Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

ಹುಚ್ಚು ಪ್ರೀತಿಗೆ ಕರಿಮಣಿ ಮಾಲಿಕನೇ ಶವವಾದ

Team Udayavani, Oct 25, 2024, 5:45 PM IST

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

ಉಡುಪಿ: ಕರಾವಳಿಯಲ್ಲಿ ಭಾರಿ ಸುದ್ದಿಯಾದ ಕಾರ್ಕಳ ತಾಲೂಕಿನ ಅಜೆಕಾರಿನ ಬಾಲಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹಲವು ವಿಚಾರಗಳು ಹೊರ ಬರುತ್ತಿದೆ. ಬಾಲಕೃಷ್ಣರ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ಮಧ್ಯರಾತ್ರಿ ಬಾಲಕೃಷ್ಣರ ಮುಖಕ್ಕೆ ಬೆಡ್‌ ಶೀಟ್ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ.

ಅಜೆಕಾರು ಮರ್ಣೆ ಗ್ರಾಮದ ಬಾಲಕೃಷ್ಣ (44) ಕೊಲೆ ಪ್ರಕರಣದಲ್ಲಿ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಹೆಗ್ಡೆ ಎಂಬ ಇಬ್ಬರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ,

ಆಗಿದ್ದೇನು?

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕೃಷ್ಣರಿಗೆ ಕಾರ್ಕಳ, ಮಣಿಪಾಲ ಕೆಎಂಸಿ, ಮಂಗಳೂರಿನ ವೆನ್‌ಲಾಕ್‌ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣಮುಖರಾದ ಕಾರಣ ಅ.19 ರಂದು ರಾತ್ರಿ ಅಜೆಕಾರಿನ ದೆಪ್ಪುತ್ತೆಗೆ ಕರೆದುಕೊಂಡು ಬರಲಾಗಿತ್ತು. ಮಧ್ಯರಾತ್ರಿ ಸುಮಾರು 3:30 ಗಂಟೆಗೆ ಮನೆಯಲ್ಲಿ ಬೊಬ್ಬೆ ಕೇಳಿಬಂದಿತ್ತು. ಬಾಲಕೃಷ್ಣ ತಂದೆ ಸಂಜೀವ ಹೋಗಿ ನೋಡಿದಾಗ ಬಾಲಕೃಷ್ಣ ಮಾತನಾಡದ ಸ್ಥಿತಿಯಲ್ಲಿದ್ದರು. ಬೆಳಿಗ್ಗೆ 8 ಗಂಟೆಗೆ ಅಜೆಕಾರಿನ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಬಾಲಕೃಷ್ಣ ಮೃತ ಪಟ್ಟಿರುವುದು ತಿಳಿದು ಬಂದಿತ್ತು.

ಒಮ್ಮೆಲೆ ಅನಾರೋಗ್ಯದಿಂದ ಬಾಲಕೃಷ್ಣ ಮೃತಪಟ್ಟ ಬಗ್ಗೆ ಮನೆಯವರು ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದರು.

ಇನ್ಸ್ಟಾಗ್ರಾಮ್‌ ಲವ್‌

ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಪ್ರತಿಮಾಗೆ ಇನ್ಸ್ಟಾಗ್ರಾಮ್‌ ನಲ್ಲಿ ಸಕ್ರಿಯವಾಗಿದ್ದಳು. ಗಂಡನೊಂದಿಗೂ ರೀಲ್ಸ್‌ ಗಳನ್ನು ಮಾಡುತ್ತಿದ್ದಳು. ಇದೇ ವೇಳೆ ಕಾರ್ಕಳದ ದಿಲೀಪ್‌ ಹೆಗ್ಡೆ ಎಂಬಾತ ಇನ್ಸ್ಟಾಗ್ರಾಮ್‌ ನಲ್ಲಿ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಅದು ಅನೈತಿಕ ಸಂಬಂಧದತ್ತ ಬೆಳೆದಿತ್ತು. ತಮ್ಮ ಸಂಬಂಧಕ್ಕೆ  ಗಂಡ ಬಾಲಕೃಷ್ಣ ಅಡ್ಡಿ ಬರಬಹುದೆಂದು ಇಬ್ಬರೂ ಮಾತನಾಡಿಕೊಂಡು ಆತನನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದಾರೆ.

