Bantwala: ಜಿಲ್ಲಾ ಅಧಿಕಾರಿಯಿಂದ ಗುತ್ತಿಗೆ ಸಂಸ್ಥೆಗೆ ನೋಟಿಸ್‌

ಹೊರ ಸಂಪನ್ಮೂಲ ಸಿಬಂದಿಗೆ ವೇತನ ವಿಳಂಬ

Team Udayavani, Oct 27, 2024, 2:30 AM IST

Notice-Symbol

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಸಂಪನ್ಮೂಲ ಸಿಬಂದಿಗೆ ಗುತ್ತಿಗೆ ವಹಿಸಿಕೊಂಡಿರುವ ಶಿವಮೊಗ್ಗ ಮೂಲದ ಮೆ| ಪ್ರೈವೇಟ್‌ ಎಂಪ್ಲಾಯ್‌ಮೆಂಟ್‌ ಬ್ಯುರೋ ಸಂಸ್ಥೆಯು ವೇತನ ಪಾವತಿಯಲ್ಲಿ ವಿಳಂಬ ಮಾಡುವ ಮೂಲಕ ಟೆಂಡರ್‌ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್‌  ಸಂಸ್ಥೆಗೆ ನೋಟಿಸ್‌ ನೀಡಿ ಗುತ್ತಿಗೆ ಆದೇಶವನ್ನು ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ.

ಇಲಾಖೆ ವ್ಯಾಪ್ತಿಯ ಕಚೇರಿಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸುಮಾರು 280 ಮಂದಿ ಹೊರ ಸಂಪನ್ಮೂಲ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕರ್ತವ್ಯದಲ್ಲಿ ವ್ಯತ್ಯಯ ಉಂಟಾದರೆ ಇಲಾಖೆಯ ಜತೆಗೆ ಹಾಸ್ಟೆಲ್‌, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗುತ್ತದೆ. ಸಿಬಂದಿ ನೇಮಕದ ಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆ ಅನುದಾನ ವಿಳಂಬವಾದರೂ ಸಿಬಂದಿಗೆ ಮಾತ್ರ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ಪಾವತಿಗೆ ಬದ್ಧರಾಗಿರಬೇಕು ಎಂಬ ಷರತ್ತು ನೀಡಲಾಗಿತ್ತು.

ಸ್ಪಷ್ಟನೆ ನೀಡಲು ನೋಟಿಸ್‌
ಆದರೆ ತಮ್ಮ ಸಂಸ್ಥೆಯಿಂದ ಸಿಬಂದಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಈ ಕುರಿತು ತಾಲೂಕು ಅಧಿಕಾರಿಗಳು ಪ್ರಶ್ನಿಸಿದರೆ ತಮ್ಮ ಸಿಬಂದಿ ಹಾರಿಕೆಯ ಉತ್ತರವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಒಡಂಬಡಿಕೆ ಪತ್ರ ನೀಡಿಲ್ಲ, ದ.ಕ.ಜಿಲ್ಲೆಯಲ್ಲಿ ಕಚೇರಿ ತೆರೆಯಬೇಕು ಎಂಬ ನಿರ್ದೇಶನವಿದ್ದರೂ ಅದನ್ನೂ ಮಾಡಿಲ್ಲ.

ವೇತನ ಪಾವತಿ ವಿಳಂಬದ ಜತೆಗೆ ಈ ಎಲ್ಲ ಕಾರಣಗಳಿಂದ ಟೆಂಡರ್‌ ಷರತ್ತಿನ ಉಲ್ಲಂಘನೆಯಾಗಿದ್ದು, ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಬೇಕು. ಇಲ್ಲದೇ ಇದ್ದರೆ ಮುಂದಿನ ಕ್ರಮಕ್ಕಾಗಿ ಟೆಂಡರ್‌ ಅಂಗೀಕಾರ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ನೋಟೀಸ್‌ನಲ್ಲಿ ವಿವರಿಸಿದ್ದಾರೆ.

ಟಾಪ್ ನ್ಯೂಸ್

Rain-12

Coastal Karnataka: ಒಂದೇ ತಿಂಗಳಲ್ಲಿ ವಾಡಿಕೆ ಗುರಿ ಮುಟ್ಟುವತ್ತ ಹಿಂಗಾರು!

Daily Horoscope:

Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ

1-a-bangla

Bangladesh;ಸಿಡಿದೆದ್ದ ಹಿಂದೂಗಳು: ಮಧ್ಯಾಂತರ ಸರಕಾರದ ವಿರುದ್ಧ ಬೃಹತ್‌ ರ್‍ಯಾಲಿ

1-a-isreal

Iran vs Israel; ಏನಿದು ಆಪರೇಶನ್‌ ಒಪೆರಾ?

baby

Belagavi; ಬಿಮ್ಸ್‌ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು

BUS driver

Deepavali, ರಾಜ್ಯೋತ್ಸವ ಪ್ರಯುಕ್ತ ಸಾಲು ಸಾಲು ರಜೆ : ಖಾಸಗಿ ಬಸ್‌ ಯಾನ ದರ ದುಪ್ಪಟ್ಟು!

Santhosh Hegde

Justice Santosh Hegde; ಅದಿರು ಕೇಸಲ್ಲಿ ಶಿಕ್ಷೆ ಸಮಾಧಾನ ತಂದಿದೆ, ಇತರರಿಗೂ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain-12

Coastal Karnataka: ಒಂದೇ ತಿಂಗಳಲ್ಲಿ ವಾಡಿಕೆ ಗುರಿ ಮುಟ್ಟುವತ್ತ ಹಿಂಗಾರು!

Sale-Symbole

Coastal Karnataka: ಆಟೋಮೊಬೈಲ್‌: ವರ್ಷಾಂತ್ಯದವರೆಗೂ ಬೇಡಿಕೆ

CHowta

Mangaluru: ರಕ್ಷಣ ಸಚಿವಾಲಯ ಸಲಹಾ ಸಮಿತಿಗೆ ಕ್ಯಾ| ಬ್ರಿಜೇಶ್‌ ಚೌಟ ನೇಮಕ

Kukke

Kukke Subhramanya: ಆಶ್ಲೇಷಾ ನಕ್ಷತ್ರ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಂದಣಿ

Mangaluru: ಮಿನಿ ಬಸ್‌ ಪಲ್ಟಿ; 10ಕ್ಕೂ ಅಧಿಕ ಮಂದಿಗೆ ಗಾಯ

Mangaluru: ಮಿನಿ ಬಸ್‌ ಪಲ್ಟಿ; 10ಕ್ಕೂ ಅಧಿಕ ಮಂದಿಗೆ ಗಾಯ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Rain-12

Coastal Karnataka: ಒಂದೇ ತಿಂಗಳಲ್ಲಿ ವಾಡಿಕೆ ಗುರಿ ಮುಟ್ಟುವತ್ತ ಹಿಂಗಾರು!

Daily Horoscope:

Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ

1-a-bangla

Bangladesh;ಸಿಡಿದೆದ್ದ ಹಿಂದೂಗಳು: ಮಧ್ಯಾಂತರ ಸರಕಾರದ ವಿರುದ್ಧ ಬೃಹತ್‌ ರ್‍ಯಾಲಿ

1-a-isreal

Iran vs Israel; ಏನಿದು ಆಪರೇಶನ್‌ ಒಪೆರಾ?

baby

Belagavi; ಬಿಮ್ಸ್‌ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.