Animal Husbandry Census: ಆ್ಯಪ್‌ ಮೂಲಕ ಜಾನುವಾರು ಗಣತಿ ಆರಂಭ: ಮುಖ್ಯಮಂತ್ರಿ

ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಿ ಸಿದ್ದರಾಮಯ್ಯ ಚಾಲನೆ

Team Udayavani, Oct 30, 2024, 7:00 AM IST

CM-Cow

ಬೆಂಗಳೂರು: ರಾಜ್ಯದಲ್ಲಿರುವ ಜಾನುವಾರುಗಳನ್ನು ಗಣತಿ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದ್ದು, 2025ರ ಫೆ. 28ರ ವರೆಗೆ ಗಣತಿ ಕಾರ್ಯ ನಡೆಯಲಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಿದ ಸಿದ್ದರಾಮಯ್ಯ, ಕುರಿಗಳನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಮೊಬೈಲ್‌ ಆ್ಯಪ್‌ ಮೂಲಕ ಜಾನುವಾರು ಗಣತಿಗೆ ಚಾಲನೆ ನೀಡಿದರು. ಕೇಂದ್ರ ಸಚಿವ ರಾಜೀವ್‌ ರಂಜನ್‌ ಸಿಂಗ್‌ ಅವರು ಇತ್ತೀಚೆಗಷ್ಟೇ ರಾಷ್ಟ್ರಮಟ್ಟದ 21ನೇ ಜಾನುವಾರು ಗಣತಿಗೆ ಚಾಲನೆ ನೀಡಿದ್ದು, ಅದರ ಅಂಗವಾಗಿ ರಾಜ್ಯದಲ್ಲಿಯೂ ಜಾನುವಾರು ಗಣತಿ ಪ್ರಕ್ರಿಯೆ ನಡೆಯಲಿದೆ. 1919ರಿಂದ ಪ್ರತೀ 5 ವರ್ಷಗಳಿ ಗೊಮ್ಮೆ ಜಾನುವಾರು ಗಣತಿ ನಡೆಸಿಕೊಂಡು ಬರಲಾಗುತ್ತಿದ್ದು, ವನ್ಯಜೀವಿಗಳನ್ನು ಹೊರತುಪಡಿಸಿ ಕೃಷಿ, ಹೈನುಗಾರಿಕೆ ಇತ್ಯಾದಿ ಜೀವನೋಪಾಯ ಕ್ಕಾಗಿ ಸಾಕುವ ಜಾನುವಾರು, ಸಾಕು ಪ್ರಾಣಿ, ಕುಕ್ಕುಟ ಸಂಕುಲಗಳ ಗಣತಿ ಕಾರ್ಯ ಇದರಡಿ ನಡೆಯಲಿದೆ.

3.03 ಕೋಟಿ ಜಾನುವಾರು, 5.02 ಕೋಟಿ ಕುಕ್ಕುಟ
ದೇಶದ ಜಿಡಿಪಿಗೆ ಶೇ. 4.41ರಷ್ಟು ಹಾಗೂ ರಾಜ್ಯದ ಜಿಎಸ್‌ಡಿಪಿಗೆ ಶೇ. 3.65ರಷ್ಟು ಕೊಡುಗೆಯನ್ನು ಜಾನುವಾರು, ಕುಕ್ಕುಟೋದ್ಯಮ ನೀಡುತ್ತಿದೆ. ಕಳೆದ ಬಾರಿ ಅಂದರೆ 2019ರಲ್ಲಿ ನಡೆದಿದ್ದ ಜಾನುವಾರು ಗಣತಿಯಲ್ಲಿ 1.73 ಕೋಟಿ ಕುರಿ, ಮೇಕೆ ಸೇರಿ ಒಟ್ಟು 3.03 ಕೋಟಿ ಜಾನುವಾರು ಹಾಗೂ 5.02 ಕೋಟಿ ಕುಕ್ಕುಟ ಸಂಕುಲಗಳನ್ನು ಗಣತಿ ಮಾಡಲಾಗಿತ್ತು. ಇದು ರಾಷ್ಟ್ರ ಮಟ್ಟದ 21ನೇ ಜಾನುವಾರು ಗಣತಿಯಾಗಿದ್ದು, ರಾಜ್ಯದ ಅಂಕಿ-ಅಂಶಗಳನ್ನೂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.

