ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ವಿನಿಮಯಕ್ಕೆ ಡಾಲರ್‌ ಬದಲು ಸ್ಥಳೀಯ ಕರೆನ್ಸಿ ಬಳಕೆಗೆ ಹೆಚ್ಚು ಒತ್ತು

Team Udayavani, Oct 28, 2024, 7:45 AM IST

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಈ ಬಾರಿಯ ಬ್ರಿಕ್ಸ್‌ ಶೃಂಗಸಭೆಯಲ್ಲಿ ಹೆಚ್ಚು ಗಮನ ಸೆಳೆದ ವಿಚಾರವೆಂದರೆ – ಡಿ-ಡಾಲರೈಸೇಶನ್‌. ಅಂದರೆ ಜಾಗತಿಕ ವ್ಯವಹಾರಗಳಲ್ಲಿ ಅಮೆರಿಕದ ಡಾಲರ್‌ ಮಾನ್ಯತೆಯನ್ನು ಕುಗ್ಗಿಸುವ ಪ್ರಯತ್ನ. ರಷ್ಯಾ ಮತ್ತಿತರ ಬ್ರಿಕ್ಸ್‌ ರಾಷ್ಟ್ರಗಳು ದ್ವಿರಾಷ್ಟ್ರ ವ್ಯವಹಾರಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನೇ ಬಳಸಲು ಈ ಶೃಂಗಸಭೆಯಲ್ಲಿ ತೀರ್ಮಾನಿಸಿವೆ. ಇದು ಈ ವರ್ಷ ಮಾತ್ರವಲ್ಲದೇ ಹಲವಾರು ದಶಕಗಳಿಂದ ನಡೆಯುತ್ತಿರುವ ಪ್ರಯತ್ನ. ಹಾಗಿದ್ದರೆ ಈ ಡಿ- ಡಾಲರೈಸೇಶನ್‌ನಿಂದ ಜಾಗತಿಕ ಆರ್ಥಿಕತೆಯಲ್ಲಾಗುವ ಬದಲಾವಣೆಯೇನು? ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು? ಮತ್ತಿತರ ವಿಚಾರಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಚರ್ಚೆಯಲ್ಲಿರುವ ಡಿ-ಡಾಲರೈಸೇಶನ್‌
ಕಳೆದ ಶತಮಾನದಿಂದಲೂ ಜಗತ್ತಿನ ಬಹುತೇಕ ರಾಷ್ಟ್ರಗಳು ಮತ್ತೊಂದು ರಾಷ್ಟ್ರ ದೊಂದಿಗಿನ ವ್ಯಾಪಾರ ಸಂಬಂಧಕ್ಕೆ, ಪಾವತಿಗೆ ಅಮೆರಿಕನ್‌ ಡಾಲರನ್ನೇ ಅವಲಂಬಿಸಿವೆ. 1970ರ ದಶಕದಲ್ಲಿ ತನ್ನ ಹೆಚ್ಚಿನ ಪ್ರಾಬಲ್ಯವನ್ನು ಬಳಸಿ ಅಮೆರಿಕ ತನ್ನ ಕರೆನ್ಸಿಯನ್ನೇ ಜಾಗತಿಕವಾಗಿ ವ್ಯಾಪಾರ ಸಾಧನ ವನ್ನಾಗಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ನಿಯಂತ್ರಣ ದಿಂದ ಹೊರಬಂದು ತಮ್ಮದೇ ಆದ, ಮಧ್ಯಸ್ಥಿಕೆಯಿಲ್ಲದ ವ್ಯಾಪಾರ ಮಾಡಲು ಹಲವಾರು