Kasaragod: ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಅವಘಡ… 157 ಕ್ಕೂ ಹೆಚ್ಚು ಮಂದಿಗೆ ಗಾಯ


Team Udayavani, Oct 29, 2024, 8:53 AM IST

kerala

ಕಾಸರಗೋಡು: ನೀಲೇಶ್ವರ ಅಂಞೂಟಂಬಲ ಶ್ರೀ ವೀರರ್‌ ಕಾವು ದೈವಸ್ಥಾನದಲ್ಲಿ ದೈವಗಳ ಕಳಿಯಾಟ ಮಹೋತ್ಸವ ನಡೆಯುತ್ತಿದ್ದಂತೆ ಅ. 28ರಂದು ರಾತ್ರಿ ಸಂಭವಿಸಿದ ಸುಡುಮದ್ದು ದುರಂತದಲ್ಲಿ 157 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 14 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಐವರನ್ನು ವಿವಿಧ ಆಸ್ಪತ್ರೆಗಳ ವೆಂಟಿಲೇಟರ್‌ನಲ್ಲಿ ದಾಖಲಿಸಲಾಗಿದೆ.

ಗಾಯಾಳುಗಳನ್ನು ಕೊಯಿಕ್ಕೋಡ್‌ ಮೆಡಿಕಲ್‌ ಕಾಲೇಜು, ವಿಮ್ಸ್‌ ಆಸ್ಪತ್ರೆ, ಕಣ್ಣೂರು ಮಿಮ್ಸ್‌ ಆಸ್ಪತ್ರೆ, ಬೇಬಿ ಮೆಮೋರಿಯಲ್‌ ಆಸ್ಪತ್ರೆ, ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆ, ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆ, ಮಾವುಂಗಾಲ್‌ನ ಸಂಜೀವಿನಿ ಆಸ್ಪತ್ರೆ, ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮಕ್ಕಳು, ಮಹಿಳೆಯರೂ ಒಳಗೊಂಡಿದ್ದಾರೆ.

ಶಮಿಲ್‌, ಶರತ್‌, ವಿಷ್ಣು ಅವರನ್ನು ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಆಸ್ಟರ್‌ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಬಿನ್‌ ರಾಜ್‌, ಬಿಜು, ರತೀಶ್‌ ಅವರನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಭಿಜಿತ್‌, ರಾಕೇಶ್‌, ಸಂತೋಷ್‌, ವಿನೀಶ್‌, ಬಿಪಿನ್‌, ಅತೀಶ್‌, ಶ್ರೀನಾಥ್‌, ಸೌರವ್‌, ಶ್ರೀರಾಗ್‌, ಗೀತಾ, ಪ್ರಾರ್ಥನಾ, ಸುಧೀಶ್‌, ಪ್ರೀತಿ, ವಿನ್ಯ, ಅತುಲ್‌, ಟಿ.ವಿ.ಭವಿಕ, ಸೌಪರ್ಣಿಕಾ, ಪದ್ಮನಾಭನ್‌, ಅನಿತಾ ಅವರನ್ನು ಕಣ್ಣೂರಿನ ಆಸ್ಪತ್ರಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ 12 ಗಂಟೆಗೆ ದುರಂತ ಸಂಭವಿಸಿದೆ. ಶ್ರೀ ಮೂವಾಳಂಕೈ ಚಾಮುಂಡಿ ದೈವದ ದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬೆಂಕಿ ಸುಡುಮದ್ದು ದಾಸ್ತಾನು ಇರಿಸಿದ್ಧ ಸ್ಥಳಕ್ಕೆ ಬಿದ್ದಿದೆ. ಇದರಿಂದ ಅಲ್ಲಿದ್ದ ಸುಡುಮದ್ದು ಒಮ್ಮೆಲೇ ಸ್ಫೋಟಗೊಂಡಿದ್ದು ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕ್ಷೇತ್ರಕ್ಕೆ ಹೊಂದಿಕೊಂಡಿರುವ ಶೀಟ್‌ ಹಾಸಿದ ಕಟ್ಟಡದಲ್ಲಿ ಪಟಾಕಿ ದಾಸ್ತಾನಿರಿಸಲಾಗಿತ್ತು. ಅದರ ಸಮೀಪದಲ್ಲೇ ಮಹಿಳೆಯರು, ಮಕ್ಕಳ ಸಹಿತ ಸಾವಿರಾರು ಮಂದಿ ಕುಳಿತಿದ್ದರು. ಸುಡುಮದ್ದು ಸ್ಫೋಟಗೊಂಡು ಬೆಂಕಿ ಹರಡಿದ್ದು ಸ್ಫೋಟದ ತೀವ್ರತೆ ಹೆಚ್ಚಲು ಕಾರಣವಾಯಿತು. ದುರಂತದ ತತ್‌ಕ್ಷಣ ಅಗ್ನಿಶಾಮಕ ದಳ, ಪೊಲೀಸರು ಸಹಿತ ಸ್ಥಳೀಯರು ರಕ್ಷಣ ಕಾರ್ಯಾಚರಣೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಇಂಬಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಕಾಂಞಂಗಾಡ್‌ ಡಿವೈಎಸ್‌ಪಿ ಬಾಬು ಪೆರಿಂಙೊàತ್‌, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ ಮೊದಲಾದವರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ನೀಡಿದರು.

