Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್ ಸಿಂಹ
ವಕ್ಫ್ ಜಮೀನು ಸೌದಿ ಅರೇಬಿಯಾದಿಂದ ಬಳುವಳಿಯಾಗಿ ಬಂದಿದ್ದಾ? ಆ ಆಸ್ತಿಯಲ್ಲಿ ಮುಸಲ್ಮಾನರಿಗೆ ಕೃಷಿಗೆ ಅವಕಾಶ ಕೊಟ್ಟಿದ್ದಿರಾ?: ಮಾಜಿ ಸಂಸದ
Team Udayavani, Oct 29, 2024, 5:19 PM IST
ಮೈಸೂರು: ವಕ್ಫ್ ಆಸ್ತಿ ಅಂದರೇನು? ಎಲ್ಲಿಂದ ಬಂತು? ಮುಸ್ಲಿಮರಿಗೆ ಯಾರಿಂದ ಬಂತು? ಸೌದಿ ಅರೇಬಿಯಾದ ಯಾವುದೋ ಮುಲ್ಲಾ, ಮೌಲ್ವಿ ಅಥವಾ ಇಮಾಮ್ ನಿಂದ ನಿಮಗೆ ಬಳುವಳಿಯಾಗಿ ಬಂದಿದ್ದಾ? ಅಥವಾ ಅಕ್ಬರ್, ಜಹಾಂಗೀರ್, ಔರಂಗಜೇಬ ನಿಮಗೆ ಬಿಟ್ಟುಹೋಗಿರುವ ಆಸ್ತಿಯಾ? ಅಥವಾ ಜಿನ್ನಾ ನಿಮಗಾಗಿ ಭಾರತದಲ್ಲಿ ಬಿಟ್ಟು ಹೋಗಿರುವ ಭೂಮಿನಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿಯಾಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಪ್ರಶ್ನಿಸಿದರು. ಕೇವಲ ವಿಜಯಪುರ ಮಾತ್ರವಲ್ಲ, ಹುಣಸೂರಿನ ಗಣೇಶ ದೇವಸ್ಥಾನದ 17ಎಕರೆ, ಚಿಕ್ಕಮಗಳೂರಿನ ಕೇಂದ್ರ ಪ್ರದೇಶದಲ್ಲಿ ಖಾಸಗಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ವಕ್ಫ್ ಆಸ್ತಿಯಲ್ಲಿ ಏನು ಘನ ಕಾರ್ಯ ಮಾಡಿದ್ದೀರಿ?
ರಾಜ್ಯದಲ್ಲಿನ 1.25 ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡ್ತಾರೆ, ಇದು ನಮ್ಮದು ಅಂತಿದ್ದಾರೆ. ವಕ್ಫ್ ಬೋರ್ಡ್ ಜಮೀನಿನಲ್ಲಿ ಏನು ಘನ ಕಾರ್ಯ ಮಾಡಿದ್ದೀರಿ. ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ? ಅಥವಾ ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ, ಚರ್ಚ್ ಗಳಲ್ಲಿ ಹಿಡಿ ಅನ್ನ ಯಾರಿಗಾದ್ರೂ ಹಾಕಿದ್ದೀರಾ? ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಂದೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಕಾಯ್ದೆಯ ತಿದ್ದುಪಡಿ ಮಾಡದೇ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಇದು ವಿಜಯಪುರ ಒಂದರ ಕಥೆಯಲ್ಲ. ನಮ್ಮ ಹುಣಸೂರಿನ ಕಟ್ಟೆಮಳವಾಡಿಯ ಗಣೇಶ ದೇವಸ್ಥಾನದ 17 ಎಕರೆ ಜಮೀನೂ ವಕ್ಫ್ ಅಸ್ತಿ ಎಂದು ಕಬಳಿಸಲು ಬಂದಿದ್ದೀರಿ? ಚಿಕ್ಕಮಗಳೂರಿನ ಆರ್. ಜಿ. ರೋಡ್ನಲ್ಲಿರುವ ಕಮಲಮ್ಮನ 3 ಎಕರೆ ಜಮೀನು ಹೊಡೆದುಕೊಳ್ಳಲು ಹೈ ಕೋರ್ಟ್ ಗೆ ಹೋಗಿದ್ದೀರಿ? pic.twitter.com/FUlZAVlDie
— Prathap Simha (@mepratap) October 29, 2024
ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ನಂತರ ಚಾಮುಂಡೇಶ್ವರಿ, ಹಾಸನಾಂಬೆ ಸೇರಿದಂತೆ ಹಿಂದೂ ದೇವತೆಗಳ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ವಿಜಯಪುರ ವಿಚಾರದಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಬೇಡಿ ಎಂದು ಪ್ರತಾಪ ಸಿಂಹ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ
Earthquake; ತೆಲಂಗಾಣದ ಮುಲುಗುವಿನಲ್ಲಿ ಭೂಕಂಪನ: 5.3 ತೀವ್ರತೆ
Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್ ಪ್ರಥಮ ಹೇಳಿಕೆ
MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ
Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.