Sports; ‘ಟಾಪ್’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?
Team Udayavani, Oct 30, 2024, 7:47 AM IST
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಕೇಂದ್ರ ಸರಕಾರ ಅನುದಾನ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪದಕ ಗೆಲ್ಲುವುದು ಗ್ಯಾರಂಟಿ ಎಂಬ ಹಂತ ತಲುಪಿದವರಿಗೆ ಮಾತ್ರ ಮುಂದಿನದಿನಗಳಲ್ಲಿ ಹಣ ನೀಡಲಾಗುವುದು, ಯೋಜನೆಯ ಲಾಭ ಪಡೆಯುತ್ತಿರುವ ಕ್ರೀಡಾಪಟುಗಳ ಸಂಖ್ಯೆಯನ್ನು ಕಡಿತಗೊಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರದ ಮಿಷನ್ ಒಲಿಂಪಿಕ್ ಸೆಲ್ ನಲ್ಲಿ (MOC) ಚಿಂತನೆ ನಡೆಯುತ್ತಿದೆ. ಆ್ಯತ್ಲೀಟ್ಗಳು,ತರಬೇತುದಾರರು, ಸರಕಾರಿ ಅಧಿಕಾರಿಗಳು, ಆಡಳಿತಗಾರರು ಇರುವ ಉನ್ನತ ಸಮಿತಿ ಇದಾಗಿದೆ.
ಈ ಸಮಿತಿಯ ಪ್ರಕಾರ, ಬರುವ ವಾರಗಳಲ್ಲಿ ಸಭೆ ನಡೆಸಿ ನೂತನ ಆಯ್ಕೆ ಮಾನದಂಡಗಳನ್ನು ರಚಿಸುವ
ಸಾಧ್ಯತೆಯಿದೆ.
ಸದ್ಯ ದೇಶದಲ್ಲಿ ಹತ್ತಿರಹತ್ತಿರ 300 ಆ್ಯತ್ಲೀಟ್ಗಳು ‘ಟಾಪ್’ ಯೋಜನೆಯಿಂದ ನೆರವು ಪಡೆಯುತ್ತಿದ್ದಾರೆ. ಹೊಸ ನಿಯಮ ಜಾರಿಗೆ ಬಂದರೆ ಈ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಕಡಿಮೆಯಾಗಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.