BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?
"ನೀವು ಯಾರು ನನಗೆ ಮನೆಯಿಂದ ಯಾವಾಗ ಹೋಗಬೇಕು ಅಂಥ ಹೇಳೋಕೆ"
Team Udayavani, Oct 28, 2024, 11:09 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಿಂದ ನಾಲ್ಕನೇ ವಾರ ಮಹಿಳಾ ಸ್ಪರ್ಧಿಯೊಬ್ಬರು ಹೊರಬಂದಿದ್ದಾರೆ. ಮೋಕ್ಷಿತಾ, ಹಂಸ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಎಲಿಮಿನೇಟ್ ಪ್ರಕ್ರಿಯೆ ನಡೆದಿದ್ದು, ಹಂಸ ಅವರು ಮನೆಯಿಂದ ಹೊರಬಂದಿದ್ದಾರೆ. ಮೋಕ್ಷಿತಾ ತಿವಿಕ್ರಮ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ತ್ರಿವಿಕ್ರಮ್ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತ್ರಿವಿಕ್ರಮ್ ಮೈಂಡ್ ಗೇಮ್ ಆರೋಪ; ಮೋಕ್ಷಿತಾ ಗರಂ:
ಇನ್ಮೇಲೆಯಿಂದ ಆಟ ಶುರುವಾಗುತ್ತದೆ. ಅಸಲಿ ಆಟ ಇವತ್ತಿನಿಂದ ಶುರುವಾಗುತ್ತದೆ. ನನ್ನನ್ನು ಆಚೆ ಆಗಬೇಕಂಥ ಇಲ್ಲಿ ಪ್ಲ್ಯಾನಿಂಗ್ ನಡೆಯುತ್ತಿದೆ. ನೀವು 10 ವಾರ ಇರುತ್ತೀರಾ ಅಂಥ ಕಾನ್ಫಿಡೆನ್ಸ್ ಇದೆಯಾ? ನೀವು ಯಾರು ನನಗೆ ಮನೆಯಿಂದ ಯಾವಾಗ ಹೋಗಬೇಕು ಅಂಥ ಹೇಳೋಕೆ. ನಿಮ್ಮ ಮೈಂಡ್ ಗೇಮ್ ನನ್ನ ಹತ್ರ ಬೇಡ. ನೀವು ಗೋಮುಖ ವ್ಯಾಘ್ರ ತರ ಆಡುತ್ತಿದ್ದೀರಿ.
ನಾನು 10 ವಾರಕ್ಕೆ ಆಚೆ ಬರುತ್ತೇನೆ ಅಂಥ ಡಿಸೈಡ್ ನೀವ್ಯಾರು? ನೀವು ಸ್ಪರ್ಧಿಗಳ ಲಿಸ್ಟ್ ನೋಡ್ಕೊಂಡು ಇಲ್ಲಿಗೆ ಬಂದಿದ್ದೀರಿ. ನೀವು ಯಾರನ್ನು ನಾಮಿನೇಟ್ ಮಾಡ್ಬೇಕು ಅಂಥ ಪ್ಲ್ಯಾನ್ ಮಾಡುತ್ತೀರಿ. ನಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡ್ಕೊಂಡು ಬಂದಿದ್ದಾರೆ ಎಂದು ತಿವಿಕ್ರಮ್ ಅವರ ಮೇಲೆ ಗರಂ ಆಗಿದ್ದಾರೆ. ನಾನು ಹಾಗೆ ಹೇಳೇ ಇಲ್ಲ. ದೇವರ ಮೇಲೆ ಆಣೆ ಹಾಕುವ ಬನ್ನಿ ಎಂದು ಮಂಜು ಅವರ ಬಳಿ ತಿವಿಕ್ರಮ್ ಅವರು ಹೇಳಿದ್ದಾರೆ. ನಾನು ‘ಗಲೀಜು’ ಅನ್ನುವ ಶಬ್ದವನ್ನು ಬಳಸಿಲ್ಲ. ಯಾವತ್ತೂ ನಾಮಿನೇಟ್ ಆದವರ ಬಗ್ಗೆ ಮಾತನಾಡಿಲ್ಲ. ಸ್ಪರ್ಧಿಗಳ ಲಿಸ್ಟ್ ನಾನು ನೋಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬಂದದ್ದನ್ನು ಮಾತ್ತ ನೋಡಿದ್ದೆ ಎಂದು ಶಿಶಿರ್ ಅವರ ತಿವಿಕ್ರಮ್ ಹೇಳಿಕೊಂಡಿದ್ದಾರೆ.