ನಿರ್ಲಕ್ಷ್ಯ ದುರಂತಕ್ಕೆ ಕಾರಣ
ಸುಡು ಮದ್ದು ಸ್ಫೋಟ ದುರಂತಕ್ಕೆ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿಲ್ಪಾ ಹೇಳಿದ್ದಾರೆ. ಕನಿಷ್ಠ ಸ್ಥಳದಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವುದು ದುರಂತಕ್ಕೆ ಕಾರಣವಾಯಿತು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

8 ಮಂದಿ ವಿರುದ್ಧ
ಪ್ರಕರಣ ದಾಖಲು
ಸುಡುಮದ್ದು ಸ್ಫೋಟ ದುರಂತಕ್ಕೆ ಸಂಬಂಧಿಸಿ ನೀಲೇಶ್ವರ ಪೊಲೀಸರು ಎಂಟು ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಈ ಪೈಕಿ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಗು ಕಾರ್ಯದರ್ಶಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳಿಯಾಟ ಮಹೋತ್ಸವದ ಅಂಗವಾಗಿ ಪ್ರತೀ ದೈವಗಳ ದರ್ಶನ ನಡೆಯುತ್ತಿದ್ದಂತೆ ಒಂದೊಂದು ಮಾಲೆ ಪಟಾಕಿ ಸಿಡಿಸುವುದು ಇಲ್ಲಿನ ಕ್ರಮವಾಗಿದೆಯೆಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಹೀಗೆ ಸಿಡಿಸಲು ಇರಿಸಿದ್ದ ಪಟಾಕಿಗಳ ದಾಸ್ತಾನು ಮೇಲೆ ಬೆಂಕಿ ತಗಲಿರುವುದೇ ದುರಂತಕ್ಕೆ ಕಾರಣವೆಂದು ಅವರು ತಿಳಿಸಿದ್ದಾರೆ.

ಕಳಿಯಾಟ ವೀಕ್ಷಿಸಲು ಸೇರಿದ ಜನರು 5000 ಕ್ಕೂ ಹೆಚ್ಚು
ಕಳಿಯಾಟ ವೀಕ್ಷಿಸಲು 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆಂದು ಅಂದಾಜಿಸಲಾಗಿದೆ. ದೈವಸ್ಥಾನದ ಅಂಗಳ ಹಾಗು ಪರಿಸರ ಪ್ರದೇಶಗಳಲ್ಲಾಗಿ ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಮಂದಿ ನೆರೆದಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಸ್ಫೋಟ ಸದ್ದು ಕೇಳಿದಾಗ ಮೊದಲು ಅದು ಪಟಾಕಿ ಸಿಡಿಸಿರುವುದಾಗಿ ನಂಬಿದ್ದರು. ಆದ್ದರಿಂದ ಯಾರೂ ಅಲ್ಲಿಂದ ಕದಲಲಿಲ್ಲ. ಆದರೆ ಅನಂತರ ಭಾರೀ ಪ್ರಮಣದಲ್ಲಿ ಬೆಂಕಿ ಹಾಗೂ ಹೊಗೆ ಹರಡ ತೊಡಗಿದಾಗ ದುರಂತವೆಂಬುದು ಅರಿವಿಗೆ ಬಂದಿದೆ.

