NCP;ಬಾರಾಮತಿಯಲ್ಲಿ ಅಜಿತ್ ವಿರುದ್ಧ ಶರದ್ ಪವಾರ್ ಮೊಮ್ಮಗ ಕಣಕ್ಕೆ
Team Udayavani, Oct 25, 2024, 12:39 AM IST
ಬಾರಾಮತಿ: ಅವಿಭಜಿತ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಭದ್ರಕೋಟೆಯಾಗಿರುವ ಬಾರಾಮತಿ ಕ್ಷೇತ್ರವು ಪವಾರ್ ಕುಟುಂಬ ಸದಸ್ಯರ ನಡುವಿನ ಮತ್ತೂಂದು ಕದನಕ್ಕೆ ಸಾಕ್ಷಿಯಾಗಲಿದೆ. ಅಜಿತ್ ಪವಾರ್ ಬಣದ ಎನ್ಸಿಪಿಯಿಂದ ಸ್ವತಃ ಅಜಿತ್ ಪವಾರ್ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಶರದ್ ಪವಾರ್ ಬಣದ ಎನ್ಸಿಪಿಯಿಂದ ಅಜಿತ್ ಪವಾರ್ ಅವರ ಸೋದರನ ಪುತ್ರ ಯುಗೇಂದ್ರ ಪವಾರ್ ಕಣಕ್ಕಿಳಿಯಲಿದ್ದಾರೆ. ಯುಗೇಂದ್ರ ಪವಾರ್ಲೋಕಸಭಾ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ಪರ ಪ್ರಚಾರ ನಡೆಸಿ, ಅಜಿತ್ ಪತ್ನಿಯ ವಿರುದ್ಧ ಗೆಲುವಿಗೆ ನೆರವಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.