![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 22, 2024, 11:24 PM IST
ಹೊಸದಿಲ್ಲಿ: ಬೆಂಗಳೂರು- ಜೆಡ್ಡಾ ವಿಮಾನ ಸೇರಿದಂತೆ ದೇಶದಲ್ಲಿ ಒಟ್ಟು 50 ವಿಮಾನಗಳಿಗೆ ಮಂಗಳವಾರ ದಿಂದ ಬುಧವಾರದ ಅವಧಿಯಲ್ಲಿ ಹುಸಿಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದರಿಂದಾಗಿ ಸೋಮ ವಾರದ ಬಳಿಕ ಹುಸಿ ಬೆದರಿಕೆ ಕರೆಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. 1 ವಾರದಲ್ಲಿ ಇಂಥ ಪ್ರಕರಣಗಳ ಸಂಖ್ಯೆ 170ಕ್ಕೆ ಏರಿಕೆಯಾಗಿದ್ದು, ಹುಸಿಬಾಂಬ್ ಬೆದರಿಕೆಯಿಂದಾಗಿ 9 ದಿನದಲ್ಲಿ ವಿಮಾನಯಾನ ಸಂಸ್ಥೆಗಳಿಗೆ 600 ಕೋಟಿ ರೂ. ನಷ್ಟವಾಗಿದೆ.
ಏರ್ ಇಂಡಿಯಾ, ಇಂಡಿಗೋದ ತಲಾ 13 ವಿಮಾನಗಳು, ಆಕಾಸ ಏರ್‌ನ 12, ವಿಸ್ತಾರ ವಿಮಾನಯಾನದ 11 ವಿಮಾನಗಳಿಗೆ ಮಂಗಳವಾರ ಬೆದರಿಕೆ ಕರೆಗಳು ಬಂದಿವೆ. ಸೋಮವಾರ ರಾತ್ರಿಯೂ ಈ ಮೂರು ಸಂಸ್ಥೆಗಳ ತಲಾ 10 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಇಂಡಿಗೋದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಬೆಂಗಳೂರು- ಜೆಡ್ಡಾ ವಿಮಾನವನ್ನು ದೋಹಾಗೆ ಮಾರ್ಗ ಬದಲಿಸಲಾಗಿದೆ. ಜತೆಗೆ ಕಲ್ಲಿಕೋಟೆ-ಜೆಡ್ಡಾ, ದಿಲ್ಲಿ-ಜೆಡ್ಡಾ ವಿಮಾನ ಗಳನ್ನೂ ರಿಯಾದ್ ಮತ್ತು ಮದೀನಾಗೆ ತೆರಳುವಂತೆ ಸೂಚಿಸಲಾಗಿತ್ತು.
ವಿಸ್ತಾರ ವಿಮಾನಯಾನ ಸಂಸ್ಥೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದ್ದು, ಸಂಸ್ಥೆಯು ತತ್‌ಕ್ಷಣವೇ ಸೂಕ್ತ ಕ್ರಮಗಳನ್ನು ಅನುಸರಿಸಿ, ಆಡಳಿತಕ್ಕೂ ಈ ಬಗ್ಗೆ ಸೂಚನೆ ನೀಡಿದ್ದಾಗಿ ಹೇಳಿಕೊಂಡಿದೆ. ಈ ಪ್ರಕರಣಗಳಿಂದ ಆಗಿರುವ ನಷ್ಟದ ಬಗ್ಗೆ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.