Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್


Team Udayavani, Oct 28, 2024, 6:15 PM IST

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಕಾರ್ಕಳ: ಕೆಲ ದಿನಗಳ ಹಿಂದೆ ನಡೆದ ಕಾರ್ಕಳ ತಾಲೂಕಿನ ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಅರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೋಮವಾರ (ಅ.28) ವಿಚಾರಣೆ ನಡೆಸಿದ ಕಾರ್ಕಳ ತಾಲೂಕು ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ದಿಲೀಪ್‌ ಹೆಗ್ಡೆಗೆ ನ. 7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಆರಂಭದಲ್ಲಿ ದಿಲೀಪ್‌ ಹೆಗ್ಡೆಯನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿತ್ತು. ಪ್ರತಿಮಾ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿದ್ದಾಳೆ.

ಅಜೆಕಾರಿನ ಬಾಲಕೃಷ್ಣ ಪೂಜಾರಿ ಅವರನ್ನು ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿದ್ದರು. ಪತಿಯ ಆಹಾರಕ್ಕೆ ನಿಯಮಿತವಾಗಿ ವಿಷ ಪದಾರ್ಥವೊಂದನ್ನು ಸೇರಿಸಿ ಪತ್ನಿ ಪ್ರತಿಮಾ ನೀಡುತ್ತಿದ್ದಳು. ಬಳಿಕ ಕಳೆದ ಅ.20ರಂದು ಇಬ್ಬರು ಸೇರಿ ಮಲಗಿದ್ದ ಬಾಲಕೃಷ್ಣ ಅವರ ಮುಖಕ್ಕೆ ಒತ್ತಿ ಹಿಡಿದು ಹತ್ಯೆ ಮಾಡಿದ್ದರು.

ಚೌತಿಯ ದಿನದಂದೇ ವಿಷ ಪ್ರಾಶನ

ಹಬ್ಬ ಎಂದರೆ ಜತೆಗೂಡಿ ಪಾಯಸದ ಊಟ ಮಾಡುವುದು ಕ್ರಮ. ಆದರೆ ಇಲ್ಲಿ ಪತ್ನಿಯೇ ತಾಳಿ ಕಟ್ಟಿದ ಪತಿಗೆ ವಿಷ ನೀಡಿರುವುದು ವಿಪರ್ಯಾಸವೇ ಸರಿ. ಪತಿ ಬಾಲಕೃಷ್ಣ ಅವರನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಹೆಣೆದಿದ್ದ ಪ್ರತಿಮಾ ಚೌತಿಯ ದಿನ ಹಬ್ಬದ ಊಟದಲ್ಲಿ ಪತಿಗೆ ಮೊದಲು ವಿಷ ಬೆರೆಸಿ ಕೊಟ್ಟಿದ್ದಳು. ಆ ದಿನ ಅವರು ವಾಂತಿ ಮಾಡಿದ್ದು ಅನಂತರ ಸ್ವಲ್ಪ ಸ್ವಲ್ಪವೇ ವಿಷ ನೀಡಿದ್ದರಿಂದ ಅವರ ಆರೋಗ್ಯ ಬಿಗಡಾಯಿಸುತ್ತ ಸಾಗಿತ್ತು. ಅದರ ನಡುವೆ ಜ್ವರ ಕೂಡ ಬಂದಿತ್ತು.

ಟಾಪ್ ನ್ಯೂಸ್

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

Beluru

Sagara: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವೇ ಪರಿಹಾರ: ಶಾಸಕ ಬೇಳೂರು

4

Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ

ISREL

Israel ದಾಳಿ ಇನ್ನಷ್ಟು ತೀವ್ರ; 43 ಸಾವಿರಕ್ಕೂ ಹೆಚ್ಚು ಬ*ಲಿ: ವಿಶ್ವಸಂಸ್ಥೆ ತೀವ್ರ ಕಳವಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

accident2

Padubidri: ಶಾಲಾ ಆವರಣದೊಳಗೆ ರಿಕ್ಷಾ ಢಿಕ್ಕಿ; ಬಾಲಕನಿಗೆ ತೀವ್ರ ಗಾಯ

Udupi: ವಿವಿಧ ಬೇಡಿಕೆ ಈಡೇರಿಸುವಂತೆ ಅಂಗವಿಕಲರಿಂದ ಪ್ರತಿಭಟನೆ

Udupi: ವಿವಿಧ ಬೇಡಿಕೆ ಈಡೇರಿಸುವಂತೆ ಅಂಗವಿಕಲರಿಂದ ಪ್ರತಿಭಟನೆ

4(1)

Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ

Kaup LaxmiJanardhana Temple: Manohar Shetty elected as Management Committee Chairman

Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

4

Belthangady: ಮನೆಯಿಂದ ನಗದು, ಚಿನ್ನಾಭರಣ ಕಳವು

3

Mangaluru: ಅಪಘಾತದ ಬಳಿಕ ಕಾರು ಚಾಲಕನಿಗೆ ಲೋಹದ ಪಂಚ್‌ ನಿಂದ ಹಲ್ಲೆ, ಪೆಪ್ಪರ್‌ ಸ್ಪ್ರೇ!

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.