IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ


Team Udayavani, Oct 24, 2024, 5:11 PM IST

MS Dhoni Sends ‘shocking’ Message To Chennai Super Kings

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) 2025ಕ್ಕೆ ಮೊದಲು ನವೆಂಬರ್‌ ತಿಂಗಳಿನಲ್ಲಿ ಮೆಗಾ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಇದಕ್ಕೆ ಬೇಕಾದ ತಯಾರಿ ಮಾಡುತ್ತಿವೆ. ಫ್ರಾಂಚೈಸಿಗಳು ತಮ್ಮಲ್ಲಿ ತಮ್ಮಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿದೆ. ಅಕ್ಟೋಬರ್‌ 31ಕ್ಕೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್‌ ಪಟ್ಟಿಯನ್ನು ಪ್ರಕಟ ಮಾಡಬೇಕಾಗಿದೆ.

ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಈ ಬಾರಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ನೊಂದಿಗೆ ಮುಂದುವರಿಯಲಿದ್ದಾರೆಯೇ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.

ಹೊಸ ಐಪಿಎಲ್ ಧಾರಣ ನಿಯಮಗಳ (Retention Rules) ಪ್ರಕಾರ, ಸಿಎಸ್‌ಕೆ ಧೋನಿಯನ್ನು 4 ಕೋಟಿ ರೂ.ಗೆ ‘ಅನ್‌ಕ್ಯಾಪ್ಡ್ ಆಟಗಾರ’ ಆಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಆಟಗಾರನ ಅಥವಾ ಫ್ರಾಂಚೈಸ್‌ ನ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಸ್ಪೋರ್ಟ್ಸ್ ತಕ್‌ ನ ವರದಿಯ ಪ್ರಕಾರ ಧೋನಿ ಇಲ್ಲಿಯವರೆಗೂ ತಂಡಕ್ಕೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿಲ್ಲ. ಅ. 29 ಅಥವಾ 30 ರಂದು ಮಹೇಂದ್ರ ಸಿಂಗ್‌ ಧೋನಿ ಸಿಎಸ್‌ಕೆ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅ. 31 ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸಲು ಅಧಿಕೃತ ಅಂತಿಮ ದಿನಾಂಕವಾಗಿದೆ.‌

ಅ.28 ರವರೆಗೆ ಧೋನಿ ಯಾವುದೇ ಮೀಟಿಂಗ್‌ ಗೆ ಲಭ್ಯವಿರುವುದಿಲ್ಲ. ಚರ್ಚೆಯ ನಂತರ ಅವರನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಧೋನಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ಐಪಿಎಲ್ 2025 ರ ಮೆಗಾ ಹರಾಜು ಸಮೀಪಿಸುತ್ತಿರುವಂತೆ ಧೋನಿ ಅವರು ತಮ್ಮ ಲಭ್ಯತೆಯ ಬಗ್ಗೆ ಖಚಿತ ಮಾಹಿತಿ ನೀಡಲಿದ್ದಾರೆ ಎಂದು ಸಿಎಸ್‌ ಕೆ ಸಿಇಒ ವಿಶ್ವನಾಥನ್‌ ಭರವಸೆ ಹೊಂದಿದ್ದಾರೆ.

“ನಾವು ಧೋನಿಯಿಂದ ಇದುವರೆಗೂ ಯಾವುದೇ ಖಚಿತ ಉತ್ತರ ಪಡೆದಿಲ್ಲ. ಆದರೂ ಅವರು ನಮಗಾಗಿ ಆಡುವುದನ್ನು ಮುಂದುವರಿಸಲು ನಾವು ಬಯಸುತ್ತೇವೆ. ಅವರು ಅ. 31ರ ಮೊದಲು ಖಚಿತಪಡಿಸುತ್ತಾರೆ ಎಂದು ಭಾವಿಸುತ್ತೇವೆ” ಎಂದು ವಿಶ್ವನಾಥನ್ ಇಎಸ್‌ ಪಿಎನ್‌ ಕ್ರಿಕ್‌ ಇನ್ಫೋ ಗೆ ತಿಳಿಸಿದರು.

ಈ ಬಾರಿ ಐಪಿಎಲ್‌ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತನಾದ ಯಾವುದೇ ಆಟಗಾರರರನ್ನು ಅನ್‌ ಕ್ಯಾಪ್ಡ್ ಎಂದು ಪರಿಗಣಿಸಬಹುದು. ಹೀಗಾಗಿ ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿ ಮುಂದುವರಿಯಲು ಒಪ್ಪಿದರೆ ಅವರನ್ನು ಅನ್‌ ಕ್ಯಾಪ್ಡ್‌ ಆಟಗಾರ ಪಟ್ಟಿಯಲ್ಲಿ 4 ಕೋಟಿ ರೂ ಗೆ ಸಿಎಸ್‌ ಕೆ ಉಳಿಸಿಕೊಳ್ಳಲಿದೆ.

ಟಾಪ್ ನ್ಯೂಸ್

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

ಕಿವೀಸ್‌ ವಿರುದ್ದದ ಮೊದಲ ಪಂದ್ಯದಿಂದ ಹರ್ಮನ್‌ ಪ್ರೀತ್‌ ಔಟ್

INDWvsNZW: ಕಿವೀಸ್‌ ವಿರುದ್ದದ ಮೊದಲ ಪಂದ್ಯದಿಂದ ಹರ್ಮನ್‌ ಪ್ರೀತ್‌ ಔಟ್

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

13

Siddapura: ಅಂಪಾರು ಮನೆ ಕಳವು; 24 ತಾಸಿನಲ್ಲಿ ಆರೋಪಿ ಸೆರೆ

15

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಗತಿಯತ್ತ ದಾಪುಗಾಲು

1-wewqewqe

Bidar; ಸಾಲ ಬಾಧೆಯಿಂದ ರೈತ ಆತ್ಮಹ*ತ್ಯೆ

bike

Doddangudde: ದ್ವಿಚಕ್ರ ವಾಹನ ಕಳವು; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.