New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್‌ ನಿವೃತ್ತಿ

Team Udayavani, Oct 25, 2024, 9:16 AM IST

2

ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ತಂಡ ಮಾಜಿ ನಾಯಕಿ ರಾಣಿ ರಾಂಪಾಲ್‌ ಗುರುವಾರ ನಿವೃತ್ತಿ ಘೋಷಿಸುವ ಮೂಲಕ ತನ್ನ 16 ವರ್ಷಗಳ ವರ್ಣಮಯ ಹಾಕಿ ಬಾಳ್ವೆಗೆ ಅಂತ್ಯ ಹಾಡಿದ್ದಾರೆ.

29ರ ಹರೆಯದ ರಾಂಪಾಲ್‌ ವನಿತಾ ಹಾಕಿಯ ಅತ್ಯಂತ ಯಶಸ್ವಿ ಆಟ ಗಾರ್ತಿಯರಲ್ಲಿ ಒಬ್ಬರಾಗಿದ್ದರು. 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆದಿರುವುದು ಅವರ ನಾಯಕತ್ವದಲ್ಲಿ ಭಾರತೀಯ ತಂಡದ ಉತ್ಕೃಷ್ಟ ನಿರ್ವಹಣೆಯಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅವರು 2020ರಲ್ಲಿ ಮೇಜರ್‌ ಧ್ಯಾನ್‌ಚಂದರ್‌ ಖೇಲ್‌ ರತ್ನ ಪ್ರಶಸ್ತಿ ಪಡೆದಿದ್ದರು.

ಹದಿನಾಲ್ಕರ ಹರೆಯದ ವೇಳೆ ಒಲಿಂಪಿಕ್‌ ಅರ್ಹತಾ ಕೂಟವೊಂದರಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದ ರಾಂಪಾಲ್‌ ಅವರು ಭಾರತ ಪರ 254 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಫಾರ್ವರ್ಡ್‌ ಆಟಗಾರ್ತಿ ಆಗಿದ್ದ ಅವರು 205 ಗೋಲು ಹೊಡೆದ ಸಾಧನೆ ಮಾಡಿದ್ದಾರೆ. ಅವರನ್ನು ಇದೀಗ ಸಬ್‌ ಜೂನಿಯರ್‌ ವನಿತಾ ತಂಡದ ರಾಷ್ಟ್ರೀಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.

ಹರಿಯಾಣದ ಸಣ್ಣ ಪಟ್ಟಣದಲ್ಲಿ ಕಡು ಬಡತನದ ಕುಟುಂಬದಿಂದ ಬಂದ ರಾಂಪಾಲ್‌ ಹಾಕಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುತ್ತ ರಾಷ್ಟ್ರೀಯ ತಂಡಕ್ಕೆ ನೇಮಕಗೊಂಡಿದ್ದರು. ಅವರ ತಂದೆ ಎತ್ತಿನ ಗಾಡಿ ಎಳೆಯುವ ವೃತ್ತಿ ಮಾಡುತ್ತಿದ್ದರು. ‘ಇದೊಂದು ಮಹೋನ್ನತ ಪ್ರಯಾಣವಾಗಿದೆ. ನಾನು ಭಾರತಕ್ಕಾಗಿ ಇಷ್ಟು ದಿನ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಬಾಲ್ಯದಿಂದಲೂ ಸಾಕಷ್ಟು ಬಡತನವನ್ನು ಕಂಡಿದ್ದ ನಾನು ಯಾವಾಗಲೂ ಏನನ್ನಾದರೂ ಸಾಧನೆ ಮಾಡಲು ದೇಶವನ್ನು ಪ್ರತಿನಿಧಿಸುವತ್ತ ಗಮನ ಹರಿಸಿದೆ ಎಂದು ರಾಂಪಾಲ್‌ ತಿಳಿಸಿದರು.

ಟಾಪ್ ನ್ಯೂಸ್

Shiggaon; Ajjamfir Qadri said that Yasir Khan is a BJP agent

Shiggaon ‘ಕೈ’ ಭಿನ್ನಮತ; ಯಾಸಿರ್‌ ಖಾನ್‌ ಬಿಜೆಪಿ ಏಜೆಂಟ್‌ ಎಂದ ಅಜ್ಜಂಫೀರ್‌ ಖಾದ್ರಿ

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

14-rabakavi-1

Rabkavi Banhatti: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

Kadur: ಮಗು ನಾಪತ್ತೆ ಪ್ರಕರಣ ಸುಖಾಂತ್ಯ; ಮಗು ಮರೆತು ಕುಡಿಯಲು ಹೋಗಿದ್ದ ಅಪ್ಪ!

Kadur: ಮಗು ನಾಪತ್ತೆ ಪ್ರಕರಣ ಸುಖಾಂತ್ಯ; ಮಗು ಮರೆತು ಕುಡಿಯಲು ಹೋಗಿದ್ದ ಅಪ್ಪ!

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Rawalpindi: ಸಜಿದ್‌ ದಾಳಿಗೆ ಕುಸಿದ ಇಂಗ್ಲೆಂಡ್‌

7

Mirpur Test: ಕಾಗಿಸೊ ರಬಾಡ 39ಕ್ಕೆ 6 ವಿಕೆಟ್‌; ದಕ್ಷಿಣ ಆಫ್ರಿಕಾ 7 ವಿಕೆಟ್‌ ಜಯಭೇರಿ

6

Ahmedabad: ನ್ಯೂಜಿಲ್ಯಾಂಡ್‌ ವಿರುದ್ಧದ ವನಿತಾ ಏಕದಿನ ಸರಣಿ; ಭಾರತ ವನಿತೆಯರಿಗೆ ಗೆಲುವು

4

Hyderabad: ಯುಪಿ ವಿರುದ್ಧ ಗೆದ್ದ ಬೆಂಗಾಲ್‌

4

New Delhi: ಸರಕಾರದ ಹಸ್ತಕ್ಷೇಪ ಕುಸ್ತಿ ವಿಶ್ವ ಪಂದ್ಯಾವಳಿಯಿಂದ ಭಾರತ ಹೊರಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Shiggaon; Ajjamfir Qadri said that Yasir Khan is a BJP agent

Shiggaon ‘ಕೈ’ ಭಿನ್ನಮತ; ಯಾಸಿರ್‌ ಖಾನ್‌ ಬಿಜೆಪಿ ಏಜೆಂಟ್‌ ಎಂದ ಅಜ್ಜಂಫೀರ್‌ ಖಾದ್ರಿ

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

14-rabakavi-1

Rabkavi Banhatti: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

Kadur: ಮಗು ನಾಪತ್ತೆ ಪ್ರಕರಣ ಸುಖಾಂತ್ಯ; ಮಗು ಮರೆತು ಕುಡಿಯಲು ಹೋಗಿದ್ದ ಅಪ್ಪ!

Kadur: ಮಗು ನಾಪತ್ತೆ ಪ್ರಕರಣ ಸುಖಾಂತ್ಯ; ಮಗು ಮರೆತು ಕುಡಿಯಲು ಹೋಗಿದ್ದ ಅಪ್ಪ!

18(1)

Kaup ಪೇಟೆ ಕೊಳಚೆಗೆ ಕೃಷಿ ಭೂಮಿಗಳೇ ಬಲಿ!; 80ಕ್ಕೂ ಅಧಿಕ ಮನೆಗಳಿಗೆ ನಿತ್ಯ ಯಾತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.