ರಾಷ್ಟ್ರಗಳು ಚಿಂತಿಸಿವೆ. ಉದಾಹರಣೆಗೆ ಭಾರತ ಇನ್ನೊಂದು ದೇಶದ ಜತೆ ವ್ಯವಹಾರ ಮಾಡುವಾಗ ಡಾಲರ್‌ ಬದಲು ರೂಪಾಯಿಯಲ್ಲೇ ವ್ಯವಹರಿಸಬಹುದು. ಈ ಪ್ರಕ್ರಿಯೆಗೆ ಇನ್ನಷ್ಟು ಸುಧಾರಣೆ ತರಲು ಸಾಕಷ್ಟು ರಾಷ್ಟ್ರಗಳು ಒಕ್ಕೊರಲಿನಿಂದ ಹೇಳುತ್ತಿರು ವುದು ಡಿ-ಡಾಲರೈಸೇಶನ್‌ ಪ್ರಕ್ರಿಯೆ. ಇದರಿಂದ ಸ್ಥಳೀಯ ಕರೆನ್ಸಿಗಳ ಬೆಳವಣಿಗೆಯಾಗುತ್ತದೆ, ವ್ಯಾಪಾರ ಸುಲಭಗೊಳ್ಳುತ್ತದೆ, ಆರ್ಥಿಕತೆಯಲ್ಲಿ ಸುಧಾರಣೆಯಾಗುತ್ತದೆ ಎಂಬುದು ಈ ರಾಷ್ಟ್ರಗಳ ಅಭಿಪ್ರಾಯ.

ರಷ್ಯಾದಿಂದಲೇ ಆರಂಭವಾದ ಟ್ರೆಂಡ್‌?
2022ರಲ್ಲಿ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗ, ಅಮೆರಿಕ ಸೇರಿ ಇತರ ಜಿ7 ರಾಷ್ಟ್ರಗಳು ಜಾಗತಿಕ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನು ನಿರ್ಬಂಧಿಸಿದವು. ಇದರಿಂದ ರಷ್ಯಾದ ಪ್ರಮುಖ 7 ಬ್ಯಾಂಕ್‌ಗಳಲ್ಲಿ ಸ್ವಿಫ್ಟ್ ವ್ಯವಸ್ಥೆ ನಿರ್ಬಂಧಗೊಂಡಿತು. ಪ್ರಮುಖ ತೈಲ ರಫ್ತುದಾರನಾಗಿರುವ ರಷ್ಯಾ ಈ ನಿರ್ಬಂಧದ ಬಳಿಕ ಡಾಲರ್‌ ಸಹಾಯವಿಲ್ಲದೇ ರಷ್ಯಾದ ಕರೆನ್ಸಿ “ರುಬಲ್ಸ…’ ಮೂಲಕವೇ ವ್ಯವಹರಿಸಲು ನಿರ್ಧರಿಸಿತಲ್ಲದೇ ಮತ್ತಷ್ಟು ರಾಷ್ಟ್ರಗಳಿಗೂ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜಿಸಿತು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ಶೃಂಗದಲ್ಲಿ ರಷ್ಯಾ ಡಾಲರ್‌ ಬದಲಿಗೆ ಬ್ರಿಕ್ಸ್‌ನದ್ದೇ ಪ್ರತ್ಯೇಕ ಕರೆನ್ಸಿ ಜಾರಿ ಮಾಡಬೇಕೆಂಬ ಪ್ರಸ್ತಾವ ಮುಂದಿಟ್ಟಿತ್ತು. ಪ್ರಸ್ತುತವಾಗಿ ಅಷ್ಟು ತ್ವರಿತವಾಗಿ ಡಾಲರ್‌ಗೆ ಬದಲಿ ಕರೆನ್ಸಿ ತರುವುದು ಅಸಾಧ್ಯವಾದರೂ ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ನೋಡಬಹುದು.

ಡಾಲರ್‌ ಮೇಲಷ್ಟೇ ಏಲೆ ಅವಲಂಬಿತ?
