Maharashtra: ಗಣಿತ, ವಿಜ್ಞಾನದಲ್ಲಿ ಫೇಲಾದರೂ 10ನೇ ಕ್ಲಾಸ್ ಪಾಸ್!
ಮುಂದಿನ ವರ್ಷದಿಂದ ಜಾರಿ, ಕ್ರಮದ ಬಗ್ಗೆ ಶಿಕ್ಷಣ ತಜ್ಞರ ಆತಂಕ
Team Udayavani, Oct 24, 2024, 7:15 AM IST
ಮುಂಬೈ: ಮಹಾರಾಷ್ಟ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಅನುತ್ತೀರ್ಣರಾದರೂ ವಿದ್ಯಾರ್ಥಿಗಳು 11ನೇ ತರಗತಿ ಪ್ರವೇಶ ಪಡೆಯಬಹುದು. ಆದರೆ ಈ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಲ್ಲಿ ಕನಿಷ್ಠ 20 ಅಂಕ ಪಡೆಯುವುದು ಕಡ್ಡಾಯವಾಗಿರುತ್ತದೆ.
ಮಹಾರಾಷ್ಟ್ರದಲ್ಲಿ ಎಸ್‌ಎಸ್‌ಸಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯುವುದು ಕಡ್ಡಾಯವಾಗಿದೆ. ಆದರೆ ಈಗ 11ನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನದ ಕನಿಷ್ಠ ಅಂಕವನ್ನು 20ಕ್ಕೆ ಇಳಿಸಲಾಗಿದೆ. ಅವರ ಅಂಕಪಟ್ಟಿಯಲ್ಲಿ “ವಿಜ್ಞಾನ ಮತ್ತು ಗಣಿತದಲ್ಲಿ ಉತ್ತೀರ್ಣರಾಗಿಲ್ಲ’ ಎಂದು ನಮೂದಿಸಿರುತ್ತದೆ. ಅವರಿಗೆ ಕಲಾ, ಮಾನವಿಕ ಕೋರ್ಸ್‌ಗಳನ್ನು ಸೇರಲಷ್ಟೇ ಅವಕಾಶವಿರುತ್ತದೆ.
ಈ ವಿದ್ಯಾರ್ಥಿಗಳು ಸಪ್ಲಿಮೆಂಟರಿ ಪರೀಕ್ಷೆ ಅಥವಾ ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ಫಲಿತಾಂಶ ಉತ್ತಪಡಿಸಿಕೊಳ್ಳಲು ಅವಕಾಶವಿರುತ್ತದೆ. ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ಶೈಕ್ಷಣಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು 10ನೇ ತರಗತಿ ಫೇಲಾದವರು ಮುಂದಿನ ಶಿಕ್ಷಣದಿಂದ ಹೊರಗುಳಿಯುವುದು ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಶಿಕ್ಷಣದ ಗುಣಮಟ್ಟ ಕುಸಿಯಲಿದ್ದು ವಿಶೇಷವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಪ್ರವೇಶ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.