IFFI: ಗೋವಾ ಚಿತ್ರೋತ್ಸವಕ್ಕೆ ವೆಂಕ್ಯಾ, ಕೆರೆಬೇಟೆ


Team Udayavani, Oct 27, 2024, 4:10 PM IST

kerebete and venky movie to goa film festival

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ವೆಂಕ್ಯಾ ಹಾಗೂ ಕೆರೆಬೇಟೆ ಸಿನಿಮಾಗಳು ಆಯ್ಕೆಯಾಗಿವೆ. 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಗೋವಾದಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯಾ ಸಿನಿಮೋತ್ಸವ’ ನವೆಂಬರ್‌ 20ರಿಂದ 28ರ ತನಕ ನಡೆಯಲಿದೆ. ಗೋವಾದ ಪಣಜಿಯಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ದೇಶ ವಿದೇಶದ ಹಲವರು ಭಾಗಿಯಾಗಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ “ವೆಂಕ್ಯಾ’ ಹಾಗೂ “ಕೆರೆಬೇಟೆ’ ಪ್ರದರ್ಶನ ಕಾಣಲಿವೆ.

ಕೆರೆಬೇಟೆ

ಕೆರೆಬೇಟೆ ರಾಜಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ. ಗೌರಿ ಶಂಕರ್‌ ನಾಯಕನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ನಟನೆ ಜೊತೆಗೆ ಗೌರಿ ಶಂಕರ್‌ ನಿರ್ಮಾಣದ ಜವಾಬ್ದಾರಿಯಮನ್ನು ವಹಿಸಿಕೊಂಡಿದ್ದರು. ತುಂಬಾ ಕಷ್ಟಪಟ್ಟು ಇಷ್ಟ ಪಟ್ಟು ಮಾಡಿದ ಸಿನಿಮಾವಿದು. ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಈ ಸಿನಿಮಾ ಮಾರ್ಚ್‌ 15ಕ್ಕೆ ರಿಲೀಸ್‌ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್‌ ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್‌ ದೇಶಪಾಂಡೆ, ಸಂಪತ್‌ ಕುಮಾರ್‌ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು

ವೆಂಕ್ಯಾ

ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್‌ ಒಡೆಯರ್‌ ಹಾಗೂ ಸಾಗರ್‌ ಪುರಾಣಿಕ್‌ ಕಾಂಬಿನೇಷನ್‌ ನಲ್ಲಿ ವೆಂಕ್ಯಾ ಚಿತ್ರ ಮೂಡಿಬಂದಿದೆ. ವೆಂಕ್ಯಾನಿಗೆ ಸಾಗರ್‌ ಪುರಾಣಿಕ್‌ ಆ್ಯಕ್ಷನ್‌ ಕಟ್‌ ಹೇಳುವುದರ ಜೊತೆಗೆ ನಾಯಕರಾಗಿದ್ದಾರೆ. ಚಿತ್ರದಲ್ಲಿ ಸಾಗರ್‌ ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್‌ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಕಥೆಯಾಧಾರಿಸಿತ ವೆಂಕ್ಯಾ ಸಿನಿಮಾವನ್ನು ಅಪೇಕ್ಷಾ ಮತ್ತು ಪವನ್‌ ನಿರ್ಮಾಣ ಮಾಡುತ್ತಿದ್ದಾರೆ. ಪವನ್‌ ಸ್ನೇಹಿತರಾದ ಅವಿನಾಶ್‌ ವಿರೈ ಮತ್ತು ಮೋಹನ್‌ ಲಾಲ್‌ ಮೆನನ್‌ ಸಹ ನಿರ್ಮಾಣವಿರಲಿದೆ.

ಟಾಪ್ ನ್ಯೂಸ್

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan Thoogudeepa: ನವೆಂಬರ್‌ನಲ್ಲಿ ದರ್ಶನ್‌ ಎರಡು ಸಿನಿಮಾ ರೀರಿಲೀಸ್

Darshan Thoogudeepa: ನವೆಂಬರ್‌ನಲ್ಲಿ ದರ್ಶನ್‌ ಎರಡು ಸಿನಿಮಾ ರೀರಿಲೀಸ್

Janamari song from Yello Jogappa Nin Aramane Movie

Yello Jogappa Nin Aramane Movie; ಜೋಗಪ್ಪನ ಅರಮನೆಯಿಂದ ಮತ್ತೊಂದು ಹಾಡು ಬಂತು

badavara makkalu belibeku kanrayya movie

Sandalwood: ʼಬಡವ್ರ ಮಕ್ಕಳು ಬೇಳಿಬೇಕು ಕಣ್ರಯ್ಯʼ ಟ್ರೇಲರ್‌ ಶೀಘ್ರ

BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ

BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ

MUST WATCH

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಹೊಸ ಸೇರ್ಪಡೆ

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

road-mishap-11

Puttur: ಬೈಕ್‌-ಸ್ಕೂಟರ್‌ ಅಪಘಾತ; ಗಾಯ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

2

Kasaragod: ಕುಖ್ಯಾತ ಆರೋಪಿ ಕಾರಾಟ್‌ ನೌಶಾದ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.