Karnataka: ಇಂದು ಸಂಪುಟ ಸಭೆ: ಜಾತಿ ಗಣತಿ ವರದಿ ಮಂಡನೆ ಕ್ಷೀಣ

ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರದಿ ಮಂಡನೆಗೆ ಗ್ರಹಣ ಒಳಮೀಸಲಾತಿ ಬಗ್ಗೆ ಚರ್ಚೆ ಸಾಧ್ಯತೆ

Team Udayavani, Oct 28, 2024, 6:50 AM IST

Karnataka: ಇಂದು ಸಂಪುಟ ಸಭೆ: ಜಾತಿ ಗಣತಿ ವರದಿ ಮಂಡನೆ ಕ್ಷೀಣ

ಬೆಂಗಳೂರು: ಬಹುಚರ್ಚಿತ ಜಾತಿ ಗಣತಿ ವರದಿ ಸೋಮವಾರವೂ ಸಚಿವ ಸಂಪುಟ ಸಭೆಯ ಮುಂದೆ ಮಂಡನೆಯಾಗುವ ಸಾಧ್ಯತೆಗಳು ಕ್ಷೀಣಿಸಿದ್ದು, ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರದಿ ಮಂಡನೆ ಬೇಡ ಎನ್ನುವ ನಿರ್ಣಯಕ್ಕೆ ಸರಕಾರ ಬಂದಿದೆ.

ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ-2015ನ್ನು ಫೆ. 9ರಂದು ಆಯೋಗದ ಅಂದಿನ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರಿಂದ ಸ್ವೀಕರಿಸಿದ್ದ ಸರಕಾರ, ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಪ್ರಕಟಿಸಿತ್ತು.

ಇದಕ್ಕೆ ಸಾಕಷ್ಟು ವಿರೋಧಗಳೂ ಇದ್ದು ವಿವಾದಾಸ್ಪದ ವರದಿಯಾಗಿದೆ. ಆಯೋಗದ ಹಿಂದಿನ ಸದಸ್ಯ ಕಾರ್ಯದರ್ಶಿ ಸಹಿಯನ್ನೇ ಮಾಡಿರಲಿಲ್ಲ, ವರದಿಯಲ್ಲಿನ ಅಂಶಗಳು ಸೋರಿಕೆಯಾಗಿವೆ, ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಲಾಗಿದೆ ಎಂಬಿತ್ಯಾದಿ ಆರೋಪಗಳೂ ಇವೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಹಿರಿಯ ಮುಖಂಡರೂ ಆದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಜಾತಿ ಗಣತಿ ವರದಿಗೆ ವಿರೋಧಿಸಿದ್ದರು.

ವರದಿಯಲ್ಲಿ ಏನಿದೆ ಎಂಬುದನ್ನೇ ನೋಡಿದೆ ಈ ರೀತಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಅಭಿಪ್ರಾಯಪಟ್ಟಿದ್ದು, ಇದೇ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಸಭೆಯನ್ನೂ ನಡೆಸಿ, ಕೆಲ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ಸಹ ಮಾಡಿದ್ದರು. ವಿಪಕ್ಷ ಬಿಜೆಪಿ ಕೂಡ ವರದಿ ಮಂಡನೆಗೆ ತಮ್ಮ ವಿರೋಧವಿಲ್ಲ. ಒಮ್ಮೆ ಸಂಪುಟ ಸಭೆಯ ಮುಂದೆ ಮಂಡನೆಯಾಗಲಿ, ಅದರಲ್ಲಿರುವ ಅಂಶಗಳನ್ನು ಆಧರಿಸಿ ನಮ್ಮ ನಿಲುವು ಪ್ರಕಟಿಸುತ್ತೇವೆ ಎಂದಿತ್ತು. ಅದರಂತೆ, ಅ. 18ರ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಸಿಎಂ ಘೋಷಿಸಿದ್ದರು. ಬಳಿಕ ಅ. 25ರಂದು ಮಂಡಿಸುವುದಾಗಿ ಹೇಳಿದರು. ಅದಾದ ಅನಂತರ ಅ. 28 ರ ಸೋಮವಾರ ಮಂಡಿಸುವುದಾಗಿ ಪ್ರಕಟಿಸಿದ್ದರು.

ಇದೀಗ ಸೋಮವಾರ ಸಂಪುಟ ಸಭೆಯೇನೋ ನಡೆಯುತ್ತಿದೆ. ಆದರೆ, ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದನ್ನೇ ನೆಪವಾಗಿಸಿಕೊಂಡು ವರದಿ ಮಂಡನೆ ಬೇಡ ಎನ್ನುವ ತೀರ್ಮಾನಕ್ಕೆ ಸರಕಾರ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ಸೋಮವಾರ ನಡೆಯುವ ಸಂಪುಟ ಸಭೆಯ ಮುಂದೆಯೂ ಜಾತಿ ಗಣತಿ ವರದಿ ಮಂಡನೆ ಆಗುವುದಿಲ್ಲ.

