Bengaluru: 3 ಅಂತಸ್ತಿನ ಅನಧಿಕೃತ ಮನೆ ಸಂಪೂರ್ಣ ಧ್ವಂಸ

ಬಿಬಿಎಂಪಿ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ; 2004ರಲ್ಲಿ 9 ಲಕ್ಷ ರೂ. ನೀಡಿ ಮನೆ ಖರೀದಿಸಿದ್ದ ಮಾಲಿಕ

Team Udayavani, Oct 26, 2024, 2:30 PM IST

15-bng

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್‌ನ ಕಮಲಾನಗರದಲ್ಲಿ ಪಾಲಿಕೆಯ ನೀರುಗಾಲುವೆಗೆ ಹೊಂದಿಕೊಂಡು ನಿರ್ಮಿಸಿದ್ದ 3 ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸಲಾಗಿದೆ.

ಕಮಲಾನಗರದಲ್ಲಿ ಶುಕ್ರವಾರ ಬಿಬಿಎಂಪಿ ಅಧಿ ಕಾರಿಗಳು ಜೆಸಿಬಿ ಯಂತ್ರ ಬಳಸಿ ತಳಪಾಯದಲ್ಲಿ ಬಿರುಕು ಕಾಣಿಸಿಕೊಂಡಿದ್ದ 3 ಅಂತಸ್ತಿನ ಕಟ್ಟಡ ನೆಲಸಮಗೊಳಿಸಿದರು. ಸ್ಥಳೀಯ ಶಾಸಕ ಗೋಪಾಲಯ್ಯ ಸಮ್ಮುಖದಲ್ಲಿ ಮನೆಯ ನೆಲ ಸಮ ಕಾರ್ಯಾಚರಣೆ ನಡೆಯಿತು. ಈ ವೇಳೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಇದ್ದರು.

ಇದೇ ವೇಳೆ ಮನೆ ಮಾಲಿಕ ತಿಮ್ಮಪ್ಪ ಮಾತನಾಡಿ, ನೀರುಗಾಲುವೆ ಮೇಲೆ ಕಟ್ಟಡ ನಿರ್ಮಿಸಲಾಗಿದೆ ಎಂಬುವುದು ಗೊತ್ತಿರಲ್ಲಿಲ್ಲ. 2004ರಲ್ಲಿ ಈ ಮನೆಯನ್ನು ಬೇರೊಬ್ಬರಿಂದ ಖರೀದಿಸಿದ್ದೆ. ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿ ಕೂಡಿಟ್ಟ ಹಣದಿಂದ ಮನೆ ಖರೀದಿಸಿದ್ದೆ. ಈಗಾಲೂ ಸುಮಾರು 6 ಲಕ್ಷ ಲೀಸ್‌ಗೆ ಮನೆ ಬಾಡಿಗೆ ನೀಡಿದ್ದೇನೆ. ಬಾಡಿಗೆ ಇರುವವರು ಹಣ ಮರಳಿಸಿ ಎಂದು ಕೇಳುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ಮನೆಯಲ್ಲಿ ಬಾಡಿಗೆ ಇದ್ದವರು ಹಣ ಕೊಡಿ ಎನ್ನುತ್ತಿದ್ದಾರೆ. ಲೀಸ್‌ ಹಾಕಿದ ಹಣವನ್ನು ಮರಳಿಸುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಸುಮಾರು 6 ಲಕ್ಷ ರೂ.ಬಾಡಿಗೆದಾರರಿಗೆ ನೀಡ ಬೇಕಾಗಿದೆ ಎಂದು ತಿಳಿಸಿದರು.

3 ಅಂತಸ್ತಿನ ಮನೆಯಲ್ಲಿದ್ದ ಎಲ್ಲ ಕುಟುಂಬ ಸ್ಥರನ್ನು ಸ್ಥಳಾಂತ ರಿ ಸ ಲಾ ಗಿ ದೆ. ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಹೊರ ತೆಗೆಯಲಾಗಿದೆ. 5 ಕುಟುಂಬಗಳ ಪೈಕಿ, 3 ಕುಟುಂಬಗಳು ಸಂಬಂಧಿ ಕರ ಮನೆಗೆ ತೆರಳಿದ್ದು, 1 ಕುಟುಂಬ ಅಂಬೇಡ್ಕರ್‌ ಭವನ, ಇನ್ನೊಂದು ಕುಟುಂದ ದೇವಸ್ಥಾನದಲ್ಲಿ ತಂಗಿದ್ದು, ಅವರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆಯನ್ನು ಪಾಲಿಕೆ ಅಧಿಕಾರಿಗಳು ಮಾಡಿದ್ದಾರೆ. ನಾವು ಕೂಲಿ ಮಾಡಿ ಬದುಕು ಕಳೆಯುತ್ತಿದ್ದೇವೆ. ಲೀಸ್‌ಗೆ ಮನೆಯಲ್ಲಿ ವಾಸವಾಗಿ ದ್ದೇವು. ಈಗ ದೇವಸ್ಥಾನದಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ. ಜೀವನ ಬಹಳ ಕಷ್ಟವಾಗಿದೆ ಎಂದು ಬಾಡಿಗೆದಾರರೊಬ್ಬರು ಅಳಲು ತೊಡಿಕೊಂಡರು.