ಯಾವ್ಯಾವ ಪ್ರಾಣಿಗಳ ಗಣತಿ?
ಹಸು, ಎತ್ತು, ಎಮ್ಮೆ, ಕೋಣ, ಕುರಿ, ಮೇಕೆ, ಹಂದಿ, ಕುದುರೆ, ಕತ್ತೆ, ನಾಯಿ, ಮೊಲ, ಆನೆ ಸೇರಿ ಜಾನುವಾರುಗಳ ಗಣತಿ ನಡೆಯಲಿದ್ದು, ಕೋಳಿ, ಬಾತುಕೋಳಿ, ಕಾಡುಕೋಳಿ, ಹೆಬ್ಟಾತು, ಟರ್ಕಿ, ಆಸ್ಟ್ರಿಚ್‌, ಎಮು ಸೇರಿ ಕುಕ್ಕುಟಗಳ ಗಣತಿಯೂ ನಡೆಯಲಿದೆ. ಮನೆ ಅಥವಾ ಬೀದಿಯಲ್ಲಿ ಸಾಕಿರುವ ನಾಯಿಗಳ ಗಣತಿಯೂ ಈ ವೇಳೆ ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್‌ ಇದ್ದು, ಆ್ಯಂಡ್ರಾಯ್ಡ್‌  ಮೊಬೈಲ್‌ ಅಥವಾ ಟ್ಯಾಬ್‌ ಮೂಲಕ ಗಣತಿದಾರರು ನಿಗದಿತ ನಮೂನೆಯಲ್ಲಿ ಗಣತಿ ಮಾಹಿತಿಯನ್ನು ನಮೂದಿಸಲಿದ್ದಾರೆ.

ಯಾವೆಲ್ಲಾ ಮಾಹಿತಿ ಕಲೆ ಹಾಕಲಾಗುತ್ತದೆ?
ರಾಜ್ಯದಲ್ಲಿ ಒಟ್ಟು 3,243 ಮಂದಿ ಗಣತಿದಾರರು ಜಾನುವಾರು ಗಣತಿಯಲ್ಲಿ ತೊಡಗಿಕೊಳ್ಳಲಿದ್ದು, 760 ಜನ ಮೇಲ್ವಿಚಾರಕರು ಇರಲಿದ್ದಾರೆ. ಪ್ರತೀ ಮನೆ, ವಸತಿ ಸಮುಚ್ಚಯ, ಕೊಟ್ಟಿಗೆ, ಗೋಶಾಲೆ, ದೊಡ್ಡಿ, ಗೂಡು, ಪಶುವೈದ್ಯ ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿ ಪ್ರಾಣಿ, ಪಕ್ಷಿಗಳ ತಳಿ, ವಯಸ್ಸು, ಲಿಂಗ, ಮಾಲಕತ್ವ ಸೇರಿ ಎಲ್ಲ ರೀತಿಯ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಮೇರೆಗೆ ಕೆಲ ಮಠ, ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದರಿಂದ ಅಲ್ಲಿಗೂ ಭೇಟಿ ನೀಡಿ ಅವುಗಳ ವಿವರವನ್ನೂ ಪಡೆಯಲಾಗುತ್ತದೆ.

ಟಾಪ್ ನ್ಯೂಸ್

Darshan (2)

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

CT RAVI 2

By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ

salman-khan

Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan (2)

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

CT RAVI 2

By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Darshan (2)

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!

Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!

CT RAVI 2

By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ

salman-khan

Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.