ಮೊದಲ ವಿಶ್ವಯುದ್ಧಕ್ಕೂ ಮೊದಲು ವಿಶ್ವದ ಅನೇಕ ರಾಷ್ಟ್ರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಬ್ರಿಟಿಷರು ಹೆಚ್ಚು ಸಂಪತ್ತು ಹೊಂದಿದ್ದ ಕಾರಣ ಬ್ರಿಟನ್‌ನ ಪೌಂಡ್‌ ಸ್ಟರ್ಲಿಂಗ್‌ ವಿಶ್ವದಾದ್ಯಂತ ಚಾಲ್ತಿಯಲ್ಲಿದ್ದ ಕರೆನ್ಸಿಯಾಗಿತ್ತು. ಯುದ್ಧದ ಬಳಿಕ ಬ್ರಿಟನ್‌ ಸಂಪತ್ತು ಕ್ಷೀಣಿಸಿತ್ತು. ಯುದ್ಧದ ಸಮಯದಲ್ಲಿ ಪ್ರಮುಖ ಶಸ್ತ್ರಾಸ್ತ್ರ ಮತ್ತಿತರ ವಸ್ತುಗಳ ಪೂರೈಕೆದಾರನಾದ ಅಮೆರಿಕಕ್ಕೆ ಬೇರೆ ರಾಷ್ಟ್ರಗಳಿಂದ ಸಂಪತ್ತು ಒದಗಿಬಂತು. ಕೊನೆಗೆ 2ನೇ ವಿಶ್ವ ಯುದ್ಧ ಮುಕ್ತಾಯಗೊಳ್ಳುವ ವೇಳೆಗೆ ಅಮೆರಿಕ ಸಂಪದ್ಭರಿತವಾಗಿತ್ತು. ಅನಂತರ 1944ರಲ್ಲಿ 44 ರಾಷ್ಟ್ರಗಳು ಸೇರಿ ಅಮೆರಿಕ ಡಾಲರನ್ನು ವಿಶ್ವಮಾನ್ಯ ಕರೆನ್ಸಿಯನ್ನಾಗಿ ಬಳಸಲು ಒಪ್ಪಂದ ಮಾಡಿಕೊಂಡವು. ಇದನ್ನು ಬ್ರೆಟನ್‌ ವುಡ್ಸ್‌ ಒಪ್ಪಂದ ಎನ್ನಲಾಗುತ್ತದೆ. ಈ ಒಪ್ಪಂದದ ಮೂಲಕ ಸೆಂಟ್ರಲ್‌ ಬ್ಯಾಂಕ್‌ ಸ್ಥಾಪಿಸಲಾಯಿತು. ಈ ಬ್ಯಾಂಕ್‌ಗಳು ಡಾಲರ್‌ ಹಾಗೂ ಇತರ ಕರೆನ್ಸಿಗಳ ನಡುವಿನ ಸ್ಥಿರ ವಿನಿಮಯ ದರ ನಿರ್ವಹಣೆ ಮಾಡುತ್ತವೆ. ಈ ಒಪ್ಪಂದದ ಬಳಿಕ ವಿದೇಶಿ ವಿನಿಮಯಕ್ಕೆ ಅಮೆರಿಕ ಡಾಲರ್‌ ಪ್ರಾಥಮಿಕ ಮೀಸಲು ಕರೆನ್ಸಿಯಾಗಿ ಮಾರ್ಪಟ್ಟಿದೆ.

ಮೌಲ್ಯ ಕಳೆದುಕೊಳ್ಳುವುದೇ ಡಾಲರ್‌?
