Mann Ki Baat: “ಡಿಜಿಟಲ್‌ ಅರೆಸ್ಟ್‌’ಗೆ ತುತ್ತಾಗದ ವಿಜಯಪುರ ವ್ಯಕ್ತಿಗೆ ಮೋದಿ ಮೆಚ್ಚುಗೆ

Team Udayavani, Oct 28, 2024, 1:15 AM IST

Mann Ki Baat: “ಡಿಜಿಟಲ್‌ ಅರೆಸ್ಟ್‌’ಗೆ ತುತ್ತಾಗದ ವಿಜಯಪುರ ವ್ಯಕ್ತಿಗೆ ಮೋದಿ ಮೆಚ್ಚುಗೆ

ವಿಜಯಪುರ: ಸೈಬರ್‌ ಕದೀಮರ “ಡಿಜಿಟಲ್‌ ಅರೆಸ್ಟ್‌’ ಎಂಬ ಹೊಸ ವಂಚನೆಯ ಜಾಲದಿಂದ ಬಚಾವ್‌ ಆದ ವಿಜಯಪುರದ ರಹೀಮ ನಗರದ ನಿವಾಸಿ ಸಂತೋಷ ಚೌಧರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ “ಮನ್‌ ಕೀ ಬಾತ್‌’ನಲ್ಲಿ ಪ್ರಸ್ತಾವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದ ಜನತೆಗೂ ಸೈಬರ್‌ ವಂಚನೆಯಿಂದ ಎಚ್ಚರ ವಹಿಸುವುದಕ್ಕೆ ಈ ಯುವಕನನ್ನು ಉದಾಹರಣೆಯಾಗಿ ನೀಡಿದ್ದಾರೆ. ಖುದ್ದು ಪ್ರಧಾನಿ ಮೋದಿ ಅವರೇ ತನ್ನ ಬಗ್ಗೆ ಮಾತ ನಾಡಿದಕ್ಕೆ ಸಂತೋಷ ಚೌಧರಿ ಸಂತಸ ಗೊಂಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಮನ್‌ ಕಿ ಬಾತ್‌ನಲ್ಲಿ ಡಿಜಿಟಲ್‌ ವಂಚನೆಗಳ ಬಗ್ಗೆ ಪ್ರಸ್ತಾವಿಸಿ, ನಕಲಿ ಪೊಲೀಸ್‌ ಅಧಿ ಕಾರಿಗಳೊಂದಿಗೆ ಹೇಗೆ ಜಾಣತನದಿಂದ ಬಲೆಗೆ ಬೀಳುವುದನ್ನು ತಪ್ಪಿಸ ಬಹುದು ಎಂಬುದನ್ನು ಸಂತೋಷ ಚೌಧರಿ ಪ್ರಕರಣವನ್ನು ಎತ್ತಿ ತೋರಿಸಿದರು. ಡಿಜಿಟಲ್‌ ಅರೆಸ್ಟ್‌ ವಂಚನೆಗಳಿಂದ ಜಾಗರೂಕರಾಗಿರಿ. ಯಾವುದೇ ತನಿಖಾ ಸಂಸ್ಥೆಗಳು ವಿಚಾರಣೆಗಾಗಿ ವೀಡಿಯೋ ಕಾಲ್‌ ಮಾಡುವುದಿಲ್ಲ ಎಂದೂ ದೇಶದ ಜನತೆಗೆ ತಿಳಿಸಿದರು.

ಏನಿದು “ಡಿಜಿಟಲ್‌ ಅರೆಸ್ಟ್‌’ ಪ್ರಕರಣ?
ಸಂತೋಷ ಚೌಧರಿಗೆ ಸೆ. 16ರಂದು ಕರೆ ಮಾಡಿ ನಿಮ್ಮ ಮೊಬೈಲ್‌ ನಂಬರ್‌ ಬ್ಲಾಕ್‌ ಆಗುತ್ತದೆ ಎಂದು ಹೇಳಿ ನಂಬರ್‌ 9 ಒತ್ತಲು ತಿಳಿಸಿರುತ್ತಾರೆ. ಬಳಿಕ ಟ್ರೈ ಅಧಿ ಕಾರಿಗಳ ಹೆಸರಲ್ಲಿ ಮಾತನಾಡಿ, ನಿಮ್ಮ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿದೆ. ಆಧಾರ್‌ ಕಾರ್ಡ್‌ ಮೇಲೆ ಅನೇಕ ಮೊಬೈಲ್‌ ನಂಬರ್‌ ಪಡೆದಿರುವ ಬಗ್ಗೆ ದೂರು ಬಂದಿದೆ.

ನಿಮ್ಮ ನಂಬರ್‌ ರದ್ದಾಗುತ್ತದೆ ಎಂದು ವಂಚಕರು ಹೇಳಿ ಮುಂಬಯಿ ಸೈಬರ್‌ ಠಾಣೆಗೆ ಸಂಪರ್ಕ ಮಾಡುತ್ತೇವೆ ಎಂದು ಹೇಳಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವೀಡಿಯೋ ಕಾಲ್‌ ಮೂಲಕ ವಿಚಾರಣೆ ಮಾಡಲು ಶುರು ಮಾಡುತ್ತಾರೆ. ಇದರಿಂದ ಅನುಮಾನಗೊಂಡ ಸಂತೋಷ ಚೌಧರಿ ತನ್ನ ನಿಜ ಹೆಸರನ್ನು ಹೇಳದೆ ಸಂತೋಷ ಪಾಟೀಲ್‌ ಎಂದು ಹೇಳಿ ವೀಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ಬಗ್ಗೆ ವಿಜಯಪುರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜತೆಗೆ ಪೊಲೀಸರ ಹೆಸರಲ್ಲಿ ವಿಚಾರಣೆ ಮಾಡುತ್ತಿದ್ದ ವೀಡಿಯೋ ವೈರಲ್‌ ಆಗಿತ್ತು.

ಈ ವೀಡಿಯೋವನ್ನು ಕರ್ನಾಟಕ ಮೂಲದ ತೆಲಂಗಾಣ ಐಪಿಎಸ್‌ ಅ ಧಿಕಾರಿ ವಿ.ಎಸ್‌. ಸಜ್ಜನ್‌ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅಲ್ಲಿಂದ ಇದು ಗೃಹ ಸಚಿವಾಲಯದ ಗಮನಕ್ಕೆ ಬಂದಿತ್ತು. ಬಳಿಕ ಸಂತೋಷ ಚೌಧರಿಗೂ ಸಹ ಗೃಹ ಸಚಿವಾಲಯದ ಅಧಿ ಕಾರಿಗಳು ಅ. 25ರಂದು ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು.

ಟಾಪ್ ನ್ಯೂಸ್

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.