Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಯಶ್‌ ಮಾತು


Team Udayavani, Oct 23, 2024, 12:21 PM IST

2

ಬೆಂಗಳೂರು: ‘ಕೆಜಿಎಫ್’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾದಲ್ಲಿ ತನ್ನ ಅಭಿಮಾನ ಸಾಮ್ರಾಜ್ಯವನ್ನು ಕಟ್ಟಿದ ಯಶ್ (Actor Yash) ಇಂದು ದಕ್ಷಿಣ ಭಾರತದ ಬಹುದೊಡ್ಡ ನಟರಲ್ಲಿ ಒಬ್ಬರು.

ಇಂದು ಅವರನ್ನು ವರ್ಲ್ಡ್ ಸಿನಿಮಾ ಗುರುತಿಸುತ್ತದೆ ಎಂದರೆ ಅದಕ್ಕೆ ಕಾರಣ ‘ಕೆಜಿಎಫ್’ ನಲ್ಲಿನ ‘ರಾಕಿ’ ಎಂದರೆ ತಪ್ಪಾಗದು.

ಯಶ್  ‘ಟಾಕ್ಸಿಕ್’ ಸಿನಿಮಾ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಹೊರತುಪಡಿಸಿ ಅವರ ಹೆಸರು ಬಹುಕೋಟಿ ನಿರ್ಮಾಣದ ‘ರಾಮಾಯಣ’ (Ramayana) ದಲ್ಲಿ ‌ಕೇಳಿ ಬರುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಈ ಸಿನಿಮಾದಲ್ಲಿ ಯಶ್ ‘ರಾವಣ’ ಮಾತ್ರವಲ್ಲದೆ ಸಹ ನಿರ್ಮಾಪಕರಾಗಿಯೂ ಜವಾಬ್ದಾರಿ ವಹಿಸಿಕೊಂಡಿರುವುದು.

‘ರಾಮಾಯಣ’ ಸಿನಿಮಾ ಹಾಗೂ ‘ರಾವಣ’ ಪಾತ್ರದ ಬಗ್ಗೆ ಯಶ್ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಮ್ಯಾಗಜೀನ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅನುಪಮಾ ಚೋಪ್ರಾ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ‘ರಾಮಾಯಣ’ ಕ್ಕೆ ಸಹ ನಿರ್ಮಾಪಕ ಆಗಿದ್ದೇಕೆ ಹಾಗೂ ‘ರಾವಣ’ ಪಾತ್ರ ಮಾಡಲು ಒಪ್ಪಿಕೊಂಡದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ವಿಎಫ್ ಎಕ್ಸ್  ಕೆಲಸದ ಸಂಬಂಧ ನಾನು ಲಾಸ್ ಏಂಜಲೀಸ್ ಗೆ ಹೋಗಿ ಕೆಲ ಸಮಯ ಇದ್ದೆ. ಇದರ ಕೆಲಸಕ್ಕೆ ಅಲ್ಲಿನ ಡಿಎನ್‌ಇಜಿ ಮತ್ತು ಪ್ರೈಮ್ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಭೇಟಿ ಆಗಿದ್ದೆ‌. ಈ ಭೇಟಿ ಸಂದರ್ಭದಲ್ಲಿ ನಮಿತ್ ಅವರು ನನ್ನ ಜೊತೆ ‘ರಾಮಾಯಣ’ ಸಿನಿಮಾದ ವಿಚಾರವನ್ನು ಹಂಚಿಕೊಂಡರು. ಹಲವಾರು ವರ್ಷಗಳಿಂದ ‘ರಾಮಾಯಣ’ಕ್ಕೆ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು.