ಬ್ರಿಟಿಷರ ಪೌಂಡ್‌ ಸ್ಟರ್ಲಿಂಗ್‌ಗಿದ್ದ ಜಾಗತಿಕ ಮೌಲ್ಯವನ್ನು ಜಾಗರೂಕ­ವಾಗಿ ಅಮೆರಿಕ ತನ್ನ ಡಾಲರ್‌ ಮುಡಿಗೇರಿಸಿತು. ಮೊದಲ ಹಾಗೂ 2ನೇ ವಿಶ್ವಯುದ್ಧದ ಪ್ರಭಾವದಿಂದ ಬ್ರಿಟಿಷ್‌ ಕರೆನ್ಸಿಗಿದ್ದ ಮೌಲ್ಯ ಅಮೆರಿಕನ್‌ ಡಾಲರ್‌ ಕಡೆಗೆ ವಾಲಿತ್ತು. ಅದಾದ ಬಳಿಕ ಡಾಲರ್‌ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಸಾರ್ವಭೌಮನಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ರಾಷ್ಟ್ರಗಳು ಡಾಲರ್‌ ವಿರೋಧಿಸಿದರೂ, ಡಾಲರ್‌ ಪಾರಮ್ಯ ಹಾಗೆಯೇ ಇದೆ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ, ವಿದೇಶಿ ವಿನಿಮಯ ಮೀಸಲಿನಲ್ಲಿ ಡಾಲರ್‌ ವರ್ಷದಿಂದ ವರ್ಷಕ್ಕೆ ಶೇಕಡಾ ವಾರು ಕುಸಿತ ಕಾಣುತ್ತಿರುವುದು. ಈ ಅಂದಾಜಿನ ಪ್ರಕಾರ ಸದ್ಯಕ್ಕೆ ಡಾಲರ್‌ ತನ್ನ ಸ್ಥಾನ ಉಳಿಸಿಕೊಂಡರೂ ಮುಂದಿನ ದಿನಗಳಲ್ಲಿ ತನ್ನ ಸ್ಥಾನವನ್ನು ಮತ್ತೂಂದು ಕರೆನ್ಸಿಗೆ ಬಿಟ್ಟುಕೊಡಲೇ ಬೇಕಿದೆ.

ಬ್ರಿಕ್ಸ್‌ನಲ್ಲಿ ಯುಪಿಐ ಪ್ರಸ್ತಾವ‌
2024ರ ಬ್ರಿಕ್ಸ್‌ ಶೃಂಗದಲ್ಲಿ ಭಾರತದ ಡಿಜಿಟಲ್‌ ಪಾವತಿ ಯುಪಿಐ ಪಡೆದ ಯಶಸ್ಸಿನ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾವಿಸಿ¨ªಾರೆ. ಇತ್ತೀಚೆಗಷ್ಟೇ ಬ್ರಿಕ್ಸ್‌ ಸದಸ್ಯನಾದ ಯುಎಇನಲ್ಲಿ ಯುಪಿಐ ಪಾವತಿಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ 7 ರಾಷ್ಟ್ರಗಳು ಭಾರತದ ಯುಪಿಐ ಅನ್ನು ತಮ್ಮ ರಾಷ್ಟ್ರಗಳಲ್ಲಿ ಪರಿಚಯಿಸಿದ್ದು, ಇನ್ನೂ 30ಕ್ಕೂ ಹೆಚ್ಚು ರಾಷ್ಟ್ರಗಳು ಯುಪಿಐ ಬಳಕೆ ಬಗ್ಗೆ ಆಸಕ್ತಿ ತೋರಿವೆ. ಇದರೊಂದಿಗೆ ಕರೆನ್ಸಿ ಜತೆಗೆ ಡಿಜಿಟಲ್‌ ಪಾವತಿ ಕ್ಷೇತ್ರದ ಸುಧಾರಣೆ ಬಗ್ಗೆಯೂ ಬ್ರಿಕ್ಸ್‌ನಲ್ಲಿ ಪ್ರಸ್ತಾವವಾಗಿದೆ. ಯುಪಿಐ ಬಳಕೆ ಮಾಡಿ ಸ್ಥಳೀಯ ಕರೆನ್ಸಿಯಲ್ಲಿ ವ್ಯವಹಾರ ನಡೆಸುವುದು ಇದರ ಮುಂದಿನ ಉದ್ದೇಶವಾಗಿದೆ.

