Udupi: ಮೂಲೆಗುಂಪಾದ ಹೊಸ ಅಗ್ನಿಶಾಮಕ ಠಾಣೆ ಬೇಡಿಕೆ

ಬ್ರಹ್ಮಾವರ, ಹೆಬ್ರಿ, ಮಣಿಪಾಲದಲ್ಲಿ ನಿರ್ಮಾಣ ಪ್ರಸ್ತಾವನೆ ಮತ್ತಷ್ಟು ವಿಳಂಬ

Team Udayavani, Oct 27, 2024, 5:02 PM IST

9(2)

ಉಡುಪಿ: ಜಿಲ್ಲೆ ರಚನೆಗೊಂಡ ವರ್ಷ 25 ಕಳೆದರೂ ಜಿಲ್ಲೆಗೆ ಹೆಚ್ಚುವರಿ ಅಗ್ನಿಶಾಮಕ ಠಾಣೆ ರಚನೆ ಪ್ರಸ್ತಾವನೆಗೆ ಸರಕಾರದಿಂದ ಸ್ಪಂದನೆಯೇ ಸಿಕ್ಕಿಲ್ಲ.

ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರ, ಬೈಂದೂರಿನಲ್ಲಿ ಈಗಾಗಲೇ ಅಗ್ನಿಶಾಮಕ ಠಾಣೆ ಗಳು ಕಾರ್ಯಾಚರಣೆ ಮಾಡಿಕೊಂಡಿವೆ. ಆದರೆ ಪಡುಬಿದ್ರಿ, ಬ್ರಹ್ಮಾವರ, ಹೆಬ್ರಿ, ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವ ಪ್ರಸ್ತಾವನೆ ಮತ್ತಷ್ಟು ವಿಳಂಬಗತಿಯಾಗುತ್ತಿದೆ. ಈ ನಡುವೆ 2025ರ ಮೊದಲ ತಿಂಗಳಿಗೆ ಪಡುಬಿದ್ರಿಯಲ್ಲಿ ಸುಜ್ಲಾನ್‌ನವರು ನೀಡಿದ ಸ್ಥಳದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮೇಲೆ ಮತ್ತಷ್ಟು ಒತ್ತಡ ಹಾಕುವ ಅನಿವಾರ್ಯತೆಯೂ ಇದೆ. ಅನಂತರ ಹೆಬ್ರಿ ತಾಲೂಕು ಕಚೇರಿ ಸಂಕೀರ್ಣ, ಬ್ರಹ್ಮಾವರದ ಕೃಷಿ ಕೇಂದ್ರದ ಬಳಿ ಹಾಗೂ ಮಣಿಪಾಲ ಪೊಲೀಸ್‌ ಕ್ವಾಟ್ರಸ್‌ ಬಳಿ ಇರುವ ಸ್ಥಳದಲ್ಲಿ ಠಾಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇನ್ನೂ ಸರಕಾರದ ಅನುಮೋದನೆ ಸಿಕ್ಕಿಲ್ಲ.

ವಾಹನಗಳ ಕೊರತೆ
ಜಿಲ್ಲೆಯ ಎಲ್ಲ ಅಗ್ನಿಶಾಮಕ ಠಾಣೆ ಯಲ್ಲಿಯೂ ಈ ಹಿಂದೆ ತಲಾ 2 ವಾಹನಗಳಿದ್ದವು. ಆದರೆ ಈಗ ತಲಾ1 ವಾಹನಗಳಷ್ಟೇ ಕಾರ್ಯಾಚರಣೆ ಮಾಡಿಕೊಂಡಿವೆ. 15 ವರ್ಷ ಹಳೆಯ ವಾಹನಗಳು ಸುಸ್ಥಿತಿಯಲ್ಲಿದ್ದರೂ ಅದನ್ನು ಬಳಕೆ ಮಾಡಬಾರದೆಂಬ ಕೇಂದ್ರ ಸರಕಾರದ ನಿಯಮದ ಕಾರಣ ವಾಹನಗಳು ಮೂಲೆ ಸೇರಿವೆ. ರಾಜ್ಯಾದ್ಯಂತ ಈ ಸಮಸ್ಯೆ ಇದ್ದರೂ ಸರಕಾರ ಹೊಸ ವಾಹನ ಒದಗಿಸುವ ಸೂಕ್ತ ನಿರ್ಧಾರ ತೆಗೆದುಕೊಂಡರೆ ಕಾರ್ಯಾಚರಣೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬುವುದು ಸಿಬಂದಿಯ ಅನಿಸಿಕೆ.

