![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 24, 2024, 9:30 PM IST
ಸಿದ್ದಾಪುರ: ಅಂಪಾರು ಗ್ರಾಮದ ಅಕ್ಕಯ್ಯ(46) ಅವರ ಮನೆಯಲ್ಲಿ ನಡೆದ ಕಳವು ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಕಳವುಗೈದ ಆರೋಪಿಯು ಕಾನೂನಿನ ಸಂಘರ್ಷಕ್ಕೆ ಒಳಗಾದವನಾಗಿದ್ದು, ಆತನನ್ನು ಉಡುಪಿಯ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ.
ಅಕ್ಕಯ್ಯ ಅವರ ಮನೆಯಲ್ಲಿ ಅ.10ರಿಂದ ಅ.21ರ ಮಧ್ಯೆ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಒಡೆದು ದೇವರ 5 ಕಾಣಿಕೆ ಡಬ್ಬಿ, ಟಿವಿ ಸ್ಟಾಂಡ್ ಮೇಲೆ ಇರಿಸಿದ್ದ 2 ಮೊಬೈಲ್ ಹಾಗೂ 1 ಮೊಬೈಲ್ ಚಾರ್ಜರನ್ನು ಕಳವು ಮಾಡಿದ್ದರು. ಕಳವಾದ ಸೊತ್ತಿನ ಮೌಲ್ಯ 10,500 ರೂ., ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನಲ್ಲಿ ಸಾಕಷ್ಟು ಸೊತ್ತುಗಳಿರುವುದು ಪತ್ತೆಯಾಗಿದ್ದು, ಅದನ್ನು ಕಂಡು ಒಂದು ಕ್ಷಣ ದಂಗಾದರು. ಮನೆಯಿಂದ ಕಳವು ಮಾಡಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದರ ಜತೆಯಲ್ಲಿ 60 ಸಾ. ರೂ.ಮೌಲ್ಯದ 9.450 ಗ್ರಾಂ ತೂಕದ ಒಂದು ಜತೆ ಕಿವಿಯೋಲೆ, 1,700 ರೂ. ಮೌಲ್ಯದ 0.280 ಗ್ರಾಂ ತೂಕದ ಸಣ್ಣ ಮಗುವಿನ ಕಿವಿ ಓಲೆ, 3,500 ರೂ.ಮೌಲ್ಯದ 59.760 ಗ್ರಾಂ ಬೆಳ್ಳಿ ಸರ, 240 ರೂ. ಮೌಲ್ಯದ 4.780 ಗ್ರಾಂ ತೂಕದ ಸಣ್ಣ ಬೆಳ್ಳಿ ಸರ, 250 ರೂ. ಮೌಲ್ಯದ 4.080 ಗ್ರಾಂನ ಬೆಳ್ಳಿ ಉಂಗುರ, 700 ರೂ.ಮೌಲ್ಯದ 12.390 ಗ್ರಾಂ ತೂಕದ 5 ಕಾಲು ಉಂಗುರವನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೂಲವನ್ನು ತಿಳಿಯಲು ಪೊಲೀಸರು ಶ್ರಮಿಸುತ್ತಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ನಾಸಿರ್ ಹುಸೇನ್ ಹಾಗೂ ಶಂಭುಲಿಂಗಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
You seem to have an Ad Blocker on.
To continue reading, please turn it off or whitelist Udayavani.