200 ದೇಶಗಳಲ್ಲಿ ವಿನಿಮಯಕ್ಕೆ ಡಾಲರ್‌ ಬಳಕೆ
ರಷ್ಯಾ ಜತೆಗೆ ಚೀನ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ ಸೇರಿ ಹಲವಾರು ರಾಷ್ಟ್ರಗಳು ಡಾಲರ್‌ ಬದಲು ಸ್ಥಳೀಯ ಕರೆನ್ಸಿ ಮೂಲಕ ವ್ಯವಹರಿಸಲು ಪ್ರಯತ್ನಿಸುತ್ತಿವೆ. ಆದರೆ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ. ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡಾಲರ್‌ ಮೂಲಕವೇ ವಿದೇಶಿ ವಿನಿಮಯ ನಡೆಯುತ್ತಿರುವ ಕಾರಣ ಅದರಿಂದ ಹೊರಬರುವುದು ಈ ರಾಷ್ಟ್ರಗಳಿಗೆ ಸುಲಭದ ಮಾತಲ್ಲ. ಅಷ್ಟಾಗಿಯೂ ಚೀನ ಹಾಗೂ ರಷ್ಯಾ ಈ ಪ್ರಯತ್ನದಲ್ಲಿ ಕೊಂಚ ಮುಂದಿವೆ. ಎಲ್ಲ ಪ್ರಯತ್ನಗಳ ನಡುವೆಯೂ ಡಾಲರ್‌ ಬಳಕೆಯನ್ನು ಕೊಂಚ ಕ್ಷೀಣಗೊಳಿಸಲು ಯಶಸ್ವಿಯಾಗಿ­ವೆಯೇ ಹೊರತು ಸಂಪೂರ್ಣ ಡಿ-­ಡಾಲರೈಸೇಶನ್‌ ಪ್ರಯತ್ನ ಇನ್ನೂ ದೂರದ ಮಾತೇ ಆಗಿದೆ. ಏಕೆಂದರೆ ಡಾಲರ್‌ ಅಮೆರಿಕಕ್ಕೆ ಕೇವಲ ಚಲಾವ ಣೆಯ ವಸ್ತುವಾಗಿ ಮಾತ್ರ ಉಳಿದುಕೊಂಡಿಲ್ಲ. ಇತರ ದೇಶಗಳ ಮೇಲೆ ಶಸ್ತ್ರವಾಗಿ ಅಮೆರಿಕ ಅದನ್ನು ಬಳಕೆ ಮಾಡುತ್ತಿದೆ. ಹೀಗಾಗಿ ಅಮೆರಿಕವನ್ನು ಎದುರು ಹಾಕಿಕೊಳ್ಳಲು ಇತರ ದೇಶಗಳು ಇಷ್ಟಪಡದ ಕಾರಣ ಡಿ-­ಡಾಲರೈಸೇಶನ್‌ ಕನಸಾಗಿ ಉಳಿದಿದೆ.

ಭಾರತಕ್ಕೆ ಚೀನ ಸವಾಲಾಗಬಹುದು
-ಡಿ-ಡಾಲರೈಸೇಶನ್‌ನಿಂದ ಚೀನದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚಳ
-ಜಾಗತಿಕವಾಗಿ 4ನೇ ಅಗ್ರ ಕರೆನ್ಸಿ ಸ್ಥಾನ ಪಡೆದಿರುವ ಚೀನ
-ಚೀನದ ಆರ್ಥಿಕ ಬೆಳವಣಿಗೆ ಭಾರತಕ್ಕೆ ವ್ಯತಿರಿಕ್ತ ಪರಿಣಾಮ
-ಚೀನ ಕರೆನ್ಸಿ ವ್ಯಾಪಕವಾದಷ್ಟೂ ಚೀನಕ್ಕೆ ಬೇರೆ ದೇಶದ ಬೆಂಬಲ ಹೆಚ್ಚು

ಪಾಶ್ಚಾತ್ಯ ಹಣಕಾಸು ವ್ಯವಸ್ಥೆ ಸ್ವಿಫ್ಟ್
