Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ
Team Udayavani, Oct 23, 2024, 1:19 AM IST
ಮುಂದೆ ನಡೆಯುವ ಮಹಾಭಾರತ ಯುದ್ಧದಲ್ಲಿ ಪ್ರಳಯ ಆಗಲಿದೆ ಎಂಬುದರ ಸಂಕೇತವಾಗಿ ಭೀಮಸೇನನನ್ನು ವೃಕೋದರಃ ಎಂದು ಸಂಜಯ ಕರೆದಿದ್ದಾನೆ. ಇದುವರೆಗೆ ಕೇವಲ ಭೀಮನಾಗಿದ್ದರೆ ಈಗ ಭೀಮಕರ್ಮನಾಗಿದ್ದಾನೆ. ಅಂದರೆ ಮುಂದೆ ಭಯಂಕರನಾಗಲಿದ್ದಾನೆ. ಸಂಜಯನು ಕುಂತೀಪುತ್ರಃ ಯುಧಿಷ್ಠಿರಃ ಎನ್ನುವಾಗಲೂ ಸಂಕೇತಾರ್ಥವಿದೆ. ಕುಂತಿ ವೀರಮಹಿಳೆ. ಯುದ್ಧಕ್ಕಿಂತ ಮೊದಲು ಶ್ರೀಕೃಷ್ಣ ಕುಂತಿ ಹತ್ತಿರ ಹೋಗಿ ಯುದ್ಧವನ್ನು ಮಾಡಬೇಕೋ ಬೇಡವೋ ಎಂದು ಕೇಳುತ್ತಾನೆ.
ಹೇಡಿಯಾಗಿ ಬದುಕುವುದಕ್ಕಿಂತ ರಣರಂಗದಲ್ಲಿ ಸತ್ತು ವೀರಸ್ವರ್ಗ ಪಡೆಯುವ ಮಕ್ಕಳೇ ಬೇಕು. ಅಧರ್ಮದ ವಿರುದ್ಧ ಯುದ್ಧವಾಗಲೇಬೇಕೆಂದವಳು ಕುಂತಿ. ಅಂತಹ ಮಹಿಳೆಯ ಮಗ ಯುಧಿಷ್ಠಿರ ಹೇಗಿದ್ದಿರಬೇಕು? ಯುಧಿಷ್ಠಿರ ಯುದ್ಧಪಿಪಾಸು ಅಲ್ಲ, ಸ್ವಭಾವತಃ ಯುದ್ಧವನ್ನು ಆಗದಂತೆ ನೋಡುವವನೇ. ಆದರೆ ಯುದ್ಧಕ್ಕೆ ನಿಂತ ಅಂದರೆ ಅವನ ಬಲವೇ ಬೇರೆ. “ಯುಧಿಷ್ಠಿರಃ ಅನಂತ ವಿಜಯಃ’ ಎಂಬ ಮಾತನ್ನು ಸಂಜಯ ಹೇಳುತ್ತಿದ್ದಾನೆ. ಇವನ ವಿಜಯದಲ್ಲಿ ಅಂತ್ಯವೆಂಬುದಿಲ್ಲ. ಅದು ಅನಂತ ವಿಜಯ. ದುರ್ಯೋಧನನನ್ನು ರಾಜ ಎಂದು ಕರೆದು ಅಣಕಿಸಿದರೆ, ಯುಧಿಷ್ಠಿರ ರಾಜನಲ್ಲದಿದ್ದರೂ ರಾಜನಂತೆ ಎನ್ನುತ್ತಾನೆ. ಯುಧಿಷ್ಠಿರ ಸಿದ್ಧನಾದ ಎಂದರೆ ರಾಜನಾದಂತೆ. ಒಂದೊಂದು ಶಬ್ದ ಆಯ್ಕೆಯಲ್ಲೂ ಸಂಜಯ ಒಂದೊಂದು ಧ್ವನಿಯನ್ನು ವಿಶೇಷಣಗಳ ಮೂಲಕ ಹೊರಸೂಸುತ್ತಾನೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.