ಕಣ್ಣೀರಿಟ್ಟ ಸ್ಪರ್ಧಿಗಳು.!
ಭಾವನೆಗಳನ್ನು ನಿರೂಪಿಸುವ ಟಾಸ್ಕ್ ವೊಂದನ್ನು ಬಿಗ್ ಬಾಸ್ ನೀಡಿದ್ದಾರೆ. ಸ್ಪರ್ಧಿಗಳು ಹಾಸ್ಯ, ಭಾವನಾತ್ಮಕ.. ಹೀಗೆ ನಾನಾ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ಜೀವನದ ಬಗೆಗಿನ ಕರಾಳ ದಿನಗಳನ್ನು ನೆನೆದಿದ್ದಾರೆ. ಶಿಶಿರ್ ಅವರು ವೃತ್ತಿ ಜೀವನದಲ್ಲಿ ಖ್ಯಾತ ಸಿನಿಮಾ ನಿರ್ಮಾಪಕರೊಬ್ಬರಿಂದ ಆದ ಅವಮಾನದ ದಿನಗಳನ್ನು ನೆನೆದಿದ್ದಾರೆ. ನನಗೆ ನಾಟಕ ಮಾಡ್ಕೊಂಡು, ಫೇಕದ ಆಗಿ ಇರೋಕೆ ಬರಲ್ಲ. ಕೆಲವೊಂದನ್ನು ಕ್ಷಮಿಸುತ್ತೇನೆ ಮರೆಯೋಕೆ ಆಗಲ್ಲ ಎಂದು ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಕೆಲ ಘಟನೆಗಳನ್ನು ಸ್ಮರಿಸಿದ್ದಾರೆ.
ಸದಸ್ಯರು ಯಾರ ಬಳಿಯೂ ಹಂಚಿಕೊಳ್ಳದ ಒಂದು ಘಟನೆಯನ್ನು ಹೇಳಿಕೊಳ್ಳಬಹುದು ಎಂದು ಬಿಗ್ ಬಾಸ್ ಕನ್ಪೆಷನ್ ರೂಮ್ ಗೆ ಸ್ಪರ್ಧಿಗಳನ್ನು ಕರೆದು ಕೇಳಿದ್ದಾರೆ. 2020 ರಲ್ಲಿ ನನ್ನ ತಾಯಿಯನ್ನು ನಾನು ಕಳೆದುಕೊಂಡೆ. 2018 ರಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ. ಅವರಿಗೆ ಕೋವಿಡ್ ಇರಲಿಲ್ಲ. ಬಹು ಅಂಗಾಂಂಗ ವೈಫಲ್ಯ ಇತ್ತು. ನನ್ನ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದರು ನಮ್ಮ ಸಂಬಂಧಿಕರು ಅಮ್ಮನ ತಲೆ ತುಂಬುತ್ತಿದ್ದರು. ಆ ವೇಳೆ ನಾನು ತುಂಬಾ ಅಮ್ಮನ ಮೇಲೆ ಕಿರುಚಾಡಿದ್ದೆ. ಅವರನ್ನು ಮಾತನಾಡಿಸಿ ಕೆಲವು ದಿನಗಳ ಆದ್ಮೇಲೆ ಇನ್ನು ಅವರು ನನ್ನ ಜತೆ ಇರಲ್ಲ. ಇದೊಂದು ತಪ್ಪು ಮಾಡಬಾರದಿತ್ತು” ಎಂದು ಐಶ್ವರ್ಯಾ ಕಣ್ಣೀರಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.