Lawyer Jagadish: ದರ್ಶನ್ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್
Team Udayavani, Oct 23, 2024, 6:38 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ರಲ್ಲಿ ಸ್ಪರ್ಧಿಯಾಗಿ ಮೂರನೇ ವಾರದಲ್ಲಿ ಮನೆಯ ನಿಯಮ ಉಲ್ಲಂಘಿಸಿ ಆಚೆ ಬಂದಿರುವ ವಕೀಲ ಜಗದೀಶ್ (Lawyer Jagadish) ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ಟ್ರೆಂಡಿಂಗ್ ನಲ್ಲಿದ್ದಾರೆ.
ಜಗದೀಶ್ ಬಿಗ್ ಬಾಸ್ ಮನೆಗೆ ಮತ್ತೆ ಬರಬೇಕೆನ್ನುವುದು ಅನೇಕರ ಅಭಿಪ್ರಾಯವಾಗಿದೆ. ಹಲವು ಸುದ್ದಿ ವಾಹಿನಿ, ಯೂಟ್ಯೂಬ್ ಚಾನೆಲ್ ಗಳಿಗೆ ಜಗದೀಶ್ ಅವರು ಸಂದರ್ಶನ ನೀಡುತ್ತಿದ್ದಾರೆ.
ʼಟಿವಿ5ʼ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಪ್ರಕರಣದ ಬಗ್ಗೆ (Darshan) ಜಗದೀಶ್ ಮಾತನಾಡಿದ್ದು, ದಾಸನ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ʼದರ್ಶನ್‌ಗೆ ಬೇಲ್ ಆಗುತ್ತಾ ಸರ್..?ʼ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, 100% ಮಾಡಿಸುತ್ತೇವೆ. ನಾವು ಅದನ್ನೇ ಪ್ರಾರ್ಥನೆ ಮಾಡುತ್ತಿದ್ದೇವೆ. ಆದರೆ ಇಷ್ಟೆಲ್ಲಾ ಮಾಡಿದ್ರೂ ನಮಗೆ ಯಾರೂ ಕೂಡ ಅವರ ಕುಟುಂಬದಿಂದ ಸಂಪರ್ಕಿಸಿಲ್ಲ. ಆದರೆ ಹೊರಗಡೆಯೇ ನಮ್ಮ ಕೈಯಿಂದಾಗುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ದರ್ಶನ್ ಪರ ನಾನು ಪ್ರತಿಭಟನೆ ಮಾಡಿದೆ. ಕ್ಯಾಂಪೇನ್ ಮಾಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದೆ. ಪೊಲೀಸ್ ತನಿಖೆಯನ್ನು ವಿರೋಧಿಸಿ ಆತ ಕೊಲೆನೇ ಮಾಡಿಲ್ಲ ಎಂದು ಹೇಳಿದ ಏಕೈಕ ವ್ಯಕ್ತಿ ಕರ್ನಾಟಕದಲ್ಲಿ ನಾನು ಒಬ್ಬನೇ. ಇನ್ನು ಏನು ಮಾಡಬೇಕು. ನನ್ನ ಕೈಲ್ಲಿ ಆದಷ್ಟು ನಾನು ಪ್ರಯತ್ನ ಪಟ್ಟಿದ್ದೇನೆ. ಮತ್ತೆಲ್ಲ ಅವನ ಹಣೆಬರಹ ಎಂದಿದ್ದಾರೆ.
ಅವರನ್ನು ವಿಜಯಲಕ್ಷ್ಮೀಯೊಂದಿಗೆ ನೋಡುವ ಆಸೆಯಿದೆ. ಅವರನ್ನು ಹೊರಗಡೆ ಬಂದ್ಮೇಲೆ ಚೆನ್ನಾಗಿ ನೋಡಿಕೊಳ್ಳಲಿ. ಸಾಯಂಕಾಲ ಶೆಡ್ ಕಡೆ ಹೋಗ್ಬೇಡ ಅಂಥ ನಿಮಗೆ ಸಿಕ್ಕರೆ ಹೇಳಿ ಎಂದು ಹೇಳಿದ್ದಾರೆ.
