Kota: ದುರಸ್ತಿಗಾಗಿ ಕಾಯುತ್ತಿವೆ ಹೆದ್ದಾರಿ ಗುಂಡಿಗಳು
ನಿಮ್ಮೂರಿನ ಹೆದ್ದಾರಿಯಲ್ಲಿ ಹೊಂಡ, ಬೀದಿ ದೀಪ ಸಮಸ್ಯೆ ಇದ್ದರೆ ಟೋಲ್‌ಗೆ ಕರೆ ಮಾಡಿ
Team Udayavani, Oct 27, 2024, 5:37 PM IST
ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಆರಂಭಿಸುವುದಾಗಿ ಹೆದ್ದಾರಿ ನಿರ್ವಹಣೆ ಹೊತ್ತಿರುವ ಕಂಪನಿ ತಿಳಿಸಿತ್ತು. ಇದೀಗ ಮಳೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದು, ಮಳೆಗಾಲ ಮುಗಿಯುತ್ತ ಬಂದಿದೆ. ಹೀಗಾಗಿ ತತ್‌ಕ್ಷಣ ಕಾಮಗಾರಿ ಆರಂಭಿಸಬೇಕು ಎನ್ನುವುದು ವಾಹನ ಸವಾರರ ಬೇಡಿಕೆಯಾಗಿದೆ.
ಈ ಹಿಂದೆ ಹೆದ್ದಾರಿ ನಿರ್ವಹಣೆಯನ್ನು ಹೊಸದಾಗಿ ಪಡೆದ ಹೈವೇ ಕನ್‌ಸ್ಟ್ರಕ್ಷನ್ಸ್ ಕಂಪನಿ ರಸ್ತೆಯ ಮರು ಡಾಂಬರೀಕರಣ ಕೆಲಸವನ್ನು ಆರಂಭಿಸಿತ್ತು. ಉಡುಪಿಯಿಂದ ಸಾಸ್ತಾನದ ತನಕ ಡಾಂಬರೀಕರಣ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮಳೆಗಾಲವಾದ್ದರಿಂದ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯ ಗುಂಡಿಗಳು ಬೃಹತ್ ಗಾತ್ರದಲ್ಲಿ ಬಾಯ್ತರೆದಿದೆ. ರಾತ್ರಿ ವೇಳೆ ಬೈಕ್ ಸವಾರರು ಹೊಂಡವನ್ನು ಗಮನಿಸದೆ ಸ್ಕಿಡ್ ಆಗಿ ಬೀಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಕಾರು ಮೊದಲಾದ ಘನ ವಾಹನಗಳು ಹೊಂಡ ತಪ್ಪಿಸುವ ಬರದಲ್ಲಿ ಅಪಘಾತವಾಗುತ್ತಿದೆ. ಆದ್ದರಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಂಬರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವ ಬೇಡಿಕೆ ಇದೆ.
ಕಾಮಗಾರಿ ಶೀಘ್ರ ಆರಂಭಿಸಿ
ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದ ವಾಹನ ಸವಾರರಿಗೆ ಸಂಚರಿಸಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಪರಿಹಾರ ಅಗತ್ಯವಿದೆ. ಈ ಬಗ್ಗೆ ನಿರ್ವಹಣಾ ಕಂಪನಿಯ ಗಮನಕ್ಕೂ ಸಮಸ್ಯೆಯನ್ನು ತರಲಾಗಿದ್ದು ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕು ಎಂದು ಸಾಸ್ತಾನದ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಪ್ರತಾಪ್ ಶೆಟ್ಟಿ ಆಗ್ರಹಿಸಿದ್ದಾರೆ.
ನಿಮ್ಮಲ್ಲಿಯೂ ಸಮಸ್ಯೆಗಳಿದೆಯೇ ?
ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಹೊಂಡ, ನೀರು ನಿಲ್ಲುವುದು, ಬೀದಿ ದೀಪ, ವಾಹನ ಸಂಚಾರಕ್ಕೆ ಸಮಸ್ಯೆ ಮೊದಲಾದ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು.
ಶೀಘ್ರ ಕಾಮಗಾರಿ ಆರಂಭ
ತಾಂತ್ರಿಕ ಕಾರಣದಿಂದ ಮರು ಡಾಂಬರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಸಾಸ್ತಾನದಿಂದ-ಕುಂದಾಪುರ ತನಕ ಮರು ಡಾಂಬರೀಕರಣವನ್ನು ಶೀಘ್ರ ಆರಂಭಿಸಲಾಗುವುದು. ಜತೆಗೆ ರಸ್ತೆಯ ಹೊಂಡಗಳಿಗೂ ತೇಪೆ ಹಾಕುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.
-ತಿಮ್ಮಯ್ಯ, ಉಡುಪಿ ಟೋಲ್‌ಗಳ ಮ್ಯಾನೇಜರ್
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.