Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
Team Udayavani, Oct 29, 2024, 2:46 AM IST
ಉಡುಪಿ: ದೀಪಾವಳಿ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬೆಂಗಳೂರು ಉಡುಪಿ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿದೆ. ಬೆಂಗಳೂರಿನಿಂದ ಉಡುಪಿಗೆ 2 ರಾಜಹಂಸ ಹಾಗೂ 5 ಸಾರಿಗೆ ಬಸ್‌ಗಳು ಹಾಗೂ ಕುಂದಾಪುರಕ್ಕೆ 3 ರಾಜಹಂಸ, 2 ಅಶ್ವಮೇಧ ಹಾಗೂ 4 ಸಾರಿಗೆ ಬಸ್‌ಗಳು ಸಂಚರಿಸಲಿವೆ.
ಇದೇ ಬಸ್‌ಗಳು ಕುಂದಾಪುರ ಹಾಗೂ ಉಡುಪಿಯಿಂದ ಬೆಂಗಳೂರಿಗೆ ಸಂಚರಿಸಲಿವೆ. ಅಗತ್ಯ ಬಿದ್ದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.
ವಿಶೇಷ ರೈಲು
ಕುಂದಾಪುರ: ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರ ಭಾಗಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಕುಂದಾಪುರ ರೈಲು ಹಿತರಕ್ಷಣ ಸಮಿತಿ ಮತ್ತು ಉತ್ತರ ಕನ್ನಡ ರೈಲು ಸಮಿತಿಯು ಮನವಿ ಸಲ್ಲಿಸಿತ್ತು.
ಈ ರೈಲು ನ. 3ರಂದು ಅಪರಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು 12.50 ಕುಮಟ, ಅಪರಾಹ್ನ 2.40ಕ್ಕೆ ಕುಂದಾಪುರದಿಂದ ಹೊರಟು, ಮಧ್ಯಾಹ್ನ 3.30 ಉಡುಪಿ, ಪಡೀಲ್ ಬೈಪಾಸ್ ಮೂಲಕ ಬೆಂಗಳೂರನ್ನು ಸೋಮವಾರ ಬೆಳಗಿನ ಜಾವ 4ಕ್ಕೆ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.