ದರ್ಶನ್ ನಿರಪರಾಧಿನಾ ಎಂದು ಹೇಳುವುದು ಕಷ್ಟ ಇದೆ. ಯಾಕೆಂದರೆ ಚಾರ್ಜ್‌ಶೀಟ್ ಹಾಕಿದ್ದಾರೆ. ಆಗಿರುವ ಕೊಲೆ ತಪ್ಪಿಸಲು ಆಗಲ್ಲ ಆದರೆ 17 ಜನ ಮಾಡಿರುವ ಕೊಲೆಯಲ್ಲಿ ಯಾರು ಮಾಡಿದ್ದಾರೆ ಅನ್ನೋದು ಎಸಿಪಿ ಚಂದನ್‌ಗೆ ಹೇಗೆ ಗೊತ್ತಾಯ್ತು, ಎಸಿಪಿ ಚಂದನ್ ಏನು ದೇವರಾ. ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ದರ್ಶನ್ ಅಮಾಯಕ ಅಂಥ ಹೇಳಲ್ಲ, ದಡ್ಡ, ಆತ ಇಂಡಸ್ಟ್ರಿಯಲ್ಲಿರುವ ಶತದಡ್ಡ ಅಂಥ ಹೇಳಬಲ್ಲೆ ಎಂದಿದ್ದಾರೆ.
ನಾನೇನು ಫ್ಯಾನ್ಸ್‌ಗಳಿಗೆಲ್ಲ ಭಯ ಬೀಳಲು ಹೋಗಲ್ಲ. ಫ್ಯಾನ್ಸ್ ಗಳು ಬಂದಿದ್ದೇ 18 ಜನ ನಾವೆಲ್ಲ ನಗ್ನತೆಯನ್ನು ನೋಡ್ಬಿಟ್ಟಿದೀವಿ. ಅವರು ಹೊರಗೆ ಬರಲಿ ವಿಜಯಲಕ್ಷ್ಮಿ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ, ಚಿತ್ರರಂಗಕ್ಕೆ ಆಸ್ತಿಯಾಗಲಿ ಎಂದಿದ್ದಾರೆ.
ದರ್ಶನ್ ಕೇಸ್ ನನಗೆ ಕೊಡಿ ಅವರನ್ನು ಬಿಡಿಸಿಕೊಂಡು ಬರ್ತಿನಿ..
ನಮ್ಮ ಟೀಮ್ ಕೈಗೆ ದರ್ಶನ್ ಕೇಸ್ ಕೊಟ್ಟರೆ ಅವರನ್ನು ಬಿಡಿಸಿಕೊಂಡು ಬಂದು, ವಿಜಯಲಕ್ಷ್ಮೀ ಅವರ ಹತ್ತಿರ ಬಿಡುತ್ತೇವೆ. ಆ ಲಾಯರ್ ಏನು ಮಾಡುತ್ತಾರೆ ನನಗೇನು ಗೊತ್ತು ಸರ್. ನಮ್ ಕೈಗೆ ಕೇಸ್ ಕೊಟ್ಟರೆ ಮನೆಗೆ ಕರ್ಕೊಂಡು ಹೋಗಿ ಅರತಿ ಎತ್ತಿಸುತ್ತೇವೆ. ಬರೀ ವಾದದಿಂದ ಹೊರಗಡೆ ಬರೋದಾದ್ರೆ ಪ್ರಜ್ವಲ್ ರೇವಣ್ಣ ಇಷ್ಟೋತ್ತಿಗೆ ಬರಬೇಕಿತ್ತು. ಇಲ್ಲಿ ಬ್ರ್ಯಾಂಡ್ ವರ್ಕೌಟ್ ಆಗಲ್ಲ ಸರ್. ಸ್ಟ್ರಾಟರ್ಜಿಗಳು ವರ್ಕ್ ಆಗುತ್ತವೆ. ದರ್ಶನ್ ಕರ್ಕೊಂಡು ಬಂದ್ರೆ ಒಳ್ಳೆಯದು ಅಲ್ಲೂ ಕೂಡ ಫೇಲ್ ಆದ್ರೆ ನಮಗೆ ಕೊಡಿ ನಾವು ಕರ್ಕೊಂಡು ಬರುತ್ತೇವೆ. ಕಾಸು ತೆಗೆದುಕೊಳ್ಳುತ್ತೇವೆ. 25-30 ಕೋಟಿ ಒಂದೊಳ್ಳೆ ಫೀಸ್ ತೆಗೆದುಕೊಳ್ಳುತ್ತೇವೆ. ಕರ್ಕೊಂಡು ಬಂದು ಬಿಡೋ ಜವಬ್ದಾರಿ ನಮ್ಮದು ಎಂದು ಜಗದೀಶ್ ಹೇಳಿದ್ದಾರೆ.
ಹೈಕೋರ್ಟ್‌ನಲ್ಲಿ ದರ್ಶನ್ ಬೇಲ್ ಅರ್ಜಿ ನಡೆದಿದ್ದು, ವಿಚಾರಣೆಯನ್ನು ಅ.28ಕ್ಕೆ ಮುಂದೂಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.