Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!
Team Udayavani, Oct 24, 2024, 9:12 AM IST
ಚೆನ್ನೈ: ಪ್ರತೀ ಪೈಸೆಗೂ ಬೆಲೆ ಇದೆ. 50 ಪೈಸೆ ಎಂದು ನಿರ್ಲಕ್ಷ ಮಾಡಿ ಗ್ರಾಹಕನಿಗೆ ಕೊಡದಿದ್ದರ ಫಲವಾಗಿ ಈಗ ಅಂಚೆ ಕಚೇರಿಗೆ ಬರೋಬ್ಬರಿ 15,000 ರೂ. ದಂಡ ವಿಧಿಸಲಾಗಿದೆ.
ಚೆನ್ನೈಯ ಮಾನ್ಶ ಎಂಬವರು 2023 ರ ಡಿಸೆಂಬರ್‌ನಲ್ಲಿ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಮಾಡಲು 30 ರೂ. ನೀಡಿದ್ದರು. ಅದಕ್ಕೆ ನಿಗದಿತ ಶುಲ್ಕ 29.50 ರೂ. ಆಗಿತ್ತು. ಬಾಕಿ 50 ಪೈಸೆ ಕೊಡಲು ಸಿಬಂದಿ ಒಪ್ಪಿಲ್ಲ. ನಮ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೊತ್ತ ರೌಂಡಾಫ್ ಆಗಿದ್ದು, 30 ರೂ. ವನ್ನೇ ತೋರಿಸುತ್ತಿದ್ದು ಅಷ್ಟನ್ನೇ ಪಾವತಿ ಮಾಡಿ ಎಂದರು. ಅದಕ್ಕೆ ಒಪ್ಪದ ಮಾನ್ಶ, ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿ ಮಾಡುತ್ತೇನೆ ಎಂದರೂ ಸಿಬಂದಿ ಒಪ್ಪಿರಲಿಲ್ಲ.
ಅಂಚೆ ಕಚೇರಿ ವಿರುದ್ಧ ಚೆನ್ನೈ ಜಿಲ್ಲಾ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿ “ಪ್ರತೀದಿನ ರೌಂಡಾಫ್ ಮಾಡುವುದರಿಂದ ಬೃಹತ್ ಮೊತ್ತ ಸಂಗ್ರಹಿಸಿದಂತಾಗುತ್ತದೆ. ಇದು ಕಪ್ಪುಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸರಕಾರಕ್ಕೆ ಬರುವ ಜಿ.ಎಸ್.ಟಿ. ನಷ್ಟವಾಗುತ್ತದೆ ಎಂದು ವಾದಿಸಿದ್ದರು. ಅದರ ವಿಚಾರಣೆ ನಡೆಸಿದ ವೇದಿಕೆ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000ಗ್ರಾಮಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.