ಅವರ ಸಂಚಿನಂತೆ ದಿಲೀಪ್‌ ಹೆಗ್ಡೆಯು ಪ್ರತಿಮಾಳಿಗೆ ವಿಷ ಪದಾರ್ಥವನ್ನು ತಂದು ಕೊಟ್ಟಿದ್ದು, ಅದನ್ನು ಬಾಲಕೃಷ್ಣರವರಿಗೆ ಊಟದಲ್ಲಿ ಸೇರಿಸಿ ಕೊಡುವಂತೆ ತಿಳಿಸಿದ್ದ. ಅದರಂತೆ ಅವಳು ಊಟದಲ್ಲಿ ಸೇರಿಸಿ ಹಲವು ಬಾರಿ ಕೊಟ್ಟಿದ್ದಾಳೆ. ಇದರಿಂದ ಬಾಲಕೃಷ್ಣ ಅನಾರೋಗ್ಯಗೊಂಡು ಹಾಸಿಗೆ ಹಿಡಿದಿದ್ದ. ಕೊನೆಗೆ ಅ.20ರಂದು ಗಂಡನನ್ನು ಶಾಶ್ವತವಾಗಿ ತೊಲಗಿಸುವ ಉಪಾಯ ಹೂಡಿದ್ದ ಪ್ರತಿಮಾ, ದಿಲೀಪ್‌ ಹೆಗ್ಡೆಯನ್ನು ದೆಪ್ಪುತ್ತೆಯ ಮನೆಗೆ ಬರಲು ಹೇಳಿದ್ದಳು.

ಪ್ರತಿಮಾ ಮತ್ತು ದಿಲೀಪ್

ಮಧ್ಯರಾತ್ರಿ 1:30 ಗಂಟೆಯ ಸುಮಾರಿಗೆ ಪ್ರತಿಮಾಳ ಮನೆಗೆ‌ ಆತ ಬಂದಿದ್ದು, ದಿಲೀಪ್‌ ಹೆಗ್ಡೆ ಮತ್ತು ಪ್ರತಿಮಾ ಇಬ್ಬರೂ ಸೇರಿ ಬೆಡ್‌ ಶೀಟನ್ನು ಬಾಲಕೃಷ್ಣ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ. ಇದೀಗ ಇಬ್ಬರು ಕೂಡಾ ಪೊಲೀಸರ ಅತಿಥಿಗಳಾಗಿದ್ದಾರೆ.

ಗಂಡನೊಂದಿಗೆ ಸೇರಿ ʼಕರಿಮಣಿ ಮಾಲಿಕ ನೀನಲ್ಲʼ ಎಂದು ರೀಲ್ಸ್‌ ಮಾಡಿದ್ದಾಕೆ ಕೊನೆಗೂ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ʼಇನ್ನಿಲ್ಲʼ ಎಂದು ಮಾಡಿದ್ದು ಮಾತ್ರ ವಿಪರ್ಯಾಸ.

ಟಾಪ್ ನ್ಯೂಸ್

1-asasa

Inflation; ಬಡವರ ಕನಸುಗಳನ್ನು ಕಸಿದುಕೊಳ್ಳಲಾಗಿದೆ: ವಿಡಿಯೋ ಹಂಚಿಕೊಂಡ ರಾಹುಲ್

sanjay-raut

Defamation case; ಸಂಜಯ್ ರಾವತ್‌ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು

1-eweqwewq

Maharashtra Election; 5 ಸೀಟು ಕೊಡಿ, ಇಲ್ಲದಿದ್ದರೆ 25 ರಲ್ಲಿ ಹೋರಾಟ ಎಂದ ಎಸ್ ಪಿ

1-aree

Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

1-a-siddu

By Polls; ಭಾವನಾತ್ಮಕ ಮಾತು, ಕಣ್ಣೀರು ನೋಡಿ ಜನರು ಬೇಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

1–a-crick

2nd Test ; ಸಂಕಷ್ಟದಲ್ಲಿ ಭಾರತ : 301 ರನ್ ಲೀಡ್ ಪಡೆದ ನ್ಯೂಜಿಲ್ಯಾಂಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Udupi: ರೈಲು ಬೋಗಿಯೊಳಗೆ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಪ್ರಯಾಣಿಕ ಸಾವು

Udupi: ರೈಲು ಬೋಗಿಯೊಳಗೆ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಪ್ರಯಾಣಿಕ ಸಾವು

18(1)

Kaup ಪೇಟೆ ಕೊಳಚೆಗೆ ಕೃಷಿ ಭೂಮಿಗಳೇ ಬಲಿ!; 80ಕ್ಕೂ ಅಧಿಕ ಮನೆಗಳಿಗೆ ನಿತ್ಯ ಯಾತನೆ

karkala

Karkala: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ – ದೂರು ದಾಖಲು

13

Basroor: ಎರಡು ದಶಕಗಳಿಂದ ಪಾಳು ಬಿದ್ದ ಮಾರ್ಗೋಳಿ ಸಮಾಜ ಮಂದಿರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-asasa

Inflation; ಬಡವರ ಕನಸುಗಳನ್ನು ಕಸಿದುಕೊಳ್ಳಲಾಗಿದೆ: ವಿಡಿಯೋ ಹಂಚಿಕೊಂಡ ರಾಹುಲ್

sanjay-raut

Defamation case; ಸಂಜಯ್ ರಾವತ್‌ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು

1-eweqwewq

Maharashtra Election; 5 ಸೀಟು ಕೊಡಿ, ಇಲ್ಲದಿದ್ದರೆ 25 ರಲ್ಲಿ ಹೋರಾಟ ಎಂದ ಎಸ್ ಪಿ

1-aree

Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.