Fruad ಶಿರ್ವ: ವಾಟ್ಸಪ್ ವೀಡಿಯೋ ಮೂಲಕ ಬೆದರಿಸಿ ಲಕ್ಷಾಂತರ ರೂ. ವಂಚನೆ
Team Udayavani, Oct 29, 2024, 5:50 PM IST
ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವರಿಗೆ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಸ್ಕೈಫ್ ಆಫ್ ಕನೆಕ್ಟ್, ವಾಟ್ಸ್ ಆಪ್ ವೀಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ರೂ. 11,87,463 ಹಣವನ್ನು ಮೋಸದಿಂದ ವಂಚಿಸಿದ ಘಟನೆ ಅ. 25 ರಂದು ನಡೆದಿದೆ.
ಪ್ರಮೀಳಾ (39) ಅವರ ಮನೆಯಲ್ಲಿರುವಾಗ ಅ. 25 ರಂದು ಬೆಳಗ್ಗೆ ಓರ್ವ ವ್ಯಕ್ತಿ ಕರೆಮಾಡಿ ವಾಂಗ್ ಮಿಂಗ್ ಜಿ ಎಂಬವರು ನಿಮ್ಮ ಹೆಸರಿಗೆ ಪಾರ್ಸೆಲ್ ಕಳುಹಿಸಿದ್ದು ಅದರಲ್ಲಿ 5 ಕೆಜಿ ಬಟ್ಟೆ, 8 ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು 700 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ ಎಂದು ತಿಳಿಸಿ ನಿಮ್ಮ ಮೇಲೆ ಕೇಸು ದಾಖಲಾಗಿರುವುದಾಗಿ ತಿಳಿಸಿದ್ದಾನೆ.
ಕರೆ ಮಾಡಿದ ವ್ಯಕ್ತಿ ತಾನು ಮುಂಬೈ DTDC ಸೀನಿಯರ್ ಎಕ್ಸಿಕ್ಯೂಟಿವ್ ಮನೀಶ್ ಕುಮಾರ್ಎಂದು ಪರಿಚಯಿಸಿಕೊಂಡು ಸ್ಕೈಫ್ ವಿಡಿಯೋ ಕಾಲ್ಗೆ ಕನೆಕ್ಟ್ ಆಗುವಂತೆ ತಿಳಿಸಿ, ಬಾಂಬೆ ಸೈಬರ್ ಕ್ರೈಂ ಬ್ರಾಂಚ್ಗೆ ಕಾಲ್ ಕನೆಕ್ಟ್ ಮಾಡಿರುವುದಾಗಿ ತಿಳಿಸಿದ್ದಾನೆ. ಪ್ಲೇಸ್ಟೋರ್ನಲ್ಲಿ ಸ್ಕೈಫ್ ಆಫ್ ಡೌನ್ಲೋಡ್ ಮಾಡಿ [email protected] ಲಿಂಕ್ ಸರ್ಚ್ ಮಾಡುವಂತೆ ತಿಳಿಸಿದ್ದಾನೆ. ವೀಡಿಯೋ ಕಾಲ್ನಲ್ಲಿ ಚಾಟ್ ಮಾಡುತ್ತಾ ಆಧಾರ್ ಕಾರ್ಡ್ ಕೇಳಿದ್ದು, ಪ್ರಮೀಳಾ ಅವರು ಆಧಾರ್ ಕಾರ್ಡ್ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಪ್ರಮೀಳಾ ಅವರ ಹೆಸರು, ವಿಳಾಸ ಹಾಗೂ ಆಧಾರ್ ನಂಬರ್ ಇರುವ ಅರೆಸ್ಟ್ ಆರ್ಡರ್ ಕಳುಹಿಸಿ ಅರೆಸ್ಟ್ ಅರೆಸ್ಟ್ ಎಂದು ಬೆದರಿಸಿದ್ದಾನೆ.
ನಿನ್ನ ಹೆಸರಿನ ಅಕೌಂಟ್ ನಂಬ್ರ ಹಾಗೂ ಅದರಲ್ಲಿ ಎಷ್ಟು ಹಣ ಇದೆ ಎಂದು ಕೇಳಿದಾಗ ಹೆದರಿದ ಮಹಿಳೆ ಅಳುತ್ತಾ ತನ್ನ ಆಕೌಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಆ ವ್ಯಕ್ತಿ ವಾಟ್ಸ್ ಆಪ್ ವಿಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ಮಹಿಳೆಯ ರೂ. 11,87,463 ಹಣವನ್ನು ಮೋಸದಿಂದ ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.