BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.


Team Udayavani, Oct 25, 2024, 12:48 AM IST

BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.

ರಾಮನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಪಿ. ಯೋಗೇಶ್ವರ್‌ ಕುಟುಂಬದ ಒಟ್ಟು ಆಸ್ತಿ ಒಂದೂವರೆ ವರ್ಷದ ಅವಧಿಯಲ್ಲಿ, 28.37 ಕೋಟಿ ರೂ.ಹೆಚ್ಚಳವಾಗಿದೆ. ಇವರ ಸಾಲದ ಮೊತ್ತ 9.85 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. 13 ವರ್ಷಗಳಲ್ಲಿ ಯೋಗೇಶ್ವರ್‌ ಆಸ್ತಿ 6 ಪಟ್ಟು ಹೆಚ್ಚಾಗಿದೆ. 2011ರಲ್ಲಿ 10.81 ಕೋಟಿ ಇದ್ದ ಆಸ್ತಿ 2014 ರಲ್ಲಿ 67.50 ಕೋಟಿ ಹೆಚ್ಚಳವಾಗಿದೆ.

ಯೋಗೇಶ್ವರ್‌ ಸಲ್ಲಿಕೆ ಮಾಡಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ತಮ್ಮ ಹೆಸರಿನಲ್ಲಿ ಒಟ್ಟು 27 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 7 ಕೋಟಿ ಮೌಲ್ಯದ ಚರಾಸ್ತಿ ಇದ್ದರೆ, ಪತ್ನಿ ಶೀಲಾ ಹೆಸರಲ್ಲಿ 25 ಕೋಟಿ ಮೌಲ್ಯದ ಸ್ಥಿರಾಸ್ತಿ, 7 ಕೋಟಿ ಮೌಲ್ಯದ ಚರಾಸ್ತಿ ಇದ್ದು, ಪತಿ ಪತ್ನಿ ಇಬ್ಬರ ಒಟ್ಟಾರೆ ಆಸ್ತಿ ಮೌಲ್ಯ 67 ಕೋಟಿ ರೂ.ನಷ್ಟು ಇದೆ. ಕುಟುಂಬದ ಒಟ್ಟಾರೆ ಸಾಲ 29.29 ಕೋಟಿ ರೂ. ಇದೆ. ಯೋಗೇಶ್ವರ್‌ ವಿರುದ್ಧ 10 ಕ್ರಿಮಿನಲ್‌ ಕೇಸ್‌ಗಳು ಇದ್ದು, ಬೆಂಗಳೂರಿನ ವಿಶೇಷ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಯೋಗೇಶ್ವರ್‌ ಬಿಎಸ್ಪಿ ಪದವೀಧರನಾಗಿದ್ದು, ವಾರ್ಷಿಕ 46.23 ಲಕ್ಷ ರೂ. ಆದಾಯ ಗಳಿಸುತ್ತಿದ್ದರೆ, ಇವರ ಪತ್ನಿ19.36 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಭರತ್‌ ಬೊಮ್ಮಾಯಿ 16 ಕೋಟಿ ರೂ. ಆಸ್ತಿ
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಮೌಲ್ಯದ ಆಸ್ತಿ ಜತೆಗೆ 2.32 ಕೋಟಿ ರೂ. ಸಾಲ ಹೊಂದಿದ್ದಾರೆ. 2.03 ಲಕ್ಷ ನಗದು, ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ಹೊಂದಿದ್ದಾರೆ. ಸಾರ್ವಜನಿಕ ಕಂಪೆನಿಗಳಲ್ಲಿ 1.74 ಲಕ್ಷ, ಖಾಸಗಿ ಕಂಪೆನಿಗಳಲ್ಲಿ 50 ಸಾವಿರ, ಪಾಲುದಾರಿಕೆಯಲ್ಲಿ 1.23 ಕೋಟಿ ರೂ., ಬಂಡವಾಳ ಹೂಡಿದ್ದಾರೆ. ಗೋಲ್ಡ್‌ ಚಿಟ್‌ ಫಂಡ್‌ನ‌ಲ್ಲಿ 70 ಸಾವಿರ, ಮ್ಯೂಚುವಲ್‌ ಫಂಡ್‌ನ‌ಲ್ಲಿ 10.20 ಲಕ್ಷ ತೊಡಗಿಸಿದ್ದಾರೆ. 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಭರತ್‌ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿ ಒಟ್ಟು 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಇಬ್ಬನಿ ಬಳಿ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ.

ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್‌, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಭರತ್‌ ಅವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಭರತ್‌ ಬೊಮ್ಮಾಯಿ ಒಟ್ಟು 16.17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಭರತ್‌ ಬೊಮ್ಮಾಯಿ ಗೃಹ, ವೈಯಕ್ತಿಕ ಸೇರಿ ಒಟ್ಟು 2.32 ಕೋಟಿ ಸಾಲ ಹೊಂದಿದ್ದಾರೆ.

ಅನ್ನಪೂರ್ಣ ಬಳಿ 1.70 ಕೋಟಿ ಆಸ್ತಿ
ಬಳ್ಳಾರಿ: ಸಂಡೂರು ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಪತಿಯಿಂದಲೇ ಸಾಲ ಪಡೆದು, ಅವರಿಗಿಂತ ಹೆಚ್ಚು ಸಾಲ ಹೊಂದಿದ್ದಾರೆ. ಪತಿ, ಸಂಸದ ಈ.ತುಕರಾಂ ಅವರಿಂದ 92 ಲಕ್ಷ, ಇತರ ವ್ಯಕ್ತಿಗಳಿಂದ 10.25 ಲಕ್ಷ ರೂ. ಸೇರಿ ಒಟ್ಟು 1.2 ಕೋಟಿ ರೂ. ಸಾಲ ಹೊಂದಿದ್ದಾರೆ. ಅನ್ನಪೂರ್ಣ ಅವರು ಯಶವಂತಪುರದಲ್ಲಿ 2 ನಿವೇಶನ, 560 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 44,37,315 ಸ್ಥಿರಾಸ್ತಿ, ಪೀಠೊಪಕರಣ, ಕಟ್ಟಡ ಸೇರಿ 63,21,380 ಚರಾಸ್ತಿ ಸೇರಿ ಒಟ್ಟು 1.7 ಕೋಟಿ ರೂ. ಮೌಲ್ಯದ ಸ್ಥಿರ, ಚರಾಸ್ತಿ ಹೊಂದಿದ್ದಾರೆ.

ಕೈಯಲ್ಲಿ 2.57 ಲಕ್ಷ ರೂ. ನಗದು ಹಣ ಹೊಂದಿದ್ದು, ಎಸ್‌ಬಿಐ, ಎಸ್‌ಪಿಎಸ್‌ ಸಂಡೂರು ಬ್ಯಾಂಕ್‌ನಲ್ಲಿ 25 ಲಕ್ಷಕ್ಕೂ ಹೆಚ್ಚು ಠೇವಣಿ ಹೊಂದಿದ್ದಾರೆ. ಪತಿ, ಸಂಸದ ಈ.ತುಕರಾಂ ಬ್ಯಾಂಕ್‌, ಇತರೆ ವ್ಯಕ್ತಿಗಳಿಂದ 30 ಲಕ್ಷ ಸಾಲ ಪಡೆದಿದ್ದಾರೆ. ಇವರ ಬಳಿ 350 ಗ್ರಾಂ ಚಿನ್ನಾಭರಣ, ಕಾರು, ನಿವೇಶನ ಸೇರಿ ಒಟ್ಟು 1.90 ಕೋಟಿ ಮೌಲ್ಯದ ಚರ, ಸ್ಥಿರಾಸ್ತಿ ಇದೆ. ಅನ್ನಪೂರ್ಣ ಮಕ್ಕಳಾದ ವಂದನಾ, ಚೈತನ್ಯಾ, ರಘನಂದನ ಬಳಿ ಕ್ರಮವಾಗಿ 120 ಗ್ರಾಂ, 40 ಗ್ರಾಂ ಹಾಗೂ ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ 9.72 ಲಕ್ಷ ರೂ. ಹಣವಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

Nikhil

Chennapattana By Poll: ಕಣಕ್ಕೆ ನಿಖಿಲ್‌, ಜಯಮುತ್ತು? ಇನ್ನೂ ಗೊಂದಲದಲ್ಲಿ ಜೆಡಿಎಸ್‌

Exclusive Interview: ನಾನೇ ಕಟ್ಟಿದ ಮನೆಯಲ್ಲಿ ಇರಲಾಗಲಿಲ್ಲ: ಯೋಗೇಶ್ವರ್‌

Exclusive Interview: ನಾನೇ ಕಟ್ಟಿದ ಮನೆಯಲ್ಲಿ ಇರಲಾಗಲಿಲ್ಲ: ಯೋಗೇಶ್ವರ್‌

CPY-annapoorana

By Election: ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಎಐಸಿಸಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.