ಲಭ್ಯ ಪರಿಕರಗಳು
ಉಡುಪಿಯಲ್ಲಿ 4 ಬೋಟ್‌ ಹಾಗೂ 2 ಓಬಿಎಂ(ಓಟ್‌ ಬೋರ್ಡ್‌ ಮೋಟಾರ್‌), ಕುಂದಾಪುರ, ಮಲ್ಪೆ ಯಲ್ಲಿ ತಲಾ 2 ಬೋಟ್‌ 2 ಓಬಿಎಂ, ಕಾರ್ಕಳ ಹಾಗೂ ಬೈಂದೂರಿನಲ್ಲಿ ತಲಾ 1 ಬೋಟ್‌ ಹಾಗೂ 1 ಒಬಿಎಂಗಳಿವೆ. 21 ಬೇ ಶೀಟ್‌ಗಳು, 104 ಲೈಫ್ ಬಾಯ್‌, 126 ಲೈಫ್ ಜಾಕೆಟ್‌, 7 ಆಸ್ಕಾ ಲೈಟ್‌, 11 ಪೆಟ್ರೊಲ್‌ ಚೈನ್‌, 5 ಕಾಂಕ್ರಿಟ್‌ ಕಟ್ಟರ್‌ಗಳು ಅಗ್ನಿಶಾಮಕ ಠಾಣೆಯಲ್ಲಿವೆ. 137 ಮಂಜೂರಾದ ಸಿಬಂದಿಯ ಪೈಕಿ. 91 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 46 ಹುದ್ದೆಗಳು ಇನ್ನು ಕೂಡ ಖಾಲಿಯಿವೆ.

ಸರಕಾರಕ್ಕೆ ಪ್ರಸ್ತಾವನೆ
ಜಿಲ್ಲೆಗೆ ಹೆಚ್ಚುವರಿ ಅಗ್ನಿಶಾಮಕ ಠಾಣೆ ಹಾಗೂ ವಾಹನಗಳನ್ನು ಒದಗಿಸುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರಸ್ತುತ ಇರುವ ವಾಹನ ಹಾಗೂ ಸಿಬಂದಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ.
-ವಿನಾಯಕ್‌ ಕಲ್ಗೊಟ್ಕರ್‌, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ

ಟಾಪ್ ನ್ಯೂಸ್

Ganapathi-Sangha

Udupi: ಗಣಪತಿ ಸಹಕಾರಿ ವ್ಯವಸಾಯಕ ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ದೊಡ್ಡದು: ವೆರೋನಿಕಾ

1-eqw-ewq

BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ

kejriwal 3

Maharashtra Polls; ನಮಗೆ ಸ್ಪರ್ಧಿಸಬಹುದಿತ್ತು, ಆದರೆ..: ಆಪ್ ಹೇಳಿದ್ದೇನು?

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganja

Udupi: ಗಾಂಜಾ ಮಾರಾಟಕ್ಕೆ ಯತ್ನ: ಓರ್ವ ಬಂಧನ

1

Kelarkalabettu: ವ್ಯಕ್ತಿ ನಾಪತ್ತೆಯಾಗಿ 22 ವರ್ಷದ ಬಳಿಕ ದೂರು ದಾಖಲು

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

puttige-4

Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ

12(1)

Kota: ದುರಸ್ತಿಗಾಗಿ ಕಾಯುತ್ತಿವೆ ಹೆದ್ದಾರಿ ಗುಂಡಿಗಳು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

fraudd

Mangaluru: ನಕಲಿ ಲೆಟರ್‌ಹೆಡ್‌, ಸೀಲ್‌ ಬಳಕೆ; ಪ್ರಕರಣ ದಾಖಲು

15

Ullal: ಬಾವಿಗೆ ಬಿದ್ದ ಹೋರಿ; ಅಗ್ನಿಶಾಮಕ ದಳದ ಸಿಬಂದಿಯಿಂದ ರಕ್ಷಣೆ

16

Kadaba: ಮರಳುಗಾರಿಕೆ ಅಡ್ಡೆಗೆ ದಾಳಿ; ಮರಳು ಸಹಿತ ವಾಹನ ವಶ

complaint

Kundapura: ವರದಕ್ಷಿಣೆ ಕಿರುಕುಳ; ದೂರು ದಾಖಲು

ganja

Udupi: ಗಾಂಜಾ ಮಾರಾಟಕ್ಕೆ ಯತ್ನ: ಓರ್ವ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.