Bengaluru: ರಾಜಧಾನಿಯಲ್ಲಿ ವಾಲಿದ ಆರಂತಸ್ತಿನ ಕಟ್ಟಡ

ನಗರದ ಹೊರಮಾವು ಸಮೀಪದ ನಂಜಪ್ಪ ಗಾರ್ಡನ್‌ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ

Team Udayavani, Oct 25, 2024, 10:18 AM IST

6-bng

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೂಂದು ನಿರ್ಮಾಣ ಹಂತದ ಕಟ್ಟಡ ವಾಲಿದ್ದು, ಕಟ್ಟಡದ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಆಂತಕ ತಂದಿದೆ.

ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ದೊಡ್ಡ ದುರಂತವೇ ಸಂಭವಿಸಿ 8 ಜನ ಕಾರ್ಮಿಕರು ಸಾವನ್ನಪ್ಪಿದ್ದ ಘಟನೆಯ ಬೆನ್ನಲ್ಲೇ ನಂಜಪ್ಪ ಗಾರ್ಡನ್‌ ನಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಮತ್ತೂಂದು ಕಟ್ಟಡ ವಾಲಿದ್ದು, ಜನರಲ್ಲಿ ಆತಂಕ ಮೂಡಿದೆ. ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್‌ ನಲ್ಲಿರುವ ಪುಟ್ಟಪ್ಪ ಮಾಲಿಕತ್ವದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದೆ.

12×30 ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ವಾಲಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಬಿಬಿಎಂಪಿ ಸೂಚನೆ ಬೆನ್ನಲ್ಲೇ ಕಟ್ಟಡ ತೆರವಿಗೆ ಮಾಲಿಕರು ಮುಂದಾಗಿದ್ದಾರೆ. ಕೆಳ ಅಂತಸ್ತು ಸೇರಿದಂತೆ 4 ಅಂತಸ್ತಿನ ಕಟ್ಟಡಕ್ಕೆ ಮಾಲಿಕ ಪುಟ್ಟಪ್ಪ ಅನುಮತಿ ಪಡೆದಿದ್ದರು. ಆದರೆ ನಿಯಮ ಮೀರಿ 6 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ನೋಟಿಸ್‌ಗೆ ಉತ್ತರ ನೀಡಿರುವ ಮಾಲಿಕ, “ಕಟ್ಟಡವನ್ನು ಸ್ವಂತ ಖರ್ಚಿನಲ್ಲಿ ತೆರವು ಮಾಡುವು ದಾಗಿ’ ಪತ್ರ ಬರೆದಿದ್ದಾರೆ. ಸದ್ಯ ವಾಲಿದ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಸಂಬಂಧ ಬಾಣಸವಾಡಿ ಉಪ ವಿಭಾಗದ ಎಸಿಪಿ ಉಮಾಶಂಕರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಟ್ಟಡದ ಅಕ್ಕಪಕ್ಕ ನಿವಾಸಿಗಳ ಸ್ಥಳಾಂತರ

ನಂಜಪ್ಪ ಗಾರ್ಡ್‌ನ ಬಳಿಯ ಬಾಬುಸಾಪಾಳ್ಯದಲ್ಲಿರುವ 5 ಮಹಡಿಗಳ ಅನಧಿಕೃತ ಕಟ್ಟಡ ತೆರವಿನ ಬಗೆ ಸ್ವಯಂ ಪ್ರೇರಿತವಾಗಿ ಕಟ್ಟಡ ಮಾಲಿಕರು ಒಪ್ಪಿಗೆ ಪತ್ರ ನೀಡಿದ್ದು, ಈ ಕಟ್ಟಡದ ಆಜು-ಬಾಜಿನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಖಾಲಿಮಾಡಿಸಲಾಗಿದೆ ಎಂದು ಚೇಳೆಕೆರೆ ವಾರ್ಡ್‌ನ ಬಿಬಿಬಿಎಂಪಿ ಸಹಾಯಕ ಅಭಿಯಂತರರು ತಿಳಿಸಿದ್ದಾರೆ. ಜತೆಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಮಾಲಿಕರು ಅನಧಿಕೃತ ಕಟ್ಟಡ ತೆರವುಗೊಳಿಸುತ್ತಿರುವುದರಿಂದ ಇಲಾಖೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಲು ಪೊಲೀಸ್‌ ಇಲಾಖೆಗೆ ಕೋರಲಾಗಿದೆ ಎಂದು ಹೇಳಿದ್ದಾರೆ.

