿಕ 17 ಅಂಕ, ಆಲ್ರೌಂಡರ್ ಭರತ್ 14 ಅಂಕ ಗಳಿಸಿ ಯೋಧಾಸ್ಗೆ ಭರ್ಜರಿ ಮೇಲುಗೈ ಒದಗಿಸಿದರು. ಬುಲ್ಸ್ ಪರ ನಾಯಕ ಪದೀìಪ್ ನರ್ವಾಲ್ ಆಟ ಅಮೋಘ ಮಟ್ಟದಲ್ಲಿತ್ತು. ಅವರು 16 ಅಂಕ ಗಳಿಸಿ ಮಿಂಚಿದರು. ರೈಡರ್ಗಳಾದ ಜತಿನ್ 9, ಅಜಿಂಕ್ಯ ಪವಾರ್ 5 ಅಂಕ ಗಳಿಸಿದರು.
ಜೈಪುರ್ ಪ್ರಚಂಡ ಜಯ
ದಿನದ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ 52-22 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು. ಇದರೊಂದಿಗೆ ಜೈಪುರ್ ಎರಡೂ ಪಂದ್ಯಗಳನ್ನು ಜಯಿಸಿತು.
ನಾಯಕ ಅರ್ಜುನ್ ದೇಶ್ವಾಲ್ ಸರ್ವಾಧಿಕ 19 ರೈಡಿಂಗ್ ಅಂಕಗಳ ಮೂಲಕ ಜೈಪುರ್ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಮತ್ತೋರ್ವ ರೈಡರ್ ಅಭಿಜಿತ್ ಮಲಿಕ್ 8 ಅಂಕ ತಂದಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaladevi Temple: ಹೈಕೋರ್ಟ್ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ
Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ
Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ
Organaisation: ಅಮೆರಿಕದಲ್ಲಿ ಆರೆಸ್ಸೆಸ್ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್ ರೈ
Costal: ಡ್ರಗ್ಸ್ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್ಸಿ ಮಂಜುನಾಥ ಭಂಡಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.