Udupi: ಅಪ್ರಾಪ್ತೆಗೆ ಸಂಬಂಧಿಕರಿಂದ ದೈಹಿಕ ದೌರ್ಜನ್ಯ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

Team Udayavani, Oct 26, 2024, 8:04 PM IST

Udupi: ಅಪ್ರಾಪ್ತೆಗೆ ಸಂಬಂಧಿಕರಿಂದ ದೈಹಿಕ ದೌರ್ಜನ್ಯ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿ ಶಿವಮೊಗ್ಗ ಮೂಲದ 27 ವರ್ಷದ ಆರೋಪಿಗೆ 20 ವರ್ಷಗಳ ಕಠಿನ ಜೈಲು ಶಿಕ್ಷೆಯಾಗಿದೆ.

ಬ್ರಹ್ಮಾವರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು 2023ರ ಎಪ್ರಿಲ್‌ನಲ್ಲಿ ಆರೋಪಿತ ವ್ಯಕ್ತಿ ಬಂದಿದ್ದ. ಕಾರ್ಯಕ್ರಮದ ಬಳಿಕ ಬಾಲಕಿ ವಾಸವಿದ್ದ ಮನೆಯಲ್ಲೇ ಕೆಲವು ದಿನಗಳ ಕಾಲ ನೆಲೆಸಿದ್ದ ಆತ ಈ ಅವಧಿಯಲ್ಲಿ ದೌರ್ಜನ್ಯ ಎಸಗಿ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಕೆಲವು ದಿನಗಳ ಬಳಿಕ  ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದಾಗ ಗರ್ಭಿಣಿ ಎಂದು ತಿಳಿದು ಬಂದಿತ್ತು. ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ. ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಒಟ್ಟು 36 ಸಾಕ್ಷಿಗಳ ಪೈಕಿ 20 ಸಾಕ್ಷಿದಾರರ ವಿಚಾರಣೆ ನಡೆಸಿದ್ದು ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿಯಲ್ಲಿ ಆರೋಪಿಯು ನೊಂದ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಬಗ್ಗೆ ಪೂರಕ ಸಾಕ್ಷಿ ಪರಿಗಣಿಸಿ ಇಬ್ಬರ ವಾದ ಆಲಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ 20 ವರ್ಷ ಅವಧಿಗೆ ಜೈಲು ಶಿಕ್ಷೆ 21 ಸಾವಿರ ದಂಡ, ದಂಡದಲ್ಲಿ 15 ಸಾವಿರ ನೊಂದ ಬಾಲಕಿಗೆ ಮತ್ತು 6 ಸಾವಿರ ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದರು.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು. 2024ರ ಡಿಸೆಂಬರ್‌ನಲ್ಲಿ ದೋಷರೋಪಣೆ ಸಲ್ಲಿಸಲಾಗಿತ್ತು. 10 ತಿಂಗಳೊಳಗೆ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

ಟಾಪ್ ನ್ಯೂಸ್

gahnjcf

Deepavali Special: ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಹೆಚ್ಚುವರಿ ರೈಲು ಬೋಗಿ ಸೇರ್ಪಡೆ

Kukke

Kukke Subhramanya: ಆಶ್ಲೇಷಾ ನಕ್ಷತ್ರ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಂದಣಿ

Brahmavar

Agriculture: ಸಾವಯವ ಕೃಷಿಗೆ ಗಮನ ಕೊಡಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

IMD

IMD; ರಾಜ್ಯದಲ್ಲಿ ಮಳೆಗೆ ವಿರಾಮ, ಒಣ ಹವೆ ಮುನ್ಸೂಚನೆ

Udupi-prachya

Udupi: ಪುನರಪಿ ಭಾರತ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿ: ಪುತ್ತಿಗೆ ಶ್ರೀ

siddanna-2

Heavy rain; ಬೆಳೆ ಸಂತ್ರಸ್ತರಿಗೆ ಸಿಎಂ ಅಭಯ:ಸಿದ್ದರಾಮಯ್ಯ ಸೂಚನೆಗಳೇನು?

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-prachya

Udupi: ಪುನರಪಿ ಭಾರತ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿ: ಪುತ್ತಿಗೆ ಶ್ರೀ

Ajekar: ಗೂಡ್ಸ್ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar: ಗೂಡ್ಸ್ ವಾಹನ ಢಿಕ್ಕಿ; ಪಾದಚಾರಿ ಸಾವು

Karkala: ಸಿಸಿ ಕೆಮರಾ ಕಳವು

Karkala: ಸಿಸಿ ಕೆಮರಾ ಕಳವು

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

13-katapady

Katapady: ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸರಳಾ ಎಸ್‌. ನಿಧನ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

gahnjcf

Deepavali Special: ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಹೆಚ್ಚುವರಿ ರೈಲು ಬೋಗಿ ಸೇರ್ಪಡೆ

Kukke

Kukke Subhramanya: ಆಶ್ಲೇಷಾ ನಕ್ಷತ್ರ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಂದಣಿ

Brahmavar

Agriculture: ಸಾವಯವ ಕೃಷಿಗೆ ಗಮನ ಕೊಡಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ED

MUDA: ದೂರುದಾರ ಗಂಗರಾಜು ಅವರಿಗೆ ಇ.ಡಿ. ನೋಟಿಸ್‌

IMD

IMD; ರಾಜ್ಯದಲ್ಲಿ ಮಳೆಗೆ ವಿರಾಮ, ಒಣ ಹವೆ ಮುನ್ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.