Bengaluru: 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಸಿಸಿಬಿ ಪೊಲೀಸರಿಂದ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಬಂಧನ
Team Udayavani, Oct 26, 2024, 11:33 AM IST
![8-bng](https://www.udayavani.com/wp-content/uploads/2024/10/8-bng-4-620x372.jpg)
![8-bng](https://www.udayavani.com/wp-content/uploads/2024/10/8-bng-4-620x372.jpg)
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಡ್ರಗ್ಸ್ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ನೈಜೀರಿಯಾ ಮೂಲದ ಯುಜೋವುಂ ಚಿ ಕ್ವ್ಡೂ ಲಿವೋನಸ್ (32) ಬಂಧಿತ.
1.50 ಕೋಟಿ ರೂ. ಡ್ರಗ್ಸ್, ತೂಕದ ಯಂತ್ರ, ಮೊಬೈಲ್, ಬೈಕ್ ಜಪ್ತಿ ಮಾಡಲಾಗಿದೆ. ನ್ಯೂ ಮೈಕೋ ರೋಡ್ ಲಕ್ಕಸಂದ್ರದ ಬಳಿ ಆರೋಪಿ ಎಂಡಿಎಂಎ ಕ್ರಿಸ್ಟಲ್ ಅನ್ನು ಬೈಕ್‌ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ.
ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ 2018ರಲ್ಲಿ ಮುಂಬೈನಲ್ಲೂ ಪ್ರಕರಣ ದಾಖಲಾಗಿತ್ತು ಎಂಬುದು ಆತನ ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಯಿಂದ ಕಾಲೇಜು ವಿದ್ಯಾರ್ಥಿಗಳು, ಟೆಕಿಗಳು, ಉನ್ನತ ಹುದ್ದೆಯಲ್ಲಿರುವವರು ಡ್ರಗ್ಸ್ ಖರೀದಿಸುತ್ತಿದ್ದ ಆರೋಪ ಕೇಳಿ ಬಂದಿದೆ.