Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!


Team Udayavani, Oct 23, 2024, 6:24 AM IST

Prime Minister Modi preached peace mantra to Putin again!

ಕಜಾನ್‌: ರಷ್ಯಾ-ಉಕ್ರೇನ್‌ ಯುದ್ಧ ಶಾಂತಿಯುತ ವಾಗಿ ಬಗೆಹರಿಯಬೇಕು ಇದಕ್ಕಾಗಿ ಸಾಧ್ಯವಾಗುವ ಎಲ್ಲ ರೀತಿಯ ಸಹಕಾರ ನೀಡಲು ನಾವು ಬದ್ಧ ಎಂದು ರ‌ಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ಗೆ ಮತ್ತೆ ಪ್ರಧಾನಿ ಮೋದಿ ಮಂಗಳವಾರ ಶಾಂತಿ ಮಂತ್ರ ಬೋಧಿಸಿದ್ದಾರೆ.

ಬ್ರಿಕ್ಸ್‌ 16ನೇ ಶೃಂಗಸಭೆ ಹಿನ್ನೆಲೆಯಲ್ಲಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿರುವ ಅವರು, ಪುತಿನ್‌ ಜತೆಗೆ  ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿ “ಕಳೆದ 3 ತಿಂಗಳಲ್ಲಿ 2ನೇ ಬಾರಿ ರಷ್ಯಾಗೆ ಭೇಟಿ ನೀಡಿದ್ದೇನೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂಬ ನಮ್ಮ ನಿಲುವನ್ನು ಮತ್ತೆ ಪ್ರತಿಪಾದಿಸುತ್ತೇನೆ’ ಎಂದರು.  ರಷ್ಯಾ-ಉಕ್ರೇನ್‌ ನಡುವೆ ಶಾಂತಿ, ಸ್ಥಿರತೆ ತರಲು ಅಗತ್ಯವಿರುವ ಸಹಕಾರ ನೀಡಲು ನಾವು ಬದ್ಧ. ನಮ್ಮ ಪ್ರಯತ್ನ ಮಾನವೀಯತೆಯ ಪರವಾಗಿ ಇರಲಿದೆ’ ಎಂದಿದ್ದಾರೆ. ಇದೇ ವೇಳೆ ರಷ್ಯಾಗೆ ಆಗಮಿಸಿದ್ದಕ್ಕೆ ಮೋದಿಗೆ ಪುಟಿನ್‌ ಧನ್ಯವಾದ ಹೇಳಿದ್ದಾರೆ. ಕಜಾನ್‌ನಲ್ಲಿ ಭಾರತದ ರಾಯಭಾರಿ ಕಚೇರಿ ತೆರೆಯುವ ಪ್ರಸ್ತಾವ‌ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಡಿ.12ರಂದು ದಿಲ್ಲಿಯಲ್ಲಿ ಉಭಯ ಸರಕಾರಗಳ ಸಹಕಾರ ವೃದ್ಧಿ ಸಭೆ ಯು 2 ರಾಷ್ಟ್ರಕ್ಕೆ ಸಹಕಾರಿ ಎಂದು ಪುತಿನ್‌ ಹೇಳಿದ್ದಾರೆ.

ಹರೇ ರಾಮ, ಹರೇ ಕೃಷ್ಣ ಘೋಷಣೆ

ಕಜಾನ್‌ಗೆ ಪ್ರಧಾನಿ ಆಗಮಿಸುತ್ತಿದ್ದಂತೆಯೇ ರಷ್ಯಾದಲ್ಲಿ ಭಾರತೀಯ ಸಮುದಾಯದ ಸದಸ್ಯರು ಹಾಗೂ ಇಸ್ಕಾನ್‌ ಅನುಯಾಯಿಗಳು “ಹರೇ ರಾಮ, ಹರೇ ಕೃಷ್ಣ ಎಂಬ ಘೋಷಣೆ ಗಳನ್ನು ಕೂಗುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ.

ಇಂದು ಚೀನ ಅಧ್ಯಕ್ಷ ,ಪ್ರಧಾನಿ ಮೋದಿ ಭೇಟಿ

ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗಲ್ವಾನ್‌ನಲ್ಲಿ ಪರಿಸ್ಥಿತಿ ತಿಳಿಗೊಳಿಸಲು 2 ರಾಷ್ಟ್ರಗಳು ಒಪ್ಪಿಕೊಂಡು, ಜಂಟಿ ಗಸ್ತು ತಿರುಗಲು ಸಮ್ಮತಿ ಸೂಚಿಸಿರು ವಂತೆಯೇ ಈ ಸಭೆ ಮಹತ್ವ ಪಡೆದಿದೆ.

ಇರಾನ್‌ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ಮೋದಿ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಜತೆ ಕಜಾನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇಸ್ರೇಲ್‌ ಜತೆಗಿನ ಜಗಳ ತಾರಕಕ್ಕೆ ಏರಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಭಾರತ ಮತ್ತು ಇರಾನ್‌ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಉಭಯ ನಾಯಕರ ಈ ಸಭೆ ನಡೆದಿದೆ.

ಟಾಪ್ ನ್ಯೂಸ್

1—a-deee

Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

Israeli Military: ಹೆಜ್ಬುಲ್ಲಾ ಬ್ಯಾಂಕಿಂಗ್‌ ಸಂಸ್ಥೆ ಗುರಿಯಾಗಿಸಿ ಇಸ್ರೇಲ್‌ ದಾಳಿ

Israeli Military: ಹೆಜ್ಬುಲ್ಲಾ ಬ್ಯಾಂಕಿಂಗ್‌ ಸಂಸ್ಥೆ ಗುರಿಯಾಗಿಸಿ ಇಸ್ರೇಲ್‌ ದಾಳಿ

US Election: ಫ್ರೆಂಚ್‌ ಫ್ರೈಸ್‌ ತಯಾರಿಸಿ ಕಮಲಾಗೆ ಟಾಂಗ್‌ ಕೊಟ್ಟ ಡೊನಾಲ್ಡ್‌ ಟ್ರಂಪ್‌

US Election: ಫ್ರೆಂಚ್‌ ಫ್ರೈಸ್‌ ತಯಾರಿಸಿ ಕಮಲಾಗೆ ಟಾಂಗ್‌ ಕೊಟ್ಟ ಡೊನಾಲ್ಡ್‌ ಟ್ರಂಪ್‌

Isreal-Meet

leaked letter: ಇರಾನ್‌ ಮೇಲೆ ದಾಳಿಗೆ ಇಸ್ರೇಲ್‌ ಸಿದ್ಧವಾಗಿತ್ತು: ವರದಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1—a-deee

Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

1

Sandalwood: ಸುಂದರ ರಾಕ್ಷಸಿ ಇವಳು!

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.