Urwa: ಫುಟ್ಪಾತ್ನಲ್ಲಿ ಬಾಯ್ದೆರೆದಿದೆ ಚೇಂಬರ್!
Team Udayavani, Oct 29, 2024, 3:48 PM IST
ಉರ್ವ: ಇಲ್ಲಿನ ಉರ್ವ ಮಾರು ಕಟ್ಟೆ ವೃತ್ತದಿಂದ ಲೇಡಿಹಿಲ್ ನಾರಾಯಣ ಗುರು ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ಎಡಬದಿಯಲ್ಲಿ ಫುಟ್ಪಾತ್ ನಿರ್ಮಾಣದ ಉದ್ದೇಶಕ್ಕೆ ಕಾಂಕ್ರೀಟ್ ಚೇಂಬರ್ಗಳನ್ನು ರಚಿಸಲಾಗಿದೆ. ಉರ್ವ ಮಾರಿಗುಡಿ ಕಡೆಗೆ ತೆರಳುವ ದ್ವಾರದ ಬದಿಯಲ್ಲೇ ಈ ಫುಟ್ಪಾತ್ ಚೇಂಬರ್ಗಳಿವೆ.
ಪ್ರಸ್ತುತ ಫುಟ್ಪಾತ್ ಕಾಮಗಾರಿ ನಡೆಯು ತ್ತಿದ್ದು, ಇವುಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚದಿರುವ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಯಾರಾದರೂ ನಡೆದುಕೊಂಡು ಹೋಗುವಾಗ ಈ ಬಾಯಿ ತೆರೆದ ಚೇಂಬರ್ಗಳು ಗಮನಕ್ಕೆ ಬಾರದೆ ಒಳಗೆ ಬಿದ್ದು ಅಪಾಯ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಕನಿಷ್ಟ ಮರದ ಹಲಗೆಗಳನ್ನು ಇರಿಸಿಯಾದರೂ ಚೇಂಬರನ್ನು ಮುಚ್ಚುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜತೆಗೆ ಫುಟ್ಪಾತ್ ಕಾಮಗಾರಿಯಲ್ಲಿ ಶೀಘ್ರವಾಗಿ ಪೂರ್ಣಗೊಳಿಸಿ ಪಾದಚಾರಿ ಗಳಿಗೆ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು. ಪ್ರಸ್ತುತ ಪ್ರತಿದಿನ ಶಾಲಾ ಮಕ್ಕಳು, ಹಿರಿಯ ನಾಗರಿಕರು ಸಹಿತ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ನಿರಂತರ ವಾಹನ ಸಂಚಾರ ಇರುವುದರಿಂದ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದ ರಿಂದ ಸಂಬಂಧಪಟ್ಟವರು ಈ ವಿಚಾರಗಳನ್ನು ಗಮನದಲ್ಲಿರಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.