CID Show: 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ ಜನಪ್ರಿಯ ʼಸಿಐಡಿʼ ಶೋ
Team Udayavani, Oct 27, 2024, 11:56 AM IST
ಮುಂಬಯಿ: ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ʼಸಿಐಡಿʼ(CID) 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ.
ಸೋನಿ ಟೆಲಿವಿಷನ್‌ನಲ್ಲಿ 21 ಜನವರಿ 1998ರಲ್ಲಿ ಆರಂಭವಾದ ʼಸಿಐಡಿʼ ಸಿರೀಸ್ ಸತತ 20 ವರ್ಷಗಳ ಪ್ರಸಾರದ ಬಳಿಕ 2018ರ ಅಕ್ಟೋಬರ್‌ನಲ್ಲಿ ಮುಕ್ತಾಯ ಕಂಡಿತು. ಇದ್ದಕ್ಕಿದ್ದಂತೆ ಕಾರ್ಯಕ್ರಮ ಮುಕ್ತಾಯವಾದ ಕಾರಣ ಅನೇಕ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ʼಸಿಐಡಿʼ ಕಾರ್ಯಕ್ರಮಕ್ಕೆ ತಮ್ಮದೇ ಆದ ವೀಕ್ಷಕರ ಬಳಗವೇ ಇತ್ತು. ʼಸಿಐಡಿʼ ಇದುವರೆಗೆ ಸಾವಿರಾರು ಎಪಿಸೋಡ್‌ಗಳನ್ನು ಪೂರ್ತಿ ಮಾಡಿದೆ. ನೈಜ ಹಾಗೂ ಕಾಲ್ಪನಿಕ ಹೀಗೆ ಅನೇಕ ಕಥೆಗಳು ʼಸಿಐಡಿʼ ಯಲ್ಲಿ ಎಪಿಸೋಡ್ ಆಗಿ ಪ್ರಸಾರ ಕಂಡಿದೆ.
ಅಭಿಜಿತ್ , ದಯಾ, ಎಸಿಪಿ ಪ್ರದ್ಯುಮನ್ ಹೀಗೆ ʼಸಿಐಡಿʼ ತಂಡದಲ್ಲಿ ಗುರುತಿಸಿಕೊಂಡು ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದುಕೊಂಡ ಈ ಕಲಾವಿದರು ಮತ್ತೆ ಜತೆಯಾಗುತ್ತಿದ್ದಾರೆ. ʼಸಿಐಡಿʼ ಹೊಸ ಸೀಸನ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ. 6 ವರ್ಷದ ಬಳಿಕ ʼಸಿಐಡಿʼ ಸೋನಿಯಲ್ಲಿ ಮತ್ತೆ ಪ್ರಸಾರ ಕಾಣಲಿದೆ.
ಕಾರ್ಯಕ್ರಮದ ಪ್ರೋಮೊವನ್ನು ವಾಹಿನಿ ರಿಲೀಸ್ ಮಾಡಿದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಅಭಿಜಿತ್ ಹಾಗೂ ದಯಾ ಪರಸ್ಪರ ವೈರಿಗಳಾಗಿ ನಿಂತುಕೊಂಡಿದ್ದಾರೆ. ಅಭಿಜಿತ್ ದಯಾ ಎದೆಗೆ ಶೂಟ್ ಮಾಡಿದ್ದು, ದೂರದಲ್ಲಿದ್ದ ಎಸಿಪಿ ಪ್ರದ್ಯುಮನ್ ನಿಲ್ಲಿಸಿ.. ಎಂದು ಹೇಳುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
View this post on Instagram
ಇದನ್ನು ನೋಡಿದ ವೀಕ್ಷಕರು ʼಸಿಐಡಿʼ ಹೊಸ ಕಥೆಗಳನ್ನು ನೋಡಲು ಎಕ್ಸೈಟ್ ಆಗಿದ್ದಾರೆ. ಶೀಘ್ರದಲ್ಲಿ ʼಸಿಐಡಿʼ ಸೋನಿ ಟಿವಿಯಲ್ಲಿ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.