ನಮಿತ್ ಅವರೊಂದಿಗಿನ ಮೊದಲ ಭೇಟಿಯಲ್ಲೇ ಅವರ ಆಲೋಚನೆ ಹಾಗೂ ನನ್ನ  ಆಲೋಚನೆ ಎರಡು ಒಂದೇ ಎನ್ನುವ ಭಾವನೆ ಬಂತು. ಇದೇ ಕಾರಣಕ್ಕೆ ನಾನು ಈ ಚಿತ್ರದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಇನ್ನು ‘ರಾವಣ’ ಪಾತ್ರವನ್ನು ಒಪ್ಪಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂಜರಿಕೆಯಿಂದಲೇ ನಮಿತ್ ನನ್ನ ಹತ್ರ ನೀವು ಚಿತ್ರದಲ್ಲಿ ‘ರಾವಣ’ನ ಪಾತ್ರವನ್ನು ಮಾಡಬಹುದೇ ಎಂದು ಕೇಳಿದರು. ಪಾತ್ರವನ್ನು ಪಾತ್ರದಂತೆ ಪರಿಗಣಿಸಿದರೆ, ಇಂದು ಈ ಚಿತ್ರ ಆಗದಿದ್ದರೆ ಮುಂದೆ ಆಗುವುದಿಲ್ಲ ಎಂದು ಹೇಳಿದ್ದೆ. ಇಂತಹ ಸಿನಿಮಾಕ್ಕೆ ಸ್ಟಾರ್ ಡಮ್ ಎನ್ನುವುದನ್ನು ಪಕ್ಕಕ್ಕಿಟ್ಟು ಎಲ್ಲರೂ ಕೈಜೋಡಿಸಬೇಕು. ಯೋಜನೆಗಳನ್ನು ರೂಪಿಸಬೇಕೆಂದು ಅವರ ಬಳಿ ಹೇಳಿದ್ದೆ ಎಂದು ಯಶ್ ಹೇಳಿದ್ದಾರೆ.

ನಾನು ಈ ಚಿತ್ರದ ಭಾಗವಾಗುವ ಮುನ್ನವೇ ‘ರಾಮ’ನ ಪಾತ್ರಕ್ಕೆ ರಣ್ಬೀರ್ ಕಪೂರ್ ಅವರ ಆಯ್ಕೆ ನಡೆದು ಹೋಗಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ‘ಸೀತೆ’ಯ ಪಾತ್ರಕ್ಕೆ  ಸಾಯಿಪಲ್ಲವಿ ಅವರನ್ನು ಆಯ್ಕೆ ಮಾಡುವ ಇಚ್ಛೆ ಇತ್ತು. ಹಾಗಾಗಿ ಸಾಯಿಪಲ್ಲವಿ ಈ ಪಾತ್ರಕ್ಕೆ ಆಯ್ಕೆ ಆದರು ಎಂದಿದ್ದಾರೆ.

ರಾವಣನ ಪಾತ್ರ ಬಿಟ್ಟು ಬೇರೆ ಯಾವ ಪಾತ್ರವನ್ನು ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ರಾವಣ’ನ ಪಾತ್ರ ಹೊರತುಪಡಿಸಿ ಬೇರೆ ಯಾವ ಪಾತ್ರವಿದ್ದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆ ಪಾತ್ರಕ್ಕೆ ಜೀವ ತುಂಬುವುದೇ ಒಂದು ರೋಚಕ ಅನುಭವ.  ಅದಕ್ಕಾಗಿ ತುಂಬಾ ಎಕ್ಸೈಟ್ ಆಗಿದ್ದೇನೆ. ಈ ರಾಮಾಯಣ ಎಲ್ಲರಿಗೂ ವಿಶಿಷ್ಟ ಅನುಭವ ನೀಡಲಿದೆ ಎಂದು ಯಶ್ ಹೇಳಿದ್ದಾರೆ.

ಟಾಪ್ ನ್ಯೂಸ್

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ

Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ

ಛೋಟಾ ರಾಜನ್‌ ಗ್ಯಾಂಗ್‌ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿತ್ತು

Chhota Rajan: ಹ*ತ್ಯೆ ಕೇಸ್-ಭೂಗತ ಪಾತಕಿ ಛೋಟಾ ರಾಜನ್‌ ಗೆ ಬೇಲ್;‌ ಆದ್ರೂ ಬಿಡುಗಡೆ ಇಲ್ಲ!

surathkal-new

ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಮೆಸೇಜ್ ಮಾಡಿ ಕಿರುಕುಳ; ಆರೋಪಿ ವಶಕ್ಕೆ

5-mukka

Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು

4-bntwl

Farangipete: ಪೂರ್ವದ್ವೇಷದ ಹಿನ್ನಲೆ ತಲ್ವಾರ್ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

6

Actor Yash: ‘ಕೆಜಿಎಫ್‌-3ʼ ಬಗ್ಗೆ ಯಶ್‌ ಕೊಟ್ರು ಬಿಗ್‌ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?

3

Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?

77

Tollywood: ‘ಪುಷ್ಪ-2ʼ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

6

Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್‌

5

Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!

9-belagavi

Belagavi: ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವಿಜಯೋತ್ಸವಕ್ಕೆ ಅದ್ಧೂರಿ ಚಾಲನೆ

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

4

Dinesh GunduRao:ಶಾಸಕ ರಾಯರೆಡ್ಡಿ ಸಿಎಂ ಪಕ್ಕ ಇರುವುದರಿಂದ ಹೆಚ್ಚು ಅಭಿವೃದ್ದಿ ನಡೆಯುತ್ತವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.