INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

Team Udayavani, Oct 26, 2024, 10:36 AM IST

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

ಪುಣೆ: ಸರಣಿ ಸೋಲಿನ ಸಂಕಷ್ಟಕ್ಕೆ ಸಿಲುಕಿರುವ ಭಾರತವು ಸರಣಿ ಜೀವಂತವಾಗಿರಿಸಿಕೊಳ್ಳಲು ಪುಣೆ ಪಂದ್ಯದಲ್ಲಿ ಹರಸಾಹಸ ಪಡುತ್ತಿದೆ. ನ್ಯೂಜಿಲ್ಯಾಂಡ್‌ ತಂಡವು ಎರಡನೇ ಇನ್ನಿಂಗ್ಸ್‌ ನಲ್ಲಿ 255 ರನ್‌ ಗಳಿಗೆ ಆಲೌಟಾಗಿದೆ. ಪುಣೆ ಪಂದ್ಯ ಗೆಲ್ಲಲು ಭಾರತಕ್ಕೆ 359 ರನ್‌ ಗುರಿ ನೀಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 198 ರನ್‌ ಗೆ ಐದು ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ ಇಂದು ಆರಂಭದಲ್ಲಿ ಸತತ ವಿಕೆಟ್‌ ಕಳೆದುಕೊಂಡಿತು. ಆದರೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ಗ್ಲೆನ್‌ ಫಿಲಿಪ್ಸ್‌ ಸಿಕ್ಸರ್‌ ಬೌಂಡರಿ ಆಟವಾಡಿ 48 ರನ್‌ ಗಳಿಸಿ ಕಿವೀಸ್‌ ತಂಡದ ಮೊತ್ತವನ್ನು 255ಕ್ಕೆ ಏರಿಸಿದರು. ಟಾಮ್‌ ಬ್ಲಂಡೆಲ್‌ 41 ರನ್‌ ಗಳಿಸಿದರು. ಎರಡನೇ ದಿನದಾಟದಲ್ಲಿ ನಾಯಕ ಟಾಮ್‌ ಲ್ಯಾಥಂ 86 ರನ್‌ ಮಾಡಿದ್ದರು.

ಮೊದಲ ಇನ್ನಿಂಗ್ಸ್‌ ನಲ್ಲಿ ಏಳು ವಿಕೆಟ್‌ ಪಡೆದಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತೆ ನಾಲ್ಕು ವಿಕೆಟ್‌ ಕಿತ್ತರೆ, ಜಡೇಜಾ ಮೂರು ಮತ್ತು ಅಶ್ವಿನ್‌ ಎರಡು ವಿಕೆಟ್‌ ಪಡೆದರು.

ಸರಣಿ ಉಳಿಸಿಕೊಳ್ಳಬೇಕಾದರೆ ಭಾರತವು 359 ರನ್‌ ಗಳಿಸಿಲೇಬೇಕಾದ ಒತ್ತಡದಲ್ಲಿದೆ. ಸ್ಪಿನ್‌ ಟ್ರ್ಯಾಕ್‌ ನಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಪರದಾಡಿದ್ದ ರೋಹಿತ್‌ ಹುಡುಗರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.

ಚೊಚ್ಚಲ ಟೆಸ್ಟ್‌ ಸರಣಿ ಜಯದತ್ತ ಕಿವೀಸ್‌

ನ್ಯೂಜಿಲೆಂಡ್‌ 1955-56ರಲ್ಲಿ ಭಾರತದಲ್ಲಿ ಆಡಲಾರಂಭಿಸಿದ ಬಳಿಕ ಟೆಸ್ಟ್‌ ಸರಣಿ ಜಯಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಸರಣಿ ಜಯಿಸುವ ಸನಿಹ ತಲುಪಿದೆ. ವಿಶೇಷವೆಂದರೆ ಇದುವರೆಗೆ ಕಿವೀಸ್‌ ಕೇವಲ 3 ಬಾರಿ ಭಾರತದಲ್ಲಿ ಟೆಸ್ಟ್‌ ಪಂದ್ಯಗಳನ್ನು ಗೆದ್ದಿದೆ.

ಸತತ 18 ಸರಣಿ ಜಯದ ಓಟ ಅಂತ್ಯ?

ಭಾರತ ತವರಲ್ಲಿ ಕೊನೆಯ ಸಲ ಸರಣಿ ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್‌ ವಿರುದ್ಧ ಸೋತಿತ್ತು. ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡು ಬಂದಿದೆ. ಈಗ ಆ ಅಜೇಯ ಓಟ ಅಂತ್ಯವಾಗುವ ಸುಳಿವು ಸಿಕ್ಕಿದೆ

ಟಾಪ್ ನ್ಯೂಸ್

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

ಮುಂದಿನ ಸೀಸನ್ ಐಪಿಎಲ್‌ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

IPL 2025: ಮುಂದಿನ ಐಪಿಎಲ್‌ ಸೀಸನ್ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-a-kho-kho

Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್‌

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.