Ranji: ಪಾಟ್ನಾದಲ್ಲೂ ಮಳೆ ಅಡ್ಡಿ
Team Udayavani, Oct 28, 2024, 12:58 AM IST
ಪಾಟ್ನಾ: ಪ್ರಸಕ್ತ ರಣಜಿ ಋತುವಿನ ಆರಂಭದಿಂದಲೂ ಕರ್ನಾಟಕದ ಪಂದ್ಯಗಳಿಗೆ ಮಳೆಯಿಂದ ಅಡ್ಡಿಯಾಗುತ್ತಿದ್ದು, ಇದು ಪಾಟ್ನಾದಲ್ಲೂ ಮುಂದುವರಿದಿದೆ. ಭಾರೀ ಮಳೆಯಿಂದಾಗಿ ಬಿಹಾರ ವಿರುದ್ಧದ ದ್ವಿತೀಯ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು.
ಮೊದಲ ದಿನದಾಟದಲ್ಲಿ ಬಿಹಾರವನ್ನು 143ಕ್ಕೆ ತಡೆದು ನಿಲ್ಲಿಸಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 16 ರನ್ ಮಾಡಿತ್ತು. ಪಂದ್ಯವೀಗ ಇದೇ ಹಂತದಲ್ಲಿ ನಿಂತಿದೆ.
ಇದಕ್ಕೂ ಮೊದಲು ಮಧ್ಯಪ್ರದೇಶ ವಿರುದ್ಧ ಇಂದೋರ್ ಪಂದ್ಯಕ್ಕೆ ಹಾಗೂ ಕೇರಳ ವಿರುದ್ಧದ ಆಲೂರು ಪಂದ್ಯಕ್ಕೂ ಮಳೆಯಿಂದ ತೊಂದರೆ ಎದುರಾಗಿತ್ತು. ಈ ಎರಡೂ ಪಂದ್ಯಗಳು ಡ್ರಾಗೊಂಡಿದ್ದವು. ಬಿಹಾರ ವಿರುದ್ಧದ ಪಂದ್ಯವೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ. ಇದರಿಂದ ಕರ್ನಾಟಕದ ನಾಕೌಟ್ ಪ್ರವೇಶದ ಹಾದಿ ದುರ್ಗಮಗೊಳ್ಳಬಹುದು.
ಎಲೈಟ್ ಗ್ರೂಪ್ “ಸಿ’ಯಲ್ಲಿರುವ ಕರ್ನಾಟಕ ಕೇವಲ 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಮುಂದೆ ಹರಿಯಾಣ, ಬಂಗಾಲ, ಪಂಜಾಬ್, ಉತ್ತರಪ್ರದೇಶ ತಂಡಗಳ ಪ್ರಬಲ ಸವಾಲನ್ನು ಎದುರಿಸಬೇಕಿದೆ. ಹರಿಯಾಣ (10), ಕೇರಳ (7) ಮೊದಲೆರಡು ಸ್ಥಾನದಲ್ಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.