Waqf: “ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದಿದ್ಯಾರು?”: ಪ್ರಿಯಾಂಕ್ ಖರ್ಗೆ
ಈ ಹಿಂದೆ ಮಾಡಿರುವುದೆಲ್ಲ ಓಲೈಕೆ ರಾಜಕಾರಣ ಅಲ್ಲವೇ?: ಸಚಿವ ವಾಗ್ಧಾಳಿ
Team Udayavani, Oct 30, 2024, 12:58 AM IST
ಬೆಂಗಳೂರು: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಕೆಲವು ವರ್ಷಗಳ ಹಿಂದೆ ಹೇಳಿದವರು ಯಾರು? ಅಷ್ಟೇ ಅಲ್ಲ, ಒಂದು ವರ್ಷದ ಹಿಂದೆ ಇದೇ ಆರೆಸ್ಸೆಸ್ ಬಗ್ಗೆ ತಾವು ಏನೇನು ಮಾತನಾಡಿದ್ದೀರಿ? ಬಹುಶಃ ತಮಗೆ ಮರೆತು ಹೋಗಿರಬಹುದು’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ವಕ್ಫ್ ಆಸ್ತಿ ವಿಚಾರದಲ್ಲಿ ಪ್ರತಿ ಬಾರಿ ರಾಜ್ಯ ಸರಕಾರ ಓಲೈಕೆ ಮಾಡುತ್ತದೆ. ಆ ನೆಪದಲ್ಲಿ ಲೂಟಿ ಮಾಡುವವರಿಗೆ ಬೆಂಬಲ ನೀಡುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಲಾಭ ಪಡೆಯಲು ಅವರು (ಕುಮಾರಸ್ವಾಮಿ) ಓಲೈಕೆ ರಾಜಕಾರಣ ಮಾಡುತ್ತ ಬಂದಿದ್ದಾರೆ. ಈಗ ಓಲೈಕೆ ರಾಜಕಾರಣ ಅನ್ನುತ್ತಿರುವ ಕುಮಾರಸ್ವಾಮಿ ಅವರಿಗೆ ಹಿಂದಿನದೆಲ್ಲ ಮರೆತಂತಿದೆ. ಈ ಹಿಂದೆ ಮಾಡಿರುವುದೆಲ್ಲ ಓಲೈಕೆ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು.
ಅಂದು ನೀವು ಮಾಡಿದ್ದೇನು?
ನೀವೂ ಅವರೊಂದಿಗೆ ಕೈಜೋಡಿಸಿದಾಗ ಕುಮಾರಸ್ವಾಮಿ ಅವರನ್ನು ಹೊಗಳಿರಲಿಲ್ಲವೇ ಎಂದು ಕೇಳಿದಾಗ, ರಾಜಕಾರಣದಲ್ಲಿ ಸಹಜ ಒಪ್ಪಿಕೊಳ್ಳೋಣ. ಆದರೆ ನಮ್ಮ ತತ್ವ ಸಾಮಾನ್ಯವಾಗಿಯೇ ಇರುತ್ತದೆ. ಅದರಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಅಂದೂ ನಾನು ಆರೆಸ್ಸೆಸ್ ವಿರೋಧಿ ಇಂದೂ ವಿರೋಧಿಸುತ್ತೇನೆ. ಕುರ್ಚಿ ಕೊಟ್ಟ ತತ್‌ಕ್ಷಣ ಜಾತ್ಯತೀತ ಹಾಗೂ ಕುರ್ಚಿ ಕಸಿದುಕೊಂಡ ತತ್‌ಕ್ಷಣ ಕೋಮುವಾದಿ ಆಗುವುದು ಎಷ್ಟು ಸರಿ? ಇದು ನನಗೆ ಅರ್ಥವಾಗುತ್ತಿಲ್ಲ’ ಎಂದು ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.