ಅನೌಪಚಾರಿಕ ಚರ್ಚೆ ಸಾಧ್ಯತೆ
ಇನ್ನು ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಕ್ಕೆ ನೀಡಿದ್ದು, ಮೀಸಲಾತಿ ವರ್ಗೀಕರಣಕ್ಕೆ ಸರಕಾರದಲ್ಲೇ ಗೊಂದಲಗಳೂ ಇವೆ. ಎಡಗೈ ಸಮುದಾಯವು ಒಳಮೀಸಲಾತಿ ಜಾರಿಯ ಪರವಾಗಿದ್ದರೆ, ಬಲಗೈ ಸಮುದಾಯದ ಕೆಲವರು ವರ್ಗೀಕರಣವನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು ಎನ್ನುವ ಮೂಲಕ ಪರೋಕ್ಷ ಪ್ರತಿರೋಧ ಒಡ್ಡಿರುವುದಿದೆ. ಈ ಸಮಸ್ಯೆ ಬಗ್ಗೆ ಸಂಪುಟ ಸಭೆಯ ಕೊನೆಯಲ್ಲಿ ಅನೌಪಚಾರಿಕವಾಗಿ ಚರ್ಚೆ ನಡೆಯಬಹುದು ಎನ್ನಲಾಗಿದೆ.

“ಓದು ಕರ್ನಾಟಕ’ ಚಟುವಟಿಕೆಗೆ
14 ಕೋಟಿ ರೂ. ?
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29, ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ಕೃಷ್ಣಾ ನದಿಯಿಂದ ನೀರು ಒದಗಿಸುವ ಕಾಮಗಾರಿಗೆ 177 ಕೋಟಿ ರೂ., ನಾಗರಿಕ ಹಕ್ಕು ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್‌ ಠಾಣೆಗಳೆಂದು ಘೋಷಿಸಿ, ಅಗತ್ಯ 450 ಹುದ್ದೆಗಳ ಮಂಜೂರಾತಿ ನೀಡುವ ಸಾಧ್ಯತೆಯಿದ್ದು, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿನ್ಯಾಸ, ಮುದ್ರಣ, ವಿತರಣೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ 14 ಕೋಟಿ ರೂ.ಗಳನ್ನು “ಓದು ಕರ್ನಾಟಕ’ ಚಟುವಟಿಕೆಗೆ ಅನುಮೋದಿಸುವ ಸಾಧ್ಯತೆಗಳಿವೆ.

ಡಿ. 9ರಿಂದ 20ರ ವರೆಗೆ
ಬೆಳಗಾವಿಯಲ್ಲಿ ಅಧಿವೇಶನ
ಪ್ರಸಕ್ತ ವರ್ಷದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ತಯಾರಿ ನಡೆದಿದ್ದು, ಡಿಸೆಂಬರ್‌ 9ರಿಂದ 20ರವರೆಗೆ ಅಧಿವೇಶನ ಸಮಾವೇಶಗೊಳ್ಳುವ ಸಂಭವವಿದೆ. ಈ ಕುರಿತೂ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿದ್ದು, ಡಿ. 20ರಿಂದ 22ರ ವರೆಗೆ ಮಂಡ್ಯದಲ್ಲಿರುವ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಡಿ. 24, 25ರ ಕ್ರಿಸ್‌ಮಸ್‌ ರಜೆ, ಡಿ. 26 ಮತ್ತು 27ರಂದು ನಡೆಯುವ ಕಾಂಗ್ರೆಸ್‌ ಅಧಿವೇಶನಗಳ ಹಿನ್ನೆಲೆಯಲ್ಲಿ ಡಿ. 9-20ರ ವರೆಗೆ ಅಧಿವೇಶನದ ದಿನಾಂಕ ನಿಗದಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಟಾಪ್ ನ್ಯೂಸ್

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Ajekar-mahajar

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

DK-CM

Assembly By Election: ಗೆದ್ದು ಬನ್ನಿ; ಕಾಂಗ್ರೆಸ್‌ ಸಚಿವರಿಗೆ ರಣದೀಪ್‌ ಸುರ್ಜೇವಾಲ ಹುಕುಂ

BJP-waqf

Waqf Property: ವಕ್ಫ್ ಭೂ ವಿವಾದ: ಬಿಜೆಪಿ ಗಡುವು, ಹೋರಾಟದ ಎಚ್ಚರಿಕೆ

ಕನ್ನಡದಲ್ಲಿ ಎಂಜಿನಿಯರಿಂಗ್‌ ಓದಲು ಹಿಂದೇಟು! ಕಳೆದ 4 ವರ್ಷಗಳಲ್ಲೂ ಪ್ರವೇಶಕ್ಕೆ ನಿರಾಸಕ್ತಿ

ಕನ್ನಡದಲ್ಲಿ ಎಂಜಿನಿಯರಿಂಗ್‌ ಓದಲು ಹಿಂದೇಟು! ಕಳೆದ 4 ವರ್ಷಗಳಲ್ಲೂ ಪ್ರವೇಶಕ್ಕೆ ನಿರಾಸಕ್ತಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.