Sagarmala project: ವಿಜಯಪುರ-ಬಾಗಲಕೋಟೆಯ ಜಲಸಾರಿಗೆ ಯೋಜನಾ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

Team Udayavani, Oct 26, 2024, 12:57 PM IST

Sagarmala project: ವಿಜಯಪುರ-ಬಾಗಲಕೋಟೆಯ ಜಲಸಾರಿಗೆ ಯೋಜನಾ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

ಬಾಗಲಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಸಾಗರಮಾಲಾ ಯೋಜನೆಯಡಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಜಲಸಾರಿಗೆ ಯೋಜನೆ ಕೈಗೊಳ್ಳಲಾಗುತ್ತಿದೆ.

ಉದ್ದೇಶಿತ‌ ಯೋಜನಾ ಸ್ಥಳಗಳಾದ ವಿಜಯಪುರ ಜಿಲ್ಲೆಯ ಆಲಮಟ್ಟಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೆರಕಲ್‌ ಗ್ರಾಮದ ಬಳಿ ಉದ್ದೇಶಿತ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್‌ ರಾಯ್‌ ಪುರ ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್‌ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯಸಾಧ್ಯತೆ, ಯೋಜನೆಯ ಭೂಸ್ವಾಧೀನ ಮತ್ತು ಜಲಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಆಣೆಕಟ್ಟಿನ ಕೆಳಭಾಗದಲ್ಲಿರುವ 25 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯ ಜನರಿಗೆ ವಿವಿಧ ಆರ್ಥಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನದಿ ತೀರದಲ್ಲಿ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಿದ್ದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರ ಗಮನ ಹೆಚ್ಚು ಸೆಳೆಯಬಹುದು. ಜೊತೆಗೆ ಈ ಯೋಜನೆಯಿಂದ ಸ್ಥಳೀಯ ಜನರು ವಿವಿಧ ಆರ್ಥಿಕ ಪ್ರಯೋಜನಗಳು ಪಡೆದುಕೊಳ್ಳಬಹುದು ಎಂದರು.

ಈ ಯೋಜನೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪ್ರವಾಸಿಗರು ಮತ್ತು ಸುತ್ತಮುತ್ತ ಪ್ರದೇಶದ ನಿವಾಸಿಗಳಿಗೆ ನೀರು ಆಧಾರಿತ ಕ್ರೀಡೆಗಳನ್ನು ಅನುಭವಿಸುವ ಅವಕಾಶಗಳನ್ನು ಒದಗಿಸಿ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿಯಾಗಲಿದೆ ಜಯರಾಮ್‌ ರಾಯ್‌ ಪುರ ಅವರು ತಿಳಿಸಿದರು.

ಈ ಪ್ರದೇಶದಲ್ಲಿ ದೋಣಿ/ನೌಕೆ ನಿರ್ಮಾಣ, ಬೋಟ್‌ ಯಾರ್ಡ್‌ಗಳು ಹಾಗೂ ಸಂಬಂಧಿತ ಉಪಕರಣಗಳ ತಯಾರಿಕೆ ಮುಂತಾದ ಇತರ ಬೆಂಬಲದೊಂದಿಗೆ ಉದ್ಯಮ ತೆರೆಯುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಿಕೆಯಲ್ಲಿ ನೆರವಾಗಲಿದೆ ಎಂದು ತಿಳಿಸಿದರು.

ಸುತ್ತಮುತ್ತಲಿನ ಜಿಲ್ಲೆಯಲ್ಲಿರುವ ಪ್ರವಾಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿದ್ದು, ಜಲಮಾರ್ಗದ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿದ್ದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸಿ ಸರ್ಕಾರಕ್ಕೆ ಆದಾಯವನ್ನು ಗಳಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಇಂಜಿನಿಯರ್‌ ಹಿರೇಗೌಡರ, ಕಾರ್ಯಪಾಲಕ ಇಂಜಿನಿಯರ್‌ ದೊಡ್ಡಮನಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಚಲವಾದಿ, ಕರ್ನಾಟಕ ಜಲಸಾರಿಗೆ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಪಾಂಡುರಂಗ, ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-aa-teee

Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!

Anwar M*rder Case: ADGP B.K.Singh started investigation of case 6 years ago

Anwar M*rder Case: 6 ವರ್ಷ ಹಿಂದಿನ ಪ್ರಕರಣದ ತನಿಖೆಗೆ ಇಳಿದ ಎಡಿಜಿಪಿ ಬಿ.ಕೆ.ಸಿಂಗ್

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Polluted Yamuna: ಭಿನ್ನವಾಗಿ ಪ್ರತಿಭಟಿಸಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ರಾಜ್ಯಾಧ್ಯಕ್ಷ

ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಲು ಹೋಗಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ರಾಜ್ಯಾಧ್ಯಕ್ಷ

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

Belekeri port scam:

Belekeri scam: ಶಾಸಕ ಸತೀಶ್‌ ಸೈಲ್‌ ಗೆ ಭಾರಿ ಜೈಲು ಶಿಕ್ಷೆ ಪ್ರಕಟ; ಶಾಸಕ ಸ್ಥಾನ ರದ್ದು?

INDvsNZ: India trapped by spin in Pune; Series defeat at home after 12 years

INDvsNZ: ಪುಣೆಯಲ್ಲಿ ಸ್ಪಿನ್‌ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Banana Crop: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು… 11 ತಿಂಗಳಲ್ಲಿ ಲಕ್ಷಾಂತರ ಲಾಭ

Banana Crop: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು… 11 ತಿಂಗಳಲ್ಲಿ ಲಕ್ಷಾಂತರ ಲಾಭ

ರಬಕವಿ-ಬನಹಟ್ಟಿ: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

ರಬಕವಿ-ಬನಹಟ್ಟಿ: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

ಮುಧೋಳ: 36 ಹಳ್ಳಿ ಗಳಿಗೆ ಒಂದೇ ಒಂದು ಪೊಲೀಸ್‌ ಠಾಣೆ

ಮುಧೋಳ: 36 ಹಳ್ಳಿಗಳಿಗೆ ಒಂದೇ ಒಂದು ಪೊಲೀಸ್‌ ಠಾಣೆ

14-rabakavi-1

Rabkavi Banhatti: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

1-aa-teee

Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!

Anwar M*rder Case: ADGP B.K.Singh started investigation of case 6 years ago

Anwar M*rder Case: 6 ವರ್ಷ ಹಿಂದಿನ ಪ್ರಕರಣದ ತನಿಖೆಗೆ ಇಳಿದ ಎಡಿಜಿಪಿ ಬಿ.ಕೆ.ಸಿಂಗ್

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Shiggaon Bypoll; ಯಾಸೀರ್‌ ಖಾನ್‌-ಖಾದ್ರಿ ನಡುವೆ ವೈಮನಸ್ಸು ಶುರುವಾಗಿದ್ದು ಏಕೆ?

Shiggaon Bypoll; ಯಾಸೀರ್‌ ಖಾನ್‌-ಖಾದ್ರಿ ನಡುವೆ ವೈಮನಸ್ಸು ಶುರುವಾಗಿದ್ದು ಏಕೆ?

ಯುದ್ಧ ಪರಿಕರ ಬಳಸಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ: ಖ್ಯಾತ ವಿದ್ವಾಂಸ ಬಾಳಣ್ಣ

ಯುದ್ಧ ಪರಿಕರ ಬಳಸಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ: ಖ್ಯಾತ ವಿದ್ವಾಂಸ ಬಾಳಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.