ಅನಧಿಕೃತ ಕಟಡ ತೆರವಿಗೆ ಡಿಸಿಎಂ ಡಿಕೆಶಿ ಸೂಚನೆ

ನಂಜಪ್ಪ ಗಾರ್ಡನ್‌ ಪ್ರದೇಶದಲ್ಲಿ 12x 30 ಅಡಿ ನಿವೇಶನದಲ್ಲಿ ನೆಲಮಹಡಿ ಜೊತೆಗೆ 5 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಪ್ರತಿ ವಲಯದಲ್ಲಿ ಅಕ್ರಮ ಮತ್ತು, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಹಾಗೂ ಪರವಾನಗಿ ಪಡೆಯದೆ ನಿಯಮ ಉಲ್ಲಂ ಸಿ ನಿರ್ಮಿಸಿರುವ ಕಟ್ಟಡಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ಮುಲಾಜಿಲ್ಲದೇ ತ್ವರಿತಗತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸಬಾರದು ಎಂದು ತಾಕೀತು ಮಾಡಿದರು.

ಟಾಪ್ ನ್ಯೂಸ್

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ

15-dk

Bengaluru: ನಗರದಲ್ಲಿ ಅನಧಿಕೃತ ಕಟ್ಟಡ ಪತ್ತೆಗೆ ಅ.28ರಿಂದ ಸಮೀಕ್ಷೆ : ಡಿಕೆಶಿ

More MLAs from BJP may come to Congress: Eshwar Khandre

Hubli: ಬಿಜೆಪಿಯಿಂದ ಹೆಚ್ಚಿನ ಶಾಸಕರು ಕಾಂಗ್ರೆಸ್ ಗೆ ಬರಬಹುದು: ಈಶ್ವರ ಖಂಡ್ರೆ

ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ

Channapatna By election: ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ

Shiggaon; Ajjamfir Qadri said that Yasir Khan is a BJP agent

Shiggaon ‘ಕೈ’ ಭಿನ್ನಮತ; ಯಾಸಿರ್‌ ಖಾನ್‌ ಬಿಜೆಪಿ ಏಜೆಂಟ್‌ ಎಂದ ಅಜ್ಜಂಫೀರ್‌ ಖಾದ್ರಿ

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

Pakistan: ಅಂದು ಬಿನ್‌ ಲಾಡೆನ್‌ ಅಡಗಿದ್ದ ಅಬೋಟಾಬಾದ್‌ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!

14-rabakavi-1

Rabkavi Banhatti: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-railway

Bengaluru: ದೀಪಾವಳಿ ಪ್ರಯುಕ್ತ 14 ರೈಲುಗಳಿಗೆ ಹೆಚ್ಚುವರಿ ಬೋಗಿ

15-dk

Bengaluru: ನಗರದಲ್ಲಿ ಅನಧಿಕೃತ ಕಟ್ಟಡ ಪತ್ತೆಗೆ ಅ.28ರಿಂದ ಸಮೀಕ್ಷೆ : ಡಿಕೆಶಿ

11-bng

Politics: ಬೆಂಗಳೂರನ್ನು ಕಡೆಗಣಿಸಿದ ಕಾಂಗ್ರೆಸ್‌: ಅಶೋಕ್‌ ವಾಗ್ಧಾಳಿ

10-bng

Bengaluru: ಅವಶೇಷಗಳಡಿ ಒಬ್ಬ ಕಾರ್ಮಿಕನಿಗೆ ಶೋಧ

9-bng

Bengaluru: ಮತ್ತೂಬ್ಬ ಎಂಜಿನಿಯರ್‌ ತಲೆದಂಡ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

16-railway

Bengaluru: ದೀಪಾವಳಿ ಪ್ರಯುಕ್ತ 14 ರೈಲುಗಳಿಗೆ ಹೆಚ್ಚುವರಿ ಬೋಗಿ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

Sindhanur: ಬೈಕ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ದುರ್ಮರಣ

15-dk

Bengaluru: ನಗರದಲ್ಲಿ ಅನಧಿಕೃತ ಕಟ್ಟಡ ಪತ್ತೆಗೆ ಅ.28ರಿಂದ ಸಮೀಕ್ಷೆ : ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.