ಮೋಸ ಮಾಡಿ, ಮಾರಾಟ ಮಾಡಿದ್ರು: ಮಾಲಕಿ ಮನೆ ಮಾಲಕಿ ಲಕ್ಷ್ಮಮ್ಮ ಮಾತನಾಡಿ, ಮನೆಯನ್ನು ನಮಗೆ ಮೋಸ ಮಾಡಿ ಮಾರಾಟ ಮಾಡಿದ್ದಾರೆ. ಪಿಲ್ಲರ್‌ ಇಲ್ಲದೆ ಮನೆ ನಿರ್ಮಿಸಲಾಗಿದೆ ಎಂಬು ವುದನ್ನು ಹೇಳದೆ ನಮಗೆ ಮಾರಾಟ ಮಾಡಿದ್ದಾರೆ. ಮನೆ ಖರೀದಿಗೆ ಮೊದಲ ನಾವು ಈ ಮನೆಯಲ್ಲಿ 30 ಸಾವಿರ ರೂ.ಗೆ ಲೀಸ್‌ಗೆ ವಾಸವಾಗಿ ದ್ದೇವು. ಬೇರೆ ಕಡೆ ಮನೆ ಮಾಡು ತ್ತೇವೆ, ಹಣ ಕೊಡಿ ಎಂದು ಕೇಳಿದಾಗ ಮನೆ ಮಾಲಿಕರು, ಈ ಮನೆ ಮಾರಾಟ ಮಾಡುತ್ತೇವೆ, ನೀವೇ ಖರೀದಿಸಿ ಎಂದು ಹೇಳಿದ್ದರು. ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ಹೇಳಿ ಸಾಲ ಮಾಡಿ ಖರೀದಿ ಮಾಡಿದ್ದೇವು ಎಂದು ಅಳಲು ತೋಡಿಕೊಂಡರು. 2004 ರಲ್ಲಿ 8-9 ಲಕ್ಷ ರೂ. ಸಾಲ ಮಾಡಿ ಮನೆ ಖರೀದಿಸಿ ದ್ದೇವು. ಪಿಲ್ಲರ್‌ ಹಾಕಿ ಮನೆ ನಿರ್ಮಿ ಸಿಲ್ಲ ಎಂಬುವುದನ್ನು ತಿಳಿಸಿರಲಿಲ್ಲ. ಹೀಗಾಗಿ ನಾವು ಮತ್ತೂಂದು ಮಹಡಿ ಕಟ್ಟಿದೆವು. ಲೀಸ್‌ಗೆ ನೀಡಲಾಗಿದೆ. 6 ಲಕ್ಷ ರೂ. ಸಾಲವಿದೆ. ಶಾಸಕರು ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ದ್ವಿತೀಯ ನೀರುಗಾಲುವೆ ಇದೆ ಎಂದು ಗೊತ್ತಿದ್ದಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

1-a-rohit-bg

Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ

Adulltrate-Milk

Adulterate: ಕಲಬೆರಕೆ ಹಾಲು ಮಾರಾಟಗಾರರ ಬಂಧಿಸಿದ ಪೊಲೀಸರು

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

1-JMM

Jharkhand; ಬಿಜೆಪಿ ನಾಯಕಿ ವಿರುದ್ಧ ನಾಲಗೆ ಹರಿ ಬಿಟ್ಟ ಕಾಂಗ್ರೆಸ್ ಶಾಸಕ ಅನ್ಸಾರಿ

ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

Belekeri Port Scam: ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

BJP 2

Maharashtra Elections; ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಇಬ್ಬರು ಎಂಎಲ್ ಎ ಗಳಿಗೆ ಕೊಕ್

Israel-Iran Tensions: ಇಸ್ರೇಲ್‌ ವೈಮಾನಿಕ ದಾಳಿಗೆ ಇರಾನ್‌ ನ ಇಬ್ಬರು ಸೈನಿಕರ ಸಾ*ವು

Israel-Iran Tensions: ಇಸ್ರೇಲ್‌ ವೈಮಾನಿಕ ದಾಳಿಗೆ ಇರಾನ್‌ ನ ಇಬ್ಬರು ಸೈನಿಕರ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-bng

Bengaluru: ಕಟ್ಟಡ ಕುಸಿತಕ್ಕೆ ಗುತ್ತಿಗೆದಾರನೂ ಬಲಿ!

12-

Kengeri ಉಪನಗರ- ಆರ್ವಿ ಕಾಲೇಜು ರಸ್ತೆ ಬಳಿ ಕಸದ ರಾಶಿ

11-dinesh

Bengaluru: ತುಪ್ಪದ 5 ಸ್ಯಾಂಪಲ್‌ಗಳಲ್ಲಿ ಅಪಾಯದ ಅಂಶಗಳು ಪತ್ತೆ: ಸಚಿವ ಗುಂಡೂರಾವ್‌

10-

Bengaluru: ಕಲಬೆರಕೆ ಆಹಾರ ಪತ್ತೆಗೆ ಮ್ಯಾಜಿಕ್‌ ಬಾಕ್ಸ್‌ ಅಳವಡಿಕೆ

9-hc

Bengaluru: ಗ್ರ್ಯಾಚುಟಿ ಮೊತ್ತಕ್ಕೆ ವಿಮೆ ಕಡ್ಡಾಯ ಆದೇಶ ರ‌ದ್ದತಿಗೆ ಮನವಿ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

1-a-rohit-bg

Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ

Adulltrate-Milk

Adulterate: ಕಲಬೆರಕೆ ಹಾಲು ಮಾರಾಟಗಾರರ ಬಂಧಿಸಿದ ಪೊಲೀಸರು

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

1-JMM

Jharkhand; ಬಿಜೆಪಿ ನಾಯಕಿ ವಿರುದ್ಧ ನಾಲಗೆ ಹರಿ ಬಿಟ್ಟ ಕಾಂಗ್ರೆಸ್ ಶಾಸಕ ಅನ್ಸಾರಿ

ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

Belekeri Port Scam: ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.