Coastal Karnataka: ಒಂದೇ ತಿಂಗಳಲ್ಲಿ ವಾಡಿಕೆ ಗುರಿ ಮುಟ್ಟುವತ್ತ ಹಿಂಗಾರು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 46 , ಉಡುಪಿ ಜಿಲ್ಲೆಯಲ್ಲಿ ಶೇ.1ರಷ್ಟು ಮಳೆ ಪ್ರಮಾಣ ಹೆಚ್ಚಳ

Team Udayavani, Oct 27, 2024, 7:11 AM IST

Rain-12

ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಮೂರು ತಿಂಗಳಲ್ಲಿ ಸುರಿಯಬೇಕಾದ ವಾಡಿಕೆ ಮಳೆ ಒಂದೇ ತಿಂಗಳಲ್ಲಿ ಸುರಿದಿದೆ.

ಒಟ್ಟಾರೆ ಹಿಂಗಾರು ಅವಧಿಯ ಅಕ್ಟೋಬರ್‌ 1ರಿಂದ ಡಿಸೆಂಬರ್‌ ಅಂತ್ಯದವರೆಗೆ ಕರಾವಳಿ ಭಾಗದಲ್ಲಿ 259.4 ಮಿ.ಮೀ. ಮಳೆ ಸುರಿಯಬೇಕು. ಆದರೆ, ನಾಲ್ಕೇ ವಾರದಲ್ಲಿ (ಅ.25ರ ವರೆಗೆ) 247.6 ಮಿ.ಮೀ. ಮಳೆಯಾಗಿದೆ. ಹಿಂಗಾರು ಕೊನೆಗೊಳ್ಳಲು ಇನ್ನೂ ಎರಡು ತಿಂಗಳು ಇದ್ದು, ಮಳೆ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಕೂಡ ಬಿರುಸು ಪಡೆದು ವಾಡಿಕೆಗಿಂತ ಶೇ.20ರಷ್ಟು ಮಳೆ ಏರಿಕೆ ಕಂಡಿತ್ತು. ಈ ತಿಂಗಳಿನಿಂದ ಹಿಂಗಾರು ಆರಂಭಗೊಂಡಿದ್ದು, ಅಕ್ಟೋಬರ್‌ ತಿಂಗಳಿನಾದ್ಯಂತ ಉತ್ತಮ ಮಳೆಯಾಗಿದೆ. ಚಂಡಮಾರುತದ ಪರಿಣಾಮ ಇನ್ನೂ ಕೆಲವು ದಿನ ಮಳೆಯ ನಿರೀಕ್ಷೆ ಇದೆ.

ಕಳೆದ ವರ್ಷ ಗುರಿ ಮೀರಿದ ಮಳೆ
ಕಳೆದ ವಷವೂ ಕರಾವಳಿ ಭಾಗದಲ್ಲಿ ಹಿಂಗಾರು ಉತ್ತಮವಾಗಿತ್ತು. ದ.ಕ. ಜಿಲ್ಲೆಯಲ್ಲಿ ಶೇ. 46 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.1ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆರಂಭದಲ್ಲಿಯೇ ಹಿಂಗಾರು ಬಿರುಸು ಪಡೆದುಕೊಂಡಿದ್ದು, ಮಳೆ ಪ್ರಮಾಣವೂ ಅಧಿಕವಾಗಿದೆ. ಈ ಕಾರಣಕ್ಕೆ ಹಿಂಗಾರು ಅವಧಿಯ ಇನ್ನಷ್ಟು ದಿನಗಳಲ್ಲಿ ಉತ್ತಮ ವರ್ಷಧಾರೆಯಾಗುವ ನಿರೀಕ್ಷೆ ಇದೆ.