ಪ್ರಸ್ತುತ ಜಾಗತಿಕವಾಗಿ ಪಾಶ್ಚಾತ್ಯ ಹಣಕಾಸು ವ್ಯವಸ್ಥೆ ಯಾದ “ಸ್ವಿಫ್ಟ್’ ಬಳಕೆಯಲ್ಲಿದೆ. ಯಾವುದೇ ವ್ಯಕ್ತಿ ವಿದೇ ಶಕ್ಕೆ ಹಣ ಕಳುಹಿಸಬೇಕು ಎಂದಾಗ ಈ ವಿಧಾನವನ್ನು ಬಳಸಲಾಗುತ್ತದೆ. ವಾಸ್ತವದಲ್ಲಿ ಇದು ನೇರ ಹಣ ವರ್ಗಾವಣೆಯಲ್ಲದೇ ಸಂದೇಶ ರವಾನೆಯ ಮೂಲಕ ನಡೆಯುವ ವ್ಯವಹಾರವಾಗಿದೆ. ಇಲ್ಲಿನ ಒಂದು ಬ್ಯಾಂಕ್‌ನಿಂದ ವಿದೇಶದಲ್ಲಿರುವವರ ಖಾತೆಗೆ ಹಣ ನೀಡಬೇಕೆಂದರೆ ಅಲ್ಲಿನ ಬ್ಯಾಂಕ್‌ಗೆ ನೀಡಲಾಗಿರುವ ಸ್ವಿಫ್ಟ್ ಕೋಡ್‌, ಅಂತಾರಾಷ್ಟ್ರೀಯ ಖಾತೆ ಸಂಖ್ಯೆ ಮತ್ತಿತರ ವಿವರವನ್ನು ಬ್ಯಾಂಕ್‌ಗೆ ನೀಡಿದಾಗ ಇಲ್ಲಿನ ಬ್ಯಾಂಕ್‌ನಿಂದ ವಿದೇಶದಲ್ಲಿರುವ ಬ್ಯಾಂಕ್‌ಗೆ ಸಂದೇಶ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಇಂತಿಷ್ಟು ದರದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯಿಂದ ಹೊರತಾಗಿ ಯಾವುದೇ ವಿದೇಶಿ ಹಣಕಾಸು ವಿನಿಮಯ ನಡೆಸುವುದು ಅಸಾಧ್ಯವಾಗಿದೆ. ಪ್ರಸ್ತುತ ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳ 11 ಸಾವಿರಕ್ಕೂ ಹೆಚ್ಚು ಬ್ಯಾಂಕ್‌ಗಳು ಈ ಸ್ವಿಫ್ಟ್ ವ್ಯವಸ್ಥೆ ಬಳಸುತ್ತಿವೆ. ಬೆಲ್ಜಿಯಮ್‌ನಲ್ಲಿರುವ ಸ್ವಿಫ್ಟ್ ಗೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವ ಹೆಚ್ಚಿನ ಮಟ್ಟಿಗಿದೆ. ಸ್ವಿಫ್ಟ್ ವ್ಯವಸ್ಥೆಯಿಂದ ಹೊರಬಂದ ಯಾವುದೇ ಬ್ಯಾಂಕ್‌, ಬೇರೊಂದು ರಾಷ್ಟ್ರದ ಯಾವುದೇ ಬ್ಯಾಂಕ್‌ನಿಂದ ಯಾವುದೇ ರೀತಿಯ ವ್ಯವಹಾರ ನಡೆಸುವುದು, ಹಣ ಪಡೆಯುವುದು ಆಥವಾ ನೀಡಲು ಅಸಾಧ್ಯವಾಗುತ್ತದೆ. 1973ರಲ್ಲಿ ಅಮೆರಿಕ ಹಾಗೂ ಯುರೋಪಿನ ಬ್ಯಾಂಕ್‌ಗಳು ಒಗ್ಗೂಡಿ ಈ ವ್ಯವಸ್ಥೆಯನ್ನು ಜಾರಿ ಮಾಡಿದವು.

-ತೇಜಸ್ವಿನಿ ಸಿ.ಶಾಸ್ತ್ರಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.