Kasaragodu: ಅನಂತಪುರದಲ್ಲಿ ವಂದೇ ಭಾರತ್ ರೈಲಿನ ಬಿಡಿ ಭಾಗಗಳ ನಿರ್ಮಾಣ
ಪ್ರಸ್ತುತ ಕೈಗಾರಿಕೆ ಕಂಪೆನಿ, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಿ
Team Udayavani, Oct 29, 2024, 7:30 AM IST
ಕಾಸರಗೋಡು: ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಬಿಡಿ ಭಾಗಗಳನ್ನು ಕಾಸರಗೋಡಿನ ಅನಂತಪುರದಲ್ಲಿ ತಯಾರಿಸಲಾಗುವುದು. ರೈಲಿನ ಅಡಿಪಾಯ, ಶೌಚಾಲಯದ ಬಾಗಿಲು ಮತ್ತು ಬರ್ತ್ಗಳನ್ನು ಕುಂಬಳೆ ಸಮೀಪದ ಅನಂತಪುರದಲ್ಲಿರುವ ಕೈಗಾರಿಕಾ ಉದ್ಯಾನದಲ್ಲಿ ತಯಾರಿಸಲಾಗುವುದು.
ಪಂಜಾಬ್ನ ಖನ್ನವನ್ನು ಪ್ರಧಾನ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಖ್ಯಾತ ಉದ್ದಿಮೆ ಸಂಸ್ಥೆಯಾದ ಮ್ಯಾಗ್ನಾಸ್ ಫ್ಲೈವುಡ್ ಕಂಪೆನಿ ಇದಕ್ಕಾಗಿ ಅನಂತಪುರದಲ್ಲಿ ತನ್ನ ಹೊಸ ಘಟಕವನ್ನು ಸ್ಥಾಪಿಸಿ ಅಲ್ಲಿ ವಂದೇ ಭಾರತ್ಗೆ ಅಗತ್ಯದ ಬಿಡಿ ಭಾಗಗಳನ್ನು ನಿರ್ಮಿಸಲಿದ್ದು, ಈ ಘಟಕ ಆರಂಭಿಸುವ ಒಡಂಬಡಿಕೆಗೆ ಪ್ರಸ್ತುತ ಕೈಗಾರಿಕೆ ಕಂಪೆನಿ ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರ ಸಹಿ ಹಾಕಿದೆ. ಅನಂತಪುರದಲ್ಲಿ ತಯಾರಿಸುವ ಸಾಮಗ್ರಿಗಳನ್ನು ಬಳಿಕ ಚೆನ್ನೈಯ ರೈಲು ಬೋಗಿ ನಿರ್ಮಾಣ ಕಾರ್ಖಾನೆಗೆ ಸಾಗಿಸಲಾಗುವುದು ಎಂದು ಮ್ಯಾಗ್ನಾಸ್ ಪ್ಲೈವುಡ್ಸ್ ಸಂಸ್ಥೆಯ ಮಾಲಕ ಮಹೇಶ್ ಗುಪ್ತ ತಿಳಿಸಿದ್ದಾರೆ.
ನೂರಾರು ಮಂದಿಗೆ ಉದ್ಯೋಗ ನಿರೀಕ್ಷೆ
ಅನಂತಪುರ ಕೈಗಾರಿಕೆ ಪ್ರದೇಶದಲ್ಲಿ ರೈಲಿನ ಬಿಡಿ ಭಾಗ ನಿರ್ಮಿಸುವ ಕಾರ್ಖಾನೆ ನಿರ್ಮಾಣಕ್ಕೆ 100 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚ ನಿರೀಕ್ಷಿಸಲಾಗಿದ್ದು, ನೂರಾರು ಮಂದಿಗೆ ಉದ್ಯೋಗ ಲಭಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.