Congress: ಶಾಸಕ ಸೈಲ್‌ಗೆ ಶಿಕ್ಷೆ; ಸ್ಪೀಕರ್ ಕಚೇರಿ ತಲುಪದ ಕೋರ್ಟ್ ಆದೇಶ ಪ್ರತಿ
ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಪ್ರಮಾಣೀಕೃತ ಪ್ರತಿಯ ನಿರೀಕ್ಷೆಯಲ್ಲಿ
Team Udayavani, Oct 30, 2024, 6:35 AM IST
ಬೆಂಗಳೂರು: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿ ಮೂರು ದಿನ ಕಳೆದರೂ ವಿಧಾಸನಭಾಧ್ಯಕ್ಷರ ಕಚೇರಿಗೆ ಅಧಿಕೃತವಾಗಿ ಪ್ರಮಾಣೀಕೃತ ಪ್ರತಿ ಸಿಕ್ಕಿಲ್ಲ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸೇರಿ ವಿವಿಧ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಶನಿವಾರವೇ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿತ್ತು. ಆ ಕ್ಷಣದಿಂದಲೇ ಅವರ ಶಾಸಕ ಸ್ಥಾನವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅನರ್ಹಗೊಳಿಸಿ ಅಧಿಸೂಚಿಸಬೇಕಿದ್ದು, ಅದಕ್ಕೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿರುವ ಬಗ್ಗೆ ಪ್ರಮಾಣೀಕೃತ ಪ್ರತಿ ತಲುಪಬೇಕು. ಆದರೆ ಈ ವರೆಗೆ ಕೋರ್ಟ್ ಕಾಪಿ ತಲುಪಿಲ್ಲ.
ಲೋಕಸಭೆ ಅಧಿಕಾರಿಗಳ ಮೊರೆ ಹೋಗುವ ಸಾಧ್ಯತೆ?
ಸೋಮವಾರ ಸ್ಪೀಕರ್ ಕಚೇರಿಯನ್ನು ಖುದ್ದು ಸಂಪರ್ಕಿಸಿರುವ ಸಂಬಂಧಿಸಿದ ಠಾಣೆಯ ಪೊಲೀಸ್ ಅಧಿಕಾರಿಗಳು, ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿರುವ ಮಾಹಿತಿ ನೀಡಿದ್ದಾರೆ. ಪ್ರಮಾಣೀಕೃತ ಪ್ರತಿಗಾಗಿ ಸ್ಪೀಕರ್ ಕಚೇರಿ ಕಾಯುತ್ತಿದ್ದು, ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಕ್ರಮ ಜರುಗಿಸಬೇಕಿರುವುದರಿಂದ ಲೋಕಸಭೆ ಕಾರ್ಯದರ್ಶಿ ಸೇರಿ ವಿವಿಧ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಲು ರಾಜ್ಯ ವಿಧಾನಸಭೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಶಿಕ್ಷೆ ಪ್ರಶ್ನಿಸಿ ಸತೀಶ್ ಸೈಲ್ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳೂ ಇದ್ದು, ಒಂದು ವೇಳೆ ಶಿಕ್ಷೆಗೆ ತಡೆಯಾಜ್ಞೆ ಸಿಕ್ಕರೆ ಶಾಸಕ ಸ್ಥಾನ ಅನರ್ಹಗೊಳ್ಳುವುದಿಲ್ಲ. ಅದೆಲ್ಲ ಏನೇ ಇದ್ದರೂ ಒಂದು ವೇಳೆ ಶಾಸಕ ಸ್ಥಾನವನ್ನು ಸ್ಪೀಕರ್ ಅನರ್ಹಗೊಳಿಸಬೇಕಿದ್ದರೆ, ಶಿಕ್ಷೆ ಪ್ರಕಟವಾದ ದಿನಾಂಕದಿಂದಲೇ ಪೂರ್ವಾನ್ವಯ ಆಗುವಂತೆ ಅಧಿಸೂಚಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು
Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!
By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು
Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!
By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.