VIDEO | Kerala: Over 150 people were injured, including eight seriously, in a fireworks accident during a temple festival near Neeleswaram, #Kasargod, late on Monday. The injured have been taken to various hospitals in Kasargod, Kannur, and Mangaluru.#KeralaNews #Keralapic.twitter.com/jGcrSxi31i

— Press Trust of India (@PTI_News) October 29, 2024

ಇದನ್ನೂ ಓದಿ: Puneeth Rajkumar: ಪರಮಾತ್ಮನಿಲ್ಲದ 3 ವರ್ಷ: ಇಂದು ಪುನೀತ್‌ 3ನೇ ಪುಣ್ಯಸ್ಮರಣೆ

ಸಮಗ್ರ ತನಿಖೆ: ಸಚಿವ ಪಿ.ರಾಜೀವ್‌
ಕಾಸರಗೋಡು: ನೀಲೇಶ್ವರ ವೀರರ್‌ಕಾವು ಕಳಿಯಾಟ ಮಹೋತ್ಸವದಲ್ಲಿ ಸುಡು ಮದ್ದು ದುರಂತ ಸಂಬಂಧ ಸಮಗ್ರ ತನಿಖೆ ನಡೆಸುವುದಾಗಿ ಕೈಗಾರಿಕಾ ಖಾತೆ ಸಚಿವ ಪಿ. ರಾಜೀವ್‌ ಹೇಳಿದರು.

ತನಿಖಾ ವರದಿಯ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸುಡುಮದ್ದು ಪ್ರಯೋಗ ಸಂದರ್ಭದಲ್ಲಿ ಪ್ರಸ್ತುತ ಇರುವ ಎಲ್ಲ ಮಾನದಂಡಗಳನ್ನು ಪಾಲಿಸಬೇಕೆಂದು ಸಚಿವರು ತಿಳಿಸಿದರು. ದುರಂತ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಾಲ್ವರು ಮಕ್ಕಳು ಸಹಿತ 30ಕ್ಕೂ ಅಧಿಕ
ಮಂದಿಗೆ ಮಂಗಳೂರಿನಲ್ಲಿ ಚಿಕಿತ್ಸೆ
ಮಂಗಳೂರು: ಕಾಸರಗೋಡಿನ ನೀಲೇಶ್ವರಂ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಸೋಮವಾರ ತಡರಾತ್ರಿ ಪಟಾಕಿ ನ್ಪೋಟದಲ್ಲಿ ಗಾಯಗೊಂಡವರ ಪೈಕಿ 30ಕ್ಕೂ ಅಧಿಕ ಮಂದಿ ಮಂಗಳೂರಿನ ಎ.ಜೆ.ಆಸ್ಪತ್ರೆ ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ.ಎ.ಜೆ ಆಸ್ಪತ್ರೆಯಲ್ಲಿ ಮಂಗಳವಾರ ಮುಂಜಾವ 21 ಮಂದಿಯನ್ನು ದಾಖಲಿಸಲಾಗಿತ್ತು. ಅನಂತರ ಮತ್ತೆ 6 ಮಂದಿಯನ್ನು ದಾಖಲಿಸಲಾಗಿದೆ. ಇದರಲ್ಲಿ ನಾಲ್ವರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ಈ ಪೈಕಿ 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.35ರಿಂದ 65ರಷ್ಟು ಸುಟ್ಟ ಗಾಯಗಳೊಂದಿಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸೋಮವಾರ ಸಂಜೆ ತಿಳಿಸಿದ್ದಾರೆ.

ಶೆಡ್‌ನೊಳಗೆ ಸ್ಫೋಟ: ಪ್ರಧಾನ ಉತ್ಸವ ಇದಾಗಿದ್ದು ಎರಡು ದಿನಗಳ ಕಾಲ ಆಯೋಜನೆಯಾಗಿತ್ತು. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಉತ್ಸವದ ಸಂದರ್ಭ ಪಟಾಕಿ ದುರ್ಘ‌ಟನೆ ಸಂಭವಿಸಿದೆ. ಜನರು ನಿಲ್ಲುವುದಕ್ಕಾಗಿ ಮಾಡಲಾಗಿದ್ದ ಶೆಡ್‌ನ‌ಲ್ಲಿಯೇ ನ್ಪೋಟವಾದ ಕಾರಣದಿಂದ ತುಂಬಾ ಜನರಿಗೆ ತೀವ್ರಸ್ವರೂಪದ ಗಾಯಗಳಾಗಿವೆ.
– ರವಿ, ಪ್ರತ್ಯಕ್ಷದರ್ಶಿ

