Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ‌‌ ಪೂಜೆ; ಅರುಣ್ ಪುತ್ತಿಲ ಆಗಮನಕ್ಕೆ ವಿರೋಧ

ಕೆಲ‌ಕಾಲ ಉಭಯ ತಂಡಗಳ‌ ನಡುವೆ ಮಾತಿನ‌ ಜಟಾಪಟಿ‌ : ಪೊಲೀಸರ‌ ಆಗಮನ

Team Udayavani, Oct 23, 2024, 12:31 PM IST

3-ptr

ಪುತ್ತೂರು: ವಿಶ್ವಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ‌ ಮುಖಂಡ ಅರುಣ್ ಪುತ್ತಿಲ ಅವರು‌ ಆಗಮಿಸಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ‌ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂದರ್ಭದ ಉಭಯ ತಂಡಗಳ‌ ನಡುವೆ ಮಾತಿನ ಸಂಘರ್ಷ ನಡೆದಿದೆ.

ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಅ.23 ರಂದು ವಿಶ್ವ ಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಮೂವರು ಬೆಂಬಲಿಗರು ಜತೆಗೂಡಿ ಈ ಸಮಾರಂಭಕ್ಕೆ ಅಗಮಿಸಿದ್ದಾರೆ.

ಇದೇ ವೇಳೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತೂ ಹಿಂದೂ ಜಾಗರಣೆ ವೇದಿಕೆಯ ಮುಂಚೂಣಿಯಲ್ಲಿರುವ ಕೆಲ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತನ್ನ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದಿದ್ದಾರೆ.

ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಪುತ್ತಿಲ ನೆರವಿಗೆ ಧಾವಿಸಿದ್ದು, ಪುತ್ತಿಲರನ್ನು ತಡೆಯಲು ಯತ್ನಿಸುತ್ತಿದ್ದ ಕಾರ್ಯಕರ್ತರ ಜತೆ ವಾಗ್ವಾದ ನಡೆಸಿದ್ದಾರೆ. ಪುತ್ತಿಲ‌ ಆಗಮನವನ್ನು ವಿರೋಧಿಸಿದ ತಂಡದಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ದಿನೇಶ್ ಪಂಜಿಗ, ಶ್ರೀಧರ್ ತೆಂಕಿಲ , ಜಯಂತ್ ಬಲ್ನಾಡು, ಜಿತೇಶ್ ಬಲ್ನಾಡು ಮೊದಲಾದವರು‌ ಇದ್ದರು ಎನ್ನಲಾಗಿದೆ.

ಈ ವೇಳೆ ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಯು ಪೂವಪ್ಪ ಅವರು ಸ್ಥಳಕ್ಕೆ ಆಗಮಿಸಿ‌ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪುತ್ತಿಲ ಅವರನ್ನು ಸಭಾಂಗಣಕ್ಕೆ‌ ಕರೆದೊಯ್ಯಲಾಯಿತು. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಅರುಣ್ ಪುತ್ತಿಲ ಅವರ‌ ಕೆಲ ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದು ಬಳಿಕ ಅಲ್ಲಿಂದ ನಿರ್ಗಮಿಸಿದರು ಎನ್ನುವ ಮಾಹಿತಿ ಲಭಿಸಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಸಂಘ ಪರಿವಾರದ ಕೆಲ ಕಾರ್ಯಕರ್ತರು ಹಾಗೂ ಪುತ್ತಿಲ ಪರಿವಾರದ ನಡುವೆ ಏರ್ಪಟ್ಟಿದ್ದ ಸಂಘರ್ಷದ ಮುಂದುವರಿದ ಭಾಗ‌ ಇದಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

10

The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್‌ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್‌ ಸ್ಟಾರ್

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

Baba Siddique Case: ಹರ್ಯಾಣದಲ್ಲಿ ಇನ್ನೋರ್ವ ಆರೋಪಿ ಬಂಧನ, ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ

Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ

ಛೋಟಾ ರಾಜನ್‌ ಗ್ಯಾಂಗ್‌ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿತ್ತು

Chhota Rajan: ಹ*ತ್ಯೆ ಕೇಸ್-ಭೂಗತ ಪಾತಕಿ ಛೋಟಾ ರಾಜನ್‌ ಗೆ ಬೇಲ್;‌ ಆದ್ರೂ ಬಿಡುಗಡೆ ಇಲ್ಲ!

surathkal-new

ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಮೆಸೇಜ್ ಮಾಡಿ ಕಿರುಕುಳ; ಆರೋಪಿ ವಶಕ್ಕೆ

5-mukka

Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್‌

5

Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!

1(1)

Puttur: ನಿಧಾನಕ್ಕೆ ಹೋಗಿ, ಇಲ್ಲಿ ಕೆಲಸವೂ ನಿಧಾನಗತಿಯಲ್ಲಿದೆ!

4-bntwl

Farangipete: ಪೂರ್ವದ್ವೇಷದ ಹಿನ್ನಲೆ ತಲ್ವಾರ್ ದಾಳಿ; ಇಬ್ಬರಿಗೆ ಗಾಯ

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

7(1)

Mangaluru: ಪ್ಲಾಸ್ಟಿಕ್‌ ಸದ್ಬಳಕೆಯಿಂದ ದುಡ್ಡೂ ಮಾಡಬಹುದು!

10

The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್‌ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್‌ ಸ್ಟಾರ್

6

Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್‌

5

Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!

9-belagavi

Belagavi: ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವಿಜಯೋತ್ಸವಕ್ಕೆ ಅದ್ಧೂರಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.