ಕಾಪುವಿನಲ್ಲಿ ಕಡಿಮೆ, ಕುಂದಾಪುರದಲ್ಲಿ ಅಧಿಕ
ಕರಾವಳಿಗೆ ಹೋಲಿಕೆ ಮಾಡಿದರೆ ಅ. 1ರಿಂದ ಈವರೆಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಕಡಿಮೆ (ಶೇ.-35) ಮಳೆಯಾಗಿದ್ದು, ಕುಂದಾಪುರದಲ್ಲಿ ಅಧಿಕ (ಶೇ.156) ಮಳೆ ಸುರಿದಿದೆ. ಉಳಿದಂತೆ ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ವಾಡಿಕೆಗಿಂತ ಶೇ. 6 ಅಧಿಕ, ಮಂಗಳೂರುನಲ್ಲಿ ಶೇ. 21, ಬಂಟ್ವಾಳದಲ್ಲಿ ಶೇ. 9, ಪುತ್ತೂರಿನಲ್ಲಿ ಶೇ.16, ಸುಳ್ಯ ಶೇ. 21, ಮೂಡುಬಿದಿರೆ ಶೇ. 20, ಕಡಬ ಶೇ. 10, ಮೂಲ್ಕಿಯಲ್ಲಿ ಶೇ. 25, ಉಳ್ಳಾಲದಲ್ಲಿ ಶೇ. 8, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶೇ. 23, ಉಡುಪಿಯಲ್ಲಿ ಶೇ. 25, ಬೈಂದೂರಿನಲ್ಲಿ ಶೇ. 100, ಬ್ರಹ್ಮಾವರದಲ್ಲಿ ಶೇ. 2 ಮತ್ತು ಹೆಬ್ರಿಯಲ್ಲಿ ಶೇ. 108ರಷ್ಟು ಮಳೆ ವಾಡಿಕೆಗಿಂತ ಅಧಿಕ ಸುರಿದಿದೆ.

ಹಿಂಗಾರು ಮಳೆ ಪ್ರಮಾಣ (259.4 ಮಿ.ಮೀ. ವಾಡಿಕೆ ಮಳೆ)
ವರ್ಷ – ಮಳೆ ಪ್ರಮಾಣ (ಶೇ.)
2016 –  ಶೇ. 57
2017 –  ಶೇ. 25
2018-   ಶೇ. 28
2019 –  ಶೇ. 124
2020-   ಶೇ. 27
2021 –  ಶೇ. 122
2022 –  ಶೇ. 14
2023 –  ಶೇ. 6

ಟಾಪ್ ನ್ಯೂಸ್

Stampede at Mumbai’s Bandra train station

Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

MUDA Case: Lokayukta notice to CM Siddaramaiah after Diwali?

MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ

Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ

New Delhi: An unemployed youth who made a fake bmb call to the airport was arrested

New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್‌ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ

IND-W vs NZ-W: ಇಂದು ದ್ವಿತೀಯ ಏಕದಿನ:  ಸರಣಿ ಗೆಲ್ಲಲು ವನಿತೆಯರ ಸ್ಕೆಚ್‌

IND-W vs NZ-W: ಇಂದು ದ್ವಿತೀಯ ಏಕದಿನ:  ಸರಣಿ ಗೆಲ್ಲಲು ವನಿತೆಯರ ಸ್ಕೆಚ್‌

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Frud

Mangaluru: ಪೊಲೀಸ್‌ ಅಧಿಕಾರಿ ಹೆಸರಲ್ಲಿ ಕರೆ ಮಾಡಿ 50 ಲ.ರೂ. ವಂಚನೆ

Sale-Symbole

Coastal Karnataka: ಆಟೋಮೊಬೈಲ್‌: ವರ್ಷಾಂತ್ಯದವರೆಗೂ ಬೇಡಿಕೆ

Notice-Symbol

Bantwala: ಜಿಲ್ಲಾ ಅಧಿಕಾರಿಯಿಂದ ಗುತ್ತಿಗೆ ಸಂಸ್ಥೆಗೆ ನೋಟಿಸ್‌

CHowta

Mangaluru: ರಕ್ಷಣ ಸಚಿವಾಲಯ ಸಲಹಾ ಸಮಿತಿಗೆ ಕ್ಯಾ| ಬ್ರಿಜೇಶ್‌ ಚೌಟ ನೇಮಕ

Kukke

Kukke Subhramanya: ಆಶ್ಲೇಷಾ ನಕ್ಷತ್ರ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಂದಣಿ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Stampede at Mumbai’s Bandra train station

Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

MUDA Case: Lokayukta notice to CM Siddaramaiah after Diwali?

MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ

Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ

New Delhi: An unemployed youth who made a fake bmb call to the airport was arrested

New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್‌ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.