BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?

Team Udayavani, Oct 28, 2024, 4:32 PM IST

BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ದ ವೀಕೆಂಡ್‌ ಸಂಚಿಕೆಯಲ್ಲಿ ಕಳೆದ ವಾರ ಕಿಚ್ಚ ಸುದೀಪ್‌ ಕಾಣಿಸಿಕೊಂಡಿಲ್ಲ. ಅವರ ತಾಯಿಯ ನಿಧನದಿಂದ ದುಃಖದಲ್ಲಿರುವ ಕಿಚ್ಚ ಸುದೀಪ್‌ (Kiccha Sudeep) ಬಿಗ್‌ ಬಾಸ್‌ ಶೂಟಿಂಗ್‌ನಲ್ಲಿ ಭಾಗಿಯಾಗಿಲ್ಲ.

ಕಿಚ್ಚನ ಅನುಪಸ್ಥಿತಿಯಲ್ಲಿ ಕಳೆದ ವಾರ ಯೋಗರಾಜ್‌ ಹಾಗೂ ಸೃಜನ್‌ ಲೋಕೇಶ್‌ ಬಿಗ್‌ ಬಾಸ್‌ ಶೋ ನಡೆಸಿಕೊಟ್ಟಿದ್ದರು.

ಬಿಗ್‌ ಬಾಸ್‌ ಸೀಸನ್‌ -11 ನನ್ನ ಕೊನೆಯ ಸೀಸನ್‌ ಎಂದು ಕಿಚ್ಚ ಸುದೀಪ್‌ ಅವರು ಘೋಷಿಸಿದ್ದಾರೆ. ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಶೋ ನಡೆಸಿಕೊಟ್ಟಿರುವ ಸುದೀಪ್‌ ಎಷ್ಟೇ ಕೆಲಸದ ಸವಾಲುಗಳು ಬಂದರೂ ಅನ್‌ ಟೈಮ್‌ನಲ್ಲಿ ಬಿಗ್‌ ಬಾಸ್‌ ವೀಕೆಂಡ್‌ ನಡೆಸಿಕೊಟ್ಟಿದ್ದಾರೆ.

ಇದನ್ನೂ ಓದಿ: BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

ತಾಯಿ ಐಸಿಯೂನಲ್ಲಿದ್ದರೂ, ಅವರ ನಿಧನದ ಸುದ್ದಿ ತಮಗೆ ಬಂದು ತಲುಪಿದರೂ ಕಿಚ್ಚ ಸುದೀಪ್‌ ಅವರು ಅರ್ಧದಲ್ಲಿ ಕಾರ್ಯಕ್ರಮವನ್ನು ನಿಲ್ಲಿಸದೆ ಸಂಪೂರ್ಣ ಶೂಟ್‌ ಮುಗಿಸಿ ಆಸ್ಪತ್ರೆಗೆ ಹೋಗಿದ್ದರು.

ಹಾಗಾಗಿ ಅವರು ಕಳೆದ ವಾರ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಟ್ಟಿಲ್ಲ. ಇದು ಬಿಟ್ಟರೆ ಸುದೀಪ್‌ ಅವರು ಹಿಂದೆ ಯಾವೆಲ್ಲ ಸಂದರ್ಭದಲ್ಲಿ ಬಿಗ್‌ ಬಾಸ್‌ ವೀಕೆಂಡ್‌ ಮಿಸ್ ಮಾಡಿಕೊಂಡಿದ್ದರು‌ ಮತ್ತು ಅದಕ್ಕೆ ಕಾರಣಗಳೇನು ಎನ್ನುವುದರ ಬಗೆಗಿನ ಒಂದು ವರದಿ ಇಲ್ಲಿದೆ.

ಸೀಸನ್‌ -10ರ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ತುಂಬಾ ಬ್ಯುಸಿ ಶೆಡ್ಯೂಲ್‌ನಲ್ಲಿದ್ದರು. ʼಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಗಾಗಿ ಅವರು ಚೆನ್ನೈಗೆ ಹೋಗಿ ಬರಬೇಕಿತ್ತು. ಇಷ್ಟೆಲ್ಲ ಆದರೂ ಸುದೀಪ್‌ ಬಿಗ್‌ಬಾಸ್‌ ವೀಕೆಂಡ್‌ ನಡೆಸಿಕೊಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಚೆನ್ನೈ- ಬೆಂಗಳೂರು ವಿಮಾನವೇರಿ ಬಿಗ್‌ ಬಾಸ್‌ ಸೆಟ್‌ಗೆ ಬಂದು ಅಲ್ಲಿ ಶೋ ನಡೆಸಿ ಮತ್ತೆ ಶೂಟಿಂಗ್‌ ಚೆನ್ನೈ ಹೋಗುತ್ತಿದ್ದರು.

ವೀಕೆಂಡ್‌ ಪಂಚಾಯ್ತಿ ತಪ್ಪಿಸಿಕೊಂಡದ್ದು ಯಾವಾಗ?: ಕಳೆದ 10 ಸೀಸನ್‌ನಲ್ಲಿ ಬಿಗ್‌ ಬಾಸ್‌ ವೀಕೆಂಡ್‌ ಪಂಚಾಯ್ತಿಯನ್ನು ಕಿಚ್ಚ ತಪ್ಪಿಸಿಕೊಂಡಿರುವುದು ಒಂದೆರೆಡು ಬಾರಿ ಮಾತ್ರ. ಎರಡು ವರ್ಷಗಳ ಹಿಂದೆ ಸುದೀಪ್‌ ಅವರಿಗೆ ಏಕಾಏಕಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರು ವಿಶ್ರಾಂತಿಯ ಅಗತ್ಯವಿದೆ ಎಂದಾಗ ಆ ಸಮಯದಲ್ಲಿ ಸುದೀಪ್‌ ಬಿಗ್‌ ಬಾಸ್‌ ಶೋ ನಡೆಸಿಕೊಳ್ಳಲು ಆಗಿರಲಿಲ್ಲ.

ಇನ್ನು ಮುಖ್ಯವಾಗಿ  ಸೀಸನ್‌ -6 ಸಮಯದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ನಿಧನರಾಗಿದ್ದರು. ಈ ಸಮಯದಲ್ಲಿ ಕಿಚ್ಚ ಬಿಗ್‌ ಬಾಸ್‌ ಸೆಟ್ ನಲ್ಲಿದ್ದರು. ಆದರೆ ಈ ಸುದ್ದಿಯನ್ನು ಕೇಳಿದ ಅವರು ಆಘಾತಕ್ಕೆ ಒಳಗಾಗಿ ಕ್ಯಾಮರಾ ಮುಂದೆ ಬಂದಿರಲಿಲ್ಲ. ಅಂದು ಅವರು ವೀಕೆಂಡ್‌ ನಡೆಸಿಕೊಟ್ಟಿರಲಿಲ್ಲ.

ಈ ಮೂರು ಸನ್ನಿವೇಶಗಳನ್ನು ಹೊರತುಪಡಿಸಿದರೆ ಕಿಚ್ಚ ಬಿಗ್‌ ಬಾಸ್‌ ವೀಕೆಂಡ್‌ ಕಾರ್ಯಕ್ರಮವನ್ನು ಎಂದೂ ಮಿಸ್‌ ಮಾಡಿಕೊಂಡಿಲ್ಲ ಎಂದು ʼಫಿಲ್ಮಿ ಬೀಟ್‌ ಕನ್ನಡʼ ವರದಿ ತಿಳಿಸಿದೆ.

ಟಾಪ್ ನ್ಯೂಸ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.