![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 30, 2024, 12:25 AM IST
ಬ್ರಹ್ಮಾವರ: ಇಲ್ಲಿನ ಪಾಸ್‌ಪೋರ್ಟ್ ಕಚೇರಿಯ ಸಮಸ್ಯೆ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಲ್ಲಿಗೆ ಮತ್ತು ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಿಬಂದಿ ಅವರೊಂದಿಗೆ ಸಮಸ್ಯೆಯ ಬಗ್ಗೆ ಚರ್ಚಿಸಿ, ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆ ನೀಡಿದರು.
ಪಾಸ್‌ಪೋರ್ಟ್ ಕಚೇರಿಯಲ್ಲಿ ಅರ್ಜಿ ಪರಿಶೀಲನ ಅ ಧಿಕಾರಿ ಹುದ್ದೆ ಖಾಲಿ ಇದ್ದು, ಅರ್ಜಿದಾರರಿಗೆ ಸಮಸ್ಯೆ ಉಂಟಾಗಿದೆ. ಅರ್ಜಿ ಪರಿಶೀಲನೆಗೆ ಬೆಂಗಳೂರಿಗೆ ಕಳಿಸಿ ಅಲ್ಲಿಂದ ಪರಿಶೀಲನೆ ಆಗಿ ಪಾಸ್‌ಪೋರ್ಟ್ ಬರುವಾಗ ವಿಳಂಬವಾಗುತ್ತಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರಲ್ಲದೇ ಬ್ರಹ್ಮಾವರದಲ್ಲೇ ಚಿಕ್ಕ ಚಿಕ್ಕ ಕೊರತೆ ಸರಿಪಡಿಸಿಕೊಂಡು ಪೂರ್ಣಪ್ರಮಾಣದ ಸುಸಜ್ಜಿತ ಪಾಸ್‌ಪೋರ್ಟ್ ಕಚೇರಿ ತೆರೆಯುವ ಆಶಯ ಇದೆ ಎಂದರು.
ಅಂಚೆ ಕಚೇರಿಯಲ್ಲಿ ಸಿಗುವ ಸುಕನ್ಯಾ ಸಮೃದ್ಧಿ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಪಾಸ್‌ಪೋರ್ಟ್ ಕಚೇರಿಯ ಪೂರ್ಣಿಮಾ, ಪೋಸ್ಟ್‌ಮಾಸ್ಟರ್ ಬಿ. ಗಾಯತ್ರಿ, ಸಹಾಯಕ ಅಂಚೆ ಅಧಿಕಾರಿ ವಸಂತ್, ಅಂಚೆ ನಿರೀಕ್ಷಕ ಶಂಕರ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.