Onion; ಎಪಿಎಂಸಿಯಲ್ಲಿ ಈರುಳ್ಳಿ ಖರೀದಿದಾರರೇ ಇಲ್ಲ!

ಈರುಳ್ಳಿ ಕೊಳೆತು ಸಂಕಷ್ಟದಲ್ಲಿ ರೈತ ಕೇಳುವವರಿಲ್ಲದೇ ಪರದಾಟ

Team Udayavani, Oct 27, 2024, 6:40 AM IST

Onion

ರಾಯಚೂರು: ಕಳೆದ ಕೆಲವು ವರ್ಷಗಳ ಹಿಂದೆ ಅತ್ಯ ಧಿಕ ದರಕ್ಕೆ ಮಾರಾಟ ವಾಗಿ ಮೆರೆದಿದ್ದ ಈರುಳ್ಳಿಯನ್ನು ಇಂದು ಕೇಳುವವರಿಲ್ಲದಂತಾಗಿದೆ. ಖರೀದಿದಾರರು ಇಲ್ಲದ ಕಾರಣಕ್ಕೆ ಎಪಿಎಂಸಿಗೆ ಈರುಳ್ಳಿ ತರದಂತೆ ಪ್ರಕಟನೆ ನೀಡಲಾಗಿದೆ.

ಎಪಿಎಂಸಿಗೆ ನಿತ್ಯ 2-3 ಸಾವಿರ ಕ್ವಿಂಟಲ್‌ ವರೆಗೂ ಈರುಳ್ಳಿ ಬರುತ್ತಿದೆ. 1,800ರಿಂದ 3,900 ರೂ. ವರೆಗೆ ಈರುಳ್ಳಿ ಗುಣಮಟ್ಟ ಹಾಗೂ ಗಡ್ಡೆಗಳ ಗಾತ್ರದ ಮೇಲೆ ದರ ನಿಗದಿಯಾಗುತ್ತಿತ್ತು. ಆದರೆ ಎರಡು ದಿನಗಳ ಹಿಂದೆ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬಂದಿದ್ದು, ಖರೀದಿದಾರರು ಟೆಂಡರ್‌ನಲ್ಲಿ ಭಾಗಿಯಾಗಿಯೇ ಇಲ್ಲ. ಹೀಗಾಗಿ ಅಧಿ ಕಾರಿಗಳು ವರ್ತಕರ ಮನವೊಲಿಸಿ ಅಂದಿನ ಉತ್ಪನ್ನವನ್ನಷ್ಟೇ ಖರೀದಿಸಿದ್ದು, ಮರುದಿನವೇ ಮಾರುಕಟ್ಟೆಗೆ ಈರುಳ್ಳಿ ತರದಂತೆ ಪ್ರಕಟನೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ಈರುಳ್ಳಿಗೆ ಭಾರೀ ಬೇಡಿಕೆ ಯಿದ್ದು, ದೂರದ ಊರುಗಳಿಗೂ ರಫ್ತು ಮಾಡಲಾಗುತ್ತದೆ. ಆದರೆ ಈಚೆಗೆ ಸುರಿದ ಮಳೆಯಿಂದ ಕೆಲವು ಭಾಗದಲ್ಲಿ ಈರುಳ್ಳಿ ಕೊಳೆತು ರೈತರು ನಷ್ಟಕ್ಕೆ ತುತ್ತಾಗಿದ್ದಾರೆ. ಈಗ ಮಾರುಕಟ್ಟೆಯಲ್ಲೂ ಖರೀದಿ ಮಾಡದಿರು ವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ರಫ್ತು ಮಾಡಿದರೆ ನಷ್ಟ
ರಾಯಚೂರು, ದೇವದುರ್ಗ, ಲಿಂಗಸೂಗೂರು ತಾಲೂಕು ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತಿತ್ತು. ಜಿಲ್ಲೆಯಿಂದ ಮಾತ್ರವಲ್ಲ, ಅಕ್ಕಪಕ್ಕದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದಲೂ ರೈತರು ಈರುಳ್ಳಿ ತರುತ್ತಿದ್ದರು. ಈಗ ಖರೀದಿ ದಾರರೇ ಇಲ್ಲದ ಕಾರಣಕ್ಕೆ ದೂರದ ಹೈದರಾಬಾದ್‌, ಕರ್ನೂಲ್‌ ಸೇರಿ ಬೇರೆ ಕಡೆಗೆ ಸಾಗಣೆ ಮಾಡಬೇಕಿದ್ದು, ರೈತರಿಗೆ ಹೊರೆಯಾಗಲಿದೆ. ಹೀಗಾಗಿ ಕೆಲ ರೈತರು ಎರಡು ದಿನಗಳಿಂದ ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲೇ ಈರುಳ್ಳಿ ಮಾರಾಟ ಮಾಡಿದ್ದಾರೆ. ಆದರೆ ಇಲ್ಲಿ ಹೆಚ್ಚಿನ ಕಮಿಷನ್‌ ಪಡೆಯುತ್ತಿದ್ದು, ಇಲ್ಲೂ ನಷ್ಟ ಉಂಟಾಗುತ್ತಿದೆ.

