Udupi: ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರ ಸ್ನೇಹಿಯಾಗಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ಯಾಂಕ್‌ಗಳು ನಿಯಮಗಳ ಬೆನ್ನು ಹತ್ತಿ ಜನರಿಗೆ ಸುಲಭದಲ್ಲಿ ಸಾಲ ಸಿಗುವುದೇ ಕಷ್ಟ, ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನೆ ಸಭೆ

Team Udayavani, Oct 29, 2024, 1:26 AM IST

Kota-poojary

ಮಣಿಪಾಲ: ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡ ಜನರ ನೆಚ್ಚಿನ ಬ್ಯಾಂಕ್‌ ಆಗಿದ್ದವು. ಪ್ರಸ್ತುತ ಆ ಸ್ಥಾನವನ್ನು ಸಹಕಾರಿ ಸಂಘಗಳು ವಹಿಸಿಕೊಂಡಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಪುನರಪಿ ಬಡವರ ಬ್ಯಾಂಕ್‌ ಆಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರಗಿದ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳು ನಿಯಮಗಳ ಬೆನ್ನು ಹತ್ತಿ ಜನರಿಗೆ ಸುಲಭದಲ್ಲಿ ಸಾಲ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಪಿಎಂ ವಿಶ್ವಕರ್ಮ ಯೋಜನೆ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಮತ್ತೆ ಬಡ ಜನರ ಸ್ನೇಹಿ ಬ್ಯಾಂಕನ್ನಾಗಿ ಮಾಡುವ ಉದ್ದೇಶ ಹೊಂದಿದೆ ಎಂದರು. ಜಿಲ್ಲೆಯಲ್ಲಿ ಎಷ್ಟು ಜನ ವಿಶ್ವಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ, ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಮತ್ತು ಎಷ್ಟು ಜನರಿಗೆ ಸಾಲ ನೀಡಲು ಬಾಕಿ ಇದೆ, ಯಾವ ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಸಂಸದರು ಪಡೆದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಮಾತನಾಡಿ, 3,303 ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ 2,470 ವಿಲೇವಾರಿಗೆ ಬಾಕಿ ಇದೆ. 13 ಸಂಸ್ಥೆಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯೋಜನೆಯ ಫಲಾನುಭವಿಗಳಿಗೆ ನ.8ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಾರ್ಯಕ್ರಮ ಸಂಘಟಿಸಿ, ಸಾಲಪತ್ರ ವಿತರಿಸುವುದಕ್ಕೆ ನಿರ್ಧರಿಸಲಾಯಿತು.

ಈ ಸಂದರ್ಭ ಮುದ್ರಾ ಮತ್ತು ಸ್ವನಿಧಿ ಯೋಜನೆಯ ಫಲಾನುಭವಿಗಳಿಗೂ ಸಾಲಪತ್ರ ನೀಡಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಜಿಲ್ಲಾ ಕೈಗಾರಿಕೆ ಸಂಸ್ಥೆಯ ನಾಗರಾಜ್‌ ನಾಯಕ್‌, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶ್ರೀನಿವಾಸ ರಾವ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-eqw-ewq

Condoles; ಸುದೀಪ್‌ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಪತ್ರ

1-wokkkk

Waqf ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ: ಸಚಿವ ತ್ರಯರು

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

1-weewq

Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ

1-salima

Asian Champions Trophy Hockey; ವನಿತಾ ತಂಡಕ್ಕೆ ಸಲೀಮಾ ಟೇಟೆ ನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-2

Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…

Rajahamsa

Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

accident2

Padubidri: ಶಾಲಾ ಆವರಣದೊಳಗೆ ರಿಕ್ಷಾ ಢಿಕ್ಕಿ; ಬಾಲಕನಿಗೆ ತೀವ್ರ ಗಾಯ

accident

Kundapura: ಪ್ರತ್ಯೇಕ ಅಪಘಾತದಲ್ಲಿ ಮೂವರಿಗೆ ಗಾಯ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

1-eqw-ewq

Condoles; ಸುದೀಪ್‌ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಪತ್ರ

1-wokkkk

Waqf ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ: ಸಚಿವ ತ್ರಯರು

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

puttige-2

Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.