Mangaluru: ಪಿಜಿಯಿಂದ ವಿದ್ಯಾರ್ಥಿನಿಯರ ಮೊಬೈಲ್, ಪರ್ಸ್ ಕಳವು
Team Udayavani, Oct 28, 2024, 10:10 PM IST
![kalla](https://www.udayavani.com/wp-content/uploads/2024/10/kalla-6-620x413.jpg)
![kalla](https://www.udayavani.com/wp-content/uploads/2024/10/kalla-6-620x413.jpg)
ಮಂಗಳೂರು: ನಗರದ ಕೊಡಿಯಾಲಬೈಲ್‌ನ ಪಿ.ಜಿಯೊಂದರಲ್ಲಿ ವಾಸವಿರುವ ಇಬ್ಬರು ವಿದ್ಯಾರ್ಥಿನಿಯರ ಮೊಬೈಲ್ ಮತ್ತು ಪರ್ಸ್‌ನ್ನು ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ರಾತ್ರಿ ಸುಮಾರು 8.30ಕ್ಕೆ ಮಲಗಿದವರು ಮರುದಿನ ಬೆಳಗ್ಗೆ 5.30ಕ್ಕೆ ಎದ್ದು ನೋಡುವಾಗ ಮೊಬೈಲ್ ಮತ್ತು ಪರ್ಸ್ ಇರಲಿಲ್ಲ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 16,000 ರೂ.ಗಳು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.