ಮೂವರೇ ವರ್ತಕರು!
ರಾಯಚೂರಿನ ರಾಜೇಂದ್ರ ಗಂಜ್‌ ಇಡೀ ರಾಜ್ಯದಲ್ಲಿಯೇ ದೊಡ್ಡ ಮಾರುಕಟ್ಟೆ ಎಂಬ ಹಿರಿಮೆ ಹೊಂದಿತ್ತು. ಆದರೆ ಇಂಥ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿಸುವ ವರ್ತಕರು ಕೇವಲ ಮೂವರೇ ಇದ್ದಾರೆ. ಇದರಿಂದ ಅವರು ಮನಬಂದಂತೆ ದರ ನಿಗದಿ ಮಾಡುತ್ತಾರೆಂಬ ಆರೋಪಗಳಿವೆ. ಮಾರುಕಟ್ಟೆಗೆ ಎಷ್ಟೇ ಉತ್ಪನ್ನ ಬಂದರೂ ಈ ಮೂವರೇ ಖರೀದಿಸಬೇಕಿದೆ. ನಮಗೆ ಬೇಡಿಕೆ ಬಂದಿಲ್ಲ. ಹೀಗಾಗಿ ನಾವು ಖರೀದಿಸುವುದಿಲ್ಲ. ರೈತರು ಬೇರೆ ಎಲ್ಲಿಯಾದರೂ ಮಾರಿಕೊಳ್ಳಬಹುದು ಎನ್ನುತ್ತಿದ್ದಾರೆ.

ಸರಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರ್ತಕರಿಗೆ ಲೈಸನ್ಸ್‌ ನೀಡಬೇಕು. ಇಲ್ಲವಾದರೆ ಈರುಳ್ಳಿ ಬೆಳೆಗಾರರು ನಷ್ಟ ಎದುರಿಸಬೇಕಾಗುತ್ತದೆ.
-ಲಕ್ಷ್ಮಣಗೌಡ ಕಡಗಂದಿನ್ನಿ, ರೈತ ಮುಖಂಡ

 ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

Arrested: ಪತಿಯ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿ ಐವರ ಬಂಧನ

Arrested: ಪತಿಯ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿ ಐವರ ಬಂಧನ

ನಾಪತ್ತೆಯಾಗಿ ನಾಲ್ಕು ತಿಂಗಳ ಬಳಿಕ ಯುವತಿಯ ಶವ ಪತ್ತೆ; ಘಟನೆ ಹಿಂದಿದೆ ರೋಚಕ ಕಥೆ

Kanpur: ನಾಪತ್ತೆಯಾಗಿ ನಾಲ್ಕು ತಿಂಗಳ ಬಳಿಕ ಯುವತಿಯ ಶವ ಪತ್ತೆ; ಘಟನೆ ಹಿಂದಿದೆ ರೋಚಕ ಕಥೆ

2

CID Show: 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ ಜನಪ್ರಿಯ ʼಸಿಐಡಿʼ ಶೋ

Tragic: ಬೆಂಕಿ ಅವಘಡ; ಜತೆಯಲ್ಲಿ ಮಲಗಿದ್ದ ನಾಲ್ವರು ಸ್ನೇಹಿತರು ಸುಟ್ಟುಕರಕಲು

Tragic: ಬೆಂಕಿ ಅವಘಡ; ಜತೆಯಲ್ಲಿ ಮಲಗಿದ್ದ ನಾಲ್ವರು ಸ್ನೇಹಿತರು ಸುಟ್ಟುಕರಕಲು

Stampede at Mumbai’s Bandra train station

Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

MUDA Case: Lokayukta notice to CM Siddaramaiah after Diwali?

MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

Bjp-JDS

Assembly By Election: ನಿಖಿಲ್‌ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಜಂಟಿ ಕಾರ್ಯತಂತ್ರ

1–a-cng

By election ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಮುಜುಗರ ತಂದ ಸೈಲ್‌ ಪ್ರಕರಣ

baby

Belagavi; ಬಿಮ್ಸ್‌ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

Belagavi: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ: ಶೋಭಾ ಕರಂದ್ಲಾಜೆ

6

Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್‌

Arrested: ಪತಿಯ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿ ಐವರ ಬಂಧನ

Arrested: ಪತಿಯ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿ ಐವರ ಬಂಧನ

ನಾಪತ್ತೆಯಾಗಿ ನಾಲ್ಕು ತಿಂಗಳ ಬಳಿಕ ಯುವತಿಯ ಶವ ಪತ್ತೆ; ಘಟನೆ ಹಿಂದಿದೆ ರೋಚಕ ಕಥೆ

Kanpur: ನಾಪತ್ತೆಯಾಗಿ ನಾಲ್ಕು ತಿಂಗಳ ಬಳಿಕ ಯುವತಿಯ ಶವ ಪತ್ತೆ; ಘಟನೆ ಹಿಂದಿದೆ ರೋಚಕ ಕಥೆ

Arrested: ನಾಯಿಗಳು ಆಟೋ ಸೀಟ್‌ ಕಚ್ಚಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ: ಚಾಲಕ ಸೆರೆ

Arrested: ನಾಯಿಗಳು ಆಟೋ ಸೀಟ್‌ ಕಚ್ಚಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ: ಚಾಲಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.