ಬದುಕನ್ನು ಕತ್ತಲಾಗಿಸಿದ ಪಟಾಕಿ
17 ವರ್ಷದ ಧನುಷ್‌ ನೀಲೇಶ್ವರದ ಕೈಗಾರಿಕಾ ತರಬೇತಿ ಸಂಸ್ಥೆಯೊಂದರ ವಿದ್ಯಾರ್ಥಿ. ಆತನ ದೇಹದ ಶೇ 50 ರಷ್ಟು ಭಾಗಗಳು ಸುಟ್ಟುಹೋಗಿವೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

“ಧನುಷ್‌ ಸೋಮವಾರ ರಾತ್ರಿ ಗೆಳೆಯರ ಜೊತೆ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತೆರಳಿದ್ದ. ಮಧ್ಯರಾತ್ರಿ ಸಂಭವಿಸಿದ ಪಟಾಕಿ ದುರಂತದ ಸುದ್ದಿ ಕೇಳಿ ನಮಗೆ ನಿಂತ ನೆಲವೇ ಅಲುಗಿದಂತಾಗಿತು. ನಾವು ರಾತ್ರೋ ರಾತ್ರಿ ಧಾವಿಸಿ ನೋಡಿದರೆ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಮೀಪದ ಊರುಗಳ ಆಸ್ಪತ್ರೆಗಳ ಸುಟ್ಟ ಗಾಯಗಳ ವಾರ್ಡ್‌ಗಳೆಲ್ಲ ಭರ್ತಿಯಾಗಿದ್ದವು. ಆತನ ಎದೆ, ಮುಖ, ಭುಜ, ಹೊಟ್ಟೆ ಹಾಗೂ ಕೈಗಳು ಸುಟ್ಟಿವೆ. ಶೇ 50ಕ್ಕಿಂತಲೂ ಹೆಚ್ಚು ಗಾಯಗೊಂಡ ಆತನನ್ನು ಇಲ್ಲಿಗೆ ಕರೆ ತರಬೇಕಾಯಿತು’ ಎಂದು ಆತನ ಚಿಕ್ಕಪ್ಪ ಬಿಜು ತಿಳಿಸಿದ್ದಾರೆ.

ನೀಲೇಶ್ವರ ಗ್ರಾಮದ ಥೈಕದಪುರಂನ ಅನೂಪ್‌ ಕೆ. ಅವರ ಎರಡೂ ಕಾಲುಗಳು, ಕೈಗಳು, ಭುಜ ಹಾಗೂ ಬೆನ್ನು ಪಟಾಕಿ ದುರಂತದಲ್ಲಿ ಸುಟ್ಟುಹೋಗಿವೆ. ಕೇರಳದ 916 ತೆಂಗಿನೆಣ್ಣೆ ಕಂಪೆನಿಯ ಮಾರಾಟ ಪ್ರತಿನಿಧಿಯಾಗಿದ್ದ ಅವರು ಈಚೆಗಷ್ಟೆ ಮದುವೆಯಾಗಿದ್ದರು.

ಚೆರ್ವತ್ತೂರು ಗ್ರಾಮದ ತುರುತ್ತಿ ಅಂಜಿಲ್‌ ಹೌಸ್‌ನ ಅತುಲ್‌ ಬಾಬು ಕೆ.ವಿ. ಕಾಫಿಹೌಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮುಖ, ಎದೆಭಾಗ ಹಾಗೂ ಕೈಗಳು ಸುಟ್ಟುಹೋಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.

ನೀಲೇಶ್ವರ ದೈವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಯಾವತ್ತೂ ಈ ರೀತಿಯ ದುರಂತ ಸಂಭವಿಸಿರಲಿಲ್ಲ. ಈ ದುರಂತವನ್ನು ನೆನಪಿಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ನನ್ನ ಅಣ್ಣನಿಗೆ ಆದುಲ್‌ ಒಬ್ಬನೇ ಮಗ. ಐಸಿಯುವಿನಲ್ಲಿ ಮಲಗಿರುವ ಆತನ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ’ ಎಂದು ಚೆರ್ವತ್ತೂರಿನ ಅಜಯ್‌ ಕುಮಾರ್‌ ಹೇಳಿದರು.

ಟಾಪ್ ನ್ಯೂಸ್

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil-Nadu-Rain

Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ

Ayodhya: Ram temple inauguration celebrations to be held on